ಲೋಕದರ್ಶನ ವರದಿ
ಮುದ್ದೇಬಿಹಾಳ 20: ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ನಾಗಬೇನಾಳ ತಾಂಡಾ ವ್ಯಾಪ್ತಿಯ ಸವರ್ೇ ನಂಬರ್ 84ರಲ್ಲಿನ 24.26 ಎಕರೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುವುದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ವಿಧಾನಸಭೆ, ಶಾಸಕರ ಮನೆಗೆ ಮುತ್ತಿಗೆ ಹಾಕುವ ಮತ್ತು ನೊಂದ ರೈತರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಕನರ್ಾಟಕ ರಾಜ್ಯ ರೈತ ಸಂಘದ ಮುಖಂಡರು, ನೊಂದ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದನಗೌಡ ಬಿರಾದಾರ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸಂಗಣ್ಣ ಬಾಗೇವಾಡಿ, ಹಿರಿಯ ಧುರೀಣ ರೈತ ಪರ ಹೋರಾಟ ನಡೆಸುತ್ತಿರುವ ಪಾವಡೆಪ್ಪಗೌಡ ಹವಾಲ್ದಾರ್ ಅವರು ಮಾತನಾಡಿ, ಪ್ರಾಣ ಕೊಟ್ಟೇವೆ ಹೊರತು ಜಮೀನು ಬಿಡುವುದಿಲ್ಲ. ಸವರ್ೇ ನಂಬರ್ 84ರಲ್ಲಿನ ಜಮೀನಿನ ಮಾಲಿಕತ್ವದ ತೀಮರ್ಾನ ಆಗುವವರೆಗೆ ಯಾವುದೇ ಕಾರಣಕ್ಕೂ ಅಲ್ಲಿ ವಿದ್ಯುತ್ ಸ್ಥಾವರ ನಿಮರ್ಿಸುವ ಕಾಮಗಾರಿ ನಡೆಸಬಾರದು ಎಂದು ಆಗ್ರಹಿಸಿದರು.
ಒಂದು ವೇಳೆ ಬಲವಂತವಾಗಿ, ರೈತರ ಮೇಲೆ ದೌರ್ಜನ್ಯ ನಡೆಸಿ, ಪೊಲೀಸ್ ಬಲ ಬಳಸಿ ವಿವಾದಿತ ಜಮೀನಿನಲ್ಲಿ ಕೆಲಸ ಮಾಡಲು ಮುಂದಾದರೆ ಸಂಬಂಧಿಸಿದ ಅಧಿಕಾರಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಇಂದಿನಿಂದಲೇ ಜಮೀನಿನ ಸಮೀಪ ನೊಂದ ರೈತರೊಂದಿಗೆ ರೈತ ಸಂಘದ ಪದಾಧಿಕಾರಿಗಳು ಧರಣಿ ಪ್ರಾರಂಭಿಸಲು ತೀಮರ್ಾನಿಸಲಾಗಿದೆ. ಇದಲ್ಲದೆ ಬೆಂಗಳೂರಿಗೆ ನಿಯೋಗ ಹೋಗಿ ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂತಾದವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ. ಅಗತ್ಯ ಬಿದ್ದರೆ ವಿಧಾನಸೌಧಕ್ಕೂ ಮತ್ತು ಯೋಜನೆ ವ್ಯಾಪ್ತಿ ಹೊಂದಿರುವ ಮುದ್ದೇಬಿಹಾಳ, ದೇವರ ಹಿಪ್ಪರಗಿ ಶಾಸಕರ ನಿವಾಸಗಳಿಗೆ ಮುತ್ತಿಗೆ ಹಾಕುವ ಚಿಂತನೆಯೂ ಇದೆ. ಇದಕ್ಕೂ ಜಗ್ಗದೆ ಅಧಿಕಾರಿಗಳು ತಮ್ಮ ಹಠಕ್ಕೆ ಅಂಟಿಕೊಂಡಲ್ಲಿ ಕೊನೇ ಹಂತವಾಗಿ ನೊಂದ ರೈತರ ಸಾಮೂಹಿಕ ವಿಷ ಸೇವನೆ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಸಂಘದ ತಾಲೂಕು ಪ್ರಧಾನ ಕಾರ್ಯದಶರ್ಿ ವೈ.ಎಲ್.ಬಿರಾದಾರ, ಕೇಶಪ್ಪ ನಾಯಕ, ಸುರೇಶ ರಾಠೋಡ, ಶಶಿಕಾಂತ ನಾಯಕ, ಲಕ್ಷ್ಮಣ ರಾಠೋಡ, ಯಮನಪ್ಪ ನಾಯಕ, ತುಳಜಾರಾಮ ರಾಠೋಡ, ಲಕ್ಷ್ಮಣ ನಾಯಕ, ಸೋಮಪ್ಪ ನಾಯಕ, ಕೃಷ್ಣಪ್ಪ ನಾಯಕ ಮತ್ತಿತರರು ಇದ್ದರು.