ಬೆಳಗಾವಿ 28: ನಾನಾವಾಡಿಯ ನಿವಾಸಿ ಮುಕುಂದ ಕೃಷ್ಣರಾವ ಕಣಬೂರ ಅವರು ಡಿಸೆಂಬರ್ 25 ರಂದು ನಿಧನರಾದರು.
ಇವರಿಗೆ 76 ವರ್ಷ ವಯಸ್ಸಾಗಿತ್ತು. ಮೂಲತಃ. ವಿಜಾಪುರದವರಾಗಿದ್ದ ಇವರು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ನಿವೃತ್ತರಾಗಿದ್ದರು. ದಿವಂಗತರು ಪತ್ನಿ, ಮಗಳು, ಮಗ, ಅಳಿಯ, ಸೊಸೆ, ಮೊಮ್ಮಕ್ಕಳು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.