ಹುಣಶ್ಯಾಳದಲ್ಲಿ ಸಂಭ್ರಮ ಸಡಗರದಿಂದ ಮೊಹರಂ ಆಚರಣೆ
Muharram celebrations in Hunshyala with much fanfare
ದೇವರಹಿಪ್ಪರಗಿ 07: ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಮೊಹರಂ ಆಚರಣೆ ಮಾಡಲಾಯಿತು. ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಹೆಜ್ಜೆ ಮೇಳ ಹಾಗೂ ಮೊಹರಂ ಹಬ್ಬದ ಹಾಡುಗಳನ್ನು ಹಾಡಿ ಗಮನ ಸೆಳೆಯಲಾಯಿತು.
ಹಬ್ಬದ ನಿಮಿತ್ತ ರಾತ್ರಿ ಇಡೀ ಕಾಲಿಗೆ ಗೆಜ್ಜೆ ಹಾಕಿ ಹಾಡುತ್ತ ಕುಣಿಯುತ್ತಾ ಭಜನೆ ಮಾಡುವುದು ಇಲ್ಲಿನ ವಿಶೇಷ. ಜಾನಪದ ಗೀತೆ, ಸಂಸ್ಕೃತ ಹೆಜ್ಜೆ ಮೇಳ ಸಹ ನಡೆಸಲಾಗುತ್ತದೆ. ನಂತರ ಅಗ್ನಿ ಕೆಂಡದಲ್ಲಿ ಹಾಯ್ದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಇಲ್ಲದೆ ಈ ಹಬ್ಬವನ್ನು ಆಚರಿಸುತ್ತಾರೆ. ಗ್ರಾಮದ ಎರಡು ಕಡೆ ಅಗಸಿಗಳಲ್ಲಿ ಅಲಾಯಿ ದೇವರು ಪ್ರತಿಷ್ಠಾಪಿಸಿ ಪ್ರತಿ ವರ್ಷದಂತೆ ಹಿಂದೂ ಮುಸ್ಲಿಂ ಸಮುದಾಯದವರು ಸೇರಿ ಭಾವೈಕ್ಯದಿಂದ ಗಂಧ ರಾತ್ರಿ, ಕತ್ತಲ್ ರಾತ್ರಿ, ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ಸೇರಿದಂತೆ ಮೊಹರಂ ಹಬ್ಬ ಆಚರಿಸುತ್ತಾರೆ. ಅಲಾಯಿ ದೇವರ ಪಂಜಾಗಳನ್ನು ಹಾಗೂ ಡೋಲಿ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಂಪ್ರದಾಯದಂತೆ ಕೋಲು ಹಿಡಿದು ಹೆಜ್ಜೆ ಹಾಕಿ ಭಕ್ತಿ ಮೆರೆಯುವ ಮೂಲಕ ಮೂಲಕ ಮೊಹರಂ ಹಬ್ಬ ಸಂಪನ ಗೊಳಿಸಲಾಯಿತು.
ಸರ್ವ ಧರ್ಮದ ಜನರು ಸೇರಿ ಮೊಹರಂ ಹಬ್ಬದಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 