ಲೋಕದರ್ಶನ ವರದಿ
ಮುದ್ದೇಬಿಹಾಳ 01: ದುಂದು ವೆಚ್ಚ, ಆಡಂಬರದ ಪೂಜೆ, ಮೂಢನಂಬಿಕೆಗಳ ಆಚರಣೆಗಳಿಂದ ಬೇಸತ್ತು ಹೋಗಿದ್ದ ಜನ ಸಾಮಾನ್ಯರು ಅತ್ಯಂತ ಸರಳ ಸತ್ಯ, ಅಹಿಂಸೆಗಳನ್ನು ಪ್ರತಿಪಾದಿಸುತ್ತಿದ್ದ ಜೈನ ಧರ್ಮಕ್ಕೆ ಮನಸೋತರು, ಅದರ ಅನುಯಾಯಿಗಳಾದರು ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಚ್.ಬಿ.ವಾಲಿಕಾರ ಹೇಳಿದರು. ಅವರು ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್ನ ಆಶ್ರಯದಲ್ಲಿ ನಡೆದ ಅರಿಹಂತ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು.
ಜೈನ ಧರ್ಮದ ಮುನಿಗಳು ಸರಳತೆಯನ್ನು ಬೋಧಿಸಿದರು. ಅದರಂತೆಯೇ ನಡೆದುಕೊಂಡರು. ಹೀಗಾಗಿ ಅನೇಕ ರಾಜರು ಜೈನ ಧರ್ಮವನ್ನು ಸ್ವೀಕರಿಸಿ, ಜೈನ ಧರ್ಮದ ಪ್ರಚಾರ ಮಾಡಿದರು. ಹೀಗಾಗಿ ಕಡಿಮೆ ಅವಧಿಯಲ್ಲಿ ಅದು ಜನಪ್ರಿಯವಾಯಿತು ಎಂದವರು ಹೇಳಿದರು. ರಾಜಾಶ್ರಯ ಪಡೆದ ಅನೇಕ ಜೈನಕವಿಗಳು ಕನ್ನಡದಲ್ಲಿಯೇ ಶ್ರೇಷ್ಠ ಸಾಹಿತ್ಯ ರಚಿಸುವ ಮೂಲಕ ಅದರ ಬೆಳವಣಿಗೆಗೆ ಕಾರಣರಾದರು. ಜೈನ ಧರ್ಮೀಯರಾದ ಮಹಾವೀರಾಚಾರ್ಯರು ಗಣಿತಶಾಸ್ತ್ರ ಹಾಗೂ ತರ್ಕಶಾಸ್ತ್ರಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದರು. ಎರಡನೇ ಗೋಷ್ಠಿಯಲ್ಲಿ ಉಪನ್ಯಾಸ ನೀಡದ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪೂರ, ಆದಿಕವಿ ಪಂಪನು ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಕುರಿತು ವಿವರಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರಜ್ಞ ಪ್ರೊ.ಟಿ.ವೆಂಕಟೇಶ ಮಾತನಾಡಿ, ಭಾರತಕ್ಕೆ ಪ್ರಪ್ರಥಮವಾಗಿ ಶೂನ್ಯವನ್ನು ಪರಿಚಯಿಸಿದವರು ಜೈನ ವಿದ್ವಾಂಸರು ಎಂದು ಹೇಳಿದರು.
ವೇದಿಕೆಯಲ್ಲಿ ಅರಿಹಂತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ಸಗರಿ, ಸಾಹಿತಿ ಪ್ರೊ.ಬಿ.ಎಂ.ಹಿರೇಮಠ, ಬಿ.ಸಿ.ಮಠಪತಿ, ಆರ್.ಬಿ.ಬೋರಗಿ, ಎಂ.ಎಸ್.ಬಿದರಿಕೋಟಿ, ಅಪ್ಪಾಸಾಹೇಬ ಮುತ್ತಿನ, ಪ್ರೊ.ಎಸ್.ಎನ್.ಕಂಗಳ, ಬಸವರಾಜ ಯಮನಪ್ಪ ಇಳಗೇರ, ಯಲ್ಲಪ್ಪ ಚಲವಾದಿ, ಪವನ ಚಲವಾದಿ, ಶಾಲಿನಿ ಗೌಡರ, ಜಿನದತ್ತ ಆಲದಿ, ಎಸ್.ಬಿ.ಬಂಗಾರಿ, ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಸೋಮನಗೌಡ ಬಿರಾದಾರ, ಲಲಿತಾ ಸಗರಿ ಇದ್ದರು. ಪಿ.ಎಚ್.ಚಲವಾದಿ ಸ್ವಾಗತಿಸಿದರು, ಹೇಮಾ ಬಿರಾದಾರ ನಿರೂಪಿಸಿದರು, ಜಿ.ಡಿ.ಬಡಿಗೇರ ವಂದಿಸಿದರು.
ಪುರಸಭೆ ಚುನಾವಣೆ ಪ್ರನಾಳಿಕೆ ಶಾಸಕ ಎಂ.ಸಿ.ಮನಗೂಳಿಯಿಂದ ಬಿಡುಗಡೆ