ಮುಧೋಳ ಕಂಠಿ ಕಾಲೇಜಿನ ಬಿ.ಎ 4ನೇ ಸೆಮ್ ಐಚ್ಚಿಕ ವಿಷಯದಲ್ಲಿ ಟಾಪರ್ಸ್‌

ಮುಧೋಳ ಕಂಠಿ ಕಾಲೇಜಿನ ಬಿ.ಎ 4ನೇ ಸೆಮ್ ಐಚ್ಚಿಕ ವಿಷಯದಲ್ಲಿ ಟಾಪರ್ಸ್‌ Mudhol Kanthi College B.A 4th Sem optional subject toppers

ಮುಧೋಳ ಕಂಠಿ ಕಾಲೇಜಿನ ಬಿ.ಎ 4ನೇ ಸೆಮ್ ಐಚ್ಚಿಕ ವಿಷಯದಲ್ಲಿ ಟಾಪರ್ಸ್‌ 

ಮುಧೋಳ, 10 ; ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ ಅವರು 2024-25 ನೇ ಸಾಲಿನ ಬಿ.ಎ 4ನೇ ಸೆಮ್ ಗೆ ನಡೆಸಿದ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳದ ಶ್ರೀ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಕಲಾ ವಿಭಾಗದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ 4ನೇ ಸೆಮ್ ಸುದ್ದಿ ಸಂಸ್ಕರಣೆ ಮತ್ತು ಸಂಪಾದನೆ ಐಚ್ಚಿಕ ವಿಷಯದಲ್ಲಿ ರಾಜೇಶ್ವರಿ ಬಿರಡಿ (ಶೇ.84.66), ಚೈತ್ರಾ ಅಂಗಡಿ (ಶೇ.83.34), ಕಿರಣ ಬಡಿಗೇರ (ಶೇ.83.34), ಅನುಪಮಾ ಹೊಸಮನಿ (ಶೇ.82.66), ಕಾವೇರಿ ಧನಗರ (ಶೇ.82), ಸುನಂದಾ ಪರಮೇಶ್ವರ (ಶೇ.82) ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಸ್ಥಾನ ಪಡೆದು ವಿಭಾಗಕ್ಕೆ ಟಾಪರ್ಸ್‌ ರಾಗಿ ಮಹಾವಿದ್ಯಾಲಯಕ್ಕೆ ಮತ್ತು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ಕೀರ್ತಿ ತಂದಿರುವದಕ್ಕೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್‌. ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಕಾಲೇಜು ಗಳ ಪದ ನಿಮಿತ್ಯ ಕಾರ್ಯದರ್ಶಿ ಡಾ.ಎಸ್‌.ಎನ್‌.ಗಾಂವಕರ ಹಾಗೂ ಸದಸ್ಯರು ಮತ್ತು ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ, ಸಹ ಉಪನ್ಯಾಸಕಿ ಶ್ವೇತಾ ಶಿರಬಡಗಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.