ಮುಧೋಳ: ಕಾನೂನು ಅರಿವು-ನೆರವು ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಮುಧೋಳ 20: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ, ತಾಲೂಕಾ ಕಾನೂನು ಸೇವಾ ಸಮಿತಿ, ಮುಧೋಳ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಕವಿ ಚಕ್ರವರ್ತಿ  ರನ್ನ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸರಕು ಸಾಗಾಣಿಕೆ (ಗೂಡ್ಸ್) ಹಾಗೂ ಕನಷ್ಟ್ರಕ್ಸನ್ ಇಕ್ವಿಪಮೆಂಟ್ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕಾರ್ಮಿಕರನ್ನು  ಮತ್ತು ವಿದ್ಯಾರ್ಥಿಗಳನ್ನು  ಪ್ರಯಾಣಿಕರಂತೆ ಸಾಗಿಸುವದನ್ನು ನಿರ್ಭಂದಿಸುವ ಕುರಿತು ದಿ: 18-05-2019 ರಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಭವನ, ಮುಧೋಳದಲ್ಲಿ ಕಾನೂನು ಅರಿವು-ನೆರವು ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ದಿನ ಆಯೋಜಿಸಿರುವ ಜಾಗೃತಿ ಕಾರ್ಯಕ್ರಮಕ್ಕೆ  ಗೌರವಾನ್ವಿತ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಧೀಶರಾದ ಉಮೇಶ ಅತನುರೆ, ಕಾಮರ್ಿಕ ಇಲಾಖೆಯ ಕಾರ್ಮಿಕ  ನಿರೀಕ್ಷಕರಾದ ಅನೀಲ ಬಗಟಿ, ವಕೀಲರ ಸಂಘದ ಅಧ್ಯಕ್ಷರಾದ ಎಸ್.ಪಿ.ಮಾಸರಡ್ಡಿ,ಶ್ರೀ ಕವಿಚಕ್ರವರ್ತಿ ರನ್ನ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದಎನ್.ಎಚ್.ಬೀಳಗಿ, ಅತಿಥಿ ಉಪನ್ಯಾಸಕರಾಗಿ ವಕೀಲರುಗಳಾದ ಎಸ್.ಸಿ.ಉಳ್ಳಾಗಡ್ಡಿ, ಸಿ.ಜಿ.ಮಠಪತಿ, ಹಾಜರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕವಿ ಚಕ್ರವರ್ತಿ ರನ್ನ ವಾಹನ ಚಾಲಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಅಬ್ದುಲ ಮಹಿಬೂಬಸಾಬ ನದಾಫ ವಹಿಸಿಕೊಂಡಿದ್ದರು, ಹಾಗೂ ವಾಹನ ಚಾಲಕರು ಭಾಗವಹಿಸಿದ್ದರು,

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೌರವಾನ್ವಿತ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಧೀಶರಾದ ಉಮೇಶ ಅತನುರೆ ರವರು, ಸರಕು ಸಾಗಾಣಿಕ ಮಾಡುವ ಹಾಗೂ ಕನಷ್ಟ್ರಕ್ಸನ್ ಇಕ್ವಿಪಮೆಂಟ್ ವಾಹನಗಳಲ್ಲಿ ಕಾಮರ್ಿಕರನ್ನು ಮತ್ತು ವಿದ್ಯಾರ್ಥಿಗಳನ್ನು  ಸಾಗಿಸಬಾರದು ಎಂದು ತಿಳಿಸಿದರು. ವಾಹನ ಚಾಲಕರಿಗೆ ವಾಹನದ ವಿಮೆ ಮಾಡಿಸಬೇಕು, ರಸ್ತೆ ನಿಯಮಗಳನ್ನು ಪಾಲಿಸಬೇಕು. ಅಮೂಲ್ಯವಾದ ಜೀವನವು ಮರಳಿ ಬರುವದಿಲ್ಲ, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣ ಮಾಡುವುದರಿಂದ ಅಂತಹ ವಾಹನಗಳು ಅಪಘಾತಕ್ಕೆ ಇಡಾದಾಗ ಮೃತರ ಅವಲಂಬಿತರಿಗೆ ಯಾವುದೇ ವಿಮೆ ದೊರೆಯುವದಿಲ್ಲ. ಇದರಿಂದ ಅಂತಹ ಕುಟುಂಬಗಳು ತೊಂದರೆಗಳಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾದ ಅನಿಲ ಬಗಟಿ ಮಾತನಾಡಿ,ಕಾರ್ಮಿಕ ಇಲಾಖೆಯ ಅಸಂಘಟಿತ ಕಾಮರ್ಿಕ ಸಾಮಾಜಿಕ ಭದ್ರತಾ ಮಂಡಳಿಯಿಂದ ವಾಣಿಜ್ಯ ವಾಹನ ಚಾಲಕರಿಗೆ ಇರುವ ವಿಮಾ ಯೋಜನೆ ಕುರಿತು, ಪ್ರಧಾನಮಂತ್ರಿ ಜೀವನ ಜ್ಯೋತಿ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಕುರಿತು ಮಾಹಿತಿ ನೀಡಿದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಎಸ್.ಸಿ. ಉಳ್ಳಾಗಡ್ಡಿ ಇವರು ಮೋಟಾರ ಸಾರಿಗೆ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಸಿ.ಜಿ. ಮಠಪತಿ ವಕೀಲರು ಇವರು, ವಾಹನದ ವಿಮೆ ಇಲ್ಲದಿದ್ದರೆ ಆಗುವ ಪರಿಣಾಮದ ಕುರಿತು, ಉದಾಹರಣಗೆಯೊಂದಿಗೆ ತಿಳಿಸಿದರು.

    ರಾಚಯ್ಯ ವಸ್ತ್ರದ  ಪ್ರಾರ್ಥನೆಯನ್ನು ಹಾಡಿವುದರ ಮೂಲಕ ಆರಂಭಗೊಂಡ  ಕಾರ್ಯಕ್ರಮದಲ್ಲಿ  ಎನ್.ಎಚ್.ಬೀಳಗಿ ಯವರು ಸ್ವಾಗತಿಸಿದರು. ಕಸಾಪ ಅಧ್ಯಕ್ಷ ಸಂಗಮೇಶ ನಿಲಗುಂದರವರು ಕಾರ್ಯಕ್ರವನ್ನು ನಿರೂಪಿಸಿ, ವಂದಿಸಿದರು.