ಮುದ್ದೇಬಿಹಾಳ: ಥ್ರೀ ಡಿ ಭಾವಚಿತ್ರ ಕಾಣಿಕೆ ನೀಡಿ ಗಮನಸೇಳೆದ ನಡಹಳ್ಳಿ

ಲೋಕದರ್ಶನ ವರದಿ

ಮುದ್ದೇಬಿಹಾಳ 06: ಇಲ್ಲಿನ ಆಯುಷ್ ವೈದ್ಯ ಹಾಗೂ ಹವ್ಯಾಸಿ ಚಿತ್ರಕಲಾವಿದ ಡಾ.ಎಂ.ಎಂ.ಅಥಣಿ ಅವರು ಸ್ವತಃ ತಾವೇ ಥ್ರೀ ಡಿ ಟೆಕ್ನಾಲಜಿ ಬಳಸಿ ರಚಿಸಿರುವ ಭಾವಚಿತ್ರವನ್ನು ಇಲ್ಲಿನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ದಾಸೋಹ ನಿಲಯಕ್ಕೆ ಶನಿವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಣಿಕೆಯಾಗಿ ನೀಡಿ ಗಮನಸೆಳೆದಿದ್ದಾರೆ. 

ಈ ಫೋಟೊ ನೇರವಾಗಿ ನೋಡಿದರೆ ಯಡಿಯೂರಪ್ಪ ಅವರು ನಗುಮುಖದಿಂದ ಕೈಮುಗಿದು ನಿಂತಿರುವ, ಎಡಭಾಗಕ್ಕೆ ಹೊರಳಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ನಸು ನಗುತ್ತಿರುವ, ಬಲಭಾಗಕ್ಕೆ ಹೊರಳಿಸಿದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಸುನಗುತ್ತಿರುವ ಚಿತ್ರಗಳು ಕಂಡು ಬರುತ್ತವೆ. ಭಾವಚಿತ್ರವನ್ನು ಪಡೆದು ಅದನ್ನು ತಿರುಗಿಸಿ ನೋಡಿ ಖುಷಿ ಪಟ್ಟ ಯಡಿಯೂರಪ್ಪ ಅವರು ಇದು ವಿಶೇಷವಾಗಿದೆ. ಡಾ.ಅಥಣಿ ಅವರು ತಮ್ಮ ವೈದ್ಯಕೀಯ ವೃತ್ತಿ ಜೊತೆಗೆ ವಿಶಿಷ್ಟ ಚಿತ್ರಕಲೆ ಆಸಕ್ತಿ ಸ್ಪೂತರ್ಿದಾಯ ಎಂದು ಮೆಚ್ಚುಗೆ ಸೂಚಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ರಾಜೂಗೌಡ ನಾಯಕ, ದೊಡ್ಡನಗೌಡ ಪಾಟೀಲ, ಬಬಲೇಶ್ವರದ ಬಿಜೆಪಿ ಧುರೀಣ ವಿಜುಗೌಡ ಪಾಟೀಲ, ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ನಾಗಭೂಷಣ ನಾವದಗಿ, ಆಯುಷ್ ವೈದ್ಯರ ಸಂಘದ ಪದಾಧಿಕಾರಿ ಡಾ.ವೀರೇಶ ಪಾಟೀಲ, ಸ್ಥಳೀಯ ಬಿಜೆಪಿ ಧುರೀಣರು ಇದ್ದರು.