ಮುಡಾ ಹಗರಣ ಆರೋಪ ಸುಳ್ಳಿನ ಕಂತೆ ; ಪ್ರಾಸಿಕ್ಯೂಷನ್ ಅನುಮತಿ ಮಾಧ್ಯಮಗಳ ಸೃಷ್ಠಿ- ಉಮಾಶ್ರೀ

ಮಹಾಲಿಂಗಪುರ 03 : ಮುಡಾ ಹಗರಣ ಆರೋಪ ಕೇವಲ ಸುಳ್ಳಿನ ಕಂತೆ, ರಾಜಕೀಯ ಷಡ್ಯಂತ್ರ, ಬೆಟ್ಟದಂತಹ ನಾಯಕನನ್ನು ಮಟ್ಟ ಹಾಕುವ ವಿಕೃತಿ ಇದಕ್ಕೆ ರಾಜ್ಯದ ಜನ ಮತ್ತು ನಾವು ಅವಕಾಶ ಅವಕಾಶ ಕೊಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು. 

ಬುಧವಾರ ಮಧ್ಯಾಹ್ನ ಸ್ಥಳೀಯ ಜಿಎಲ್‌ಬಿಸಿ ಸಭಾವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2ಜಿ ಹಗರಣ ಆರೋಪದಂತೆ ಇದೂ ಸಹ ಸುಳ್ಳು ಸೃಷ್ಠಿ. ಬಿಜೆಪಿಯವರು ಈ ಹಿಂದೆ 2ಜಿ  ಹಗರಣ ಸೃಷ್ಠಿಸಿ ಅದರ ಲಾಭ ಪಡೆದರು ಈಗಲೂ ಅದೇ ಹಾದಿಯಲ್ಲಿ ಲಾಭ ಪಡೆಯಲು ಸಂಚು ರೂಪಿಸಿದ್ದು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡ ಜಾತ್ಯಾತೀತ ನಿಲುವಿನ, ಸರ್ವ ಜನರ ಸುಖಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ದೈತ್ಯ ಶಕ್ತಿ ಸಿದ್ಧರಾಮಯ್ಯ ವಿಪಕ್ಷಗಳಿಗೆ ಮುಳ್ಳಿದ್ದಂತೆ, ಅವರನ್ನು ಮಟ್ಟ ಹಾಕುವುದರೊಂದಿಗೆ ಕಾಂಗ್ರೆಸ್ ಪಕ್ಷ ಮತ್ತು ಜನಸಾಮಾನ್ಯರ ಧ್ವನಿಯನ್ನೂ ನಿರ್ನಾಮ ಮಾಡುವ ಕುತಂತ್ರ, ನಿವೇಶನಗಳನ್ನು ಮರಳಿಸಿರುವುದು ತಾವು ಹೋರಾಟಕ್ಕೆ ಸಿದ್ಧ ಎಂದು ಆ ಮೂಲಕ ಇದುವರೆಗೂ ನಡೆದಿರುವ ಮುಡಾ ಹಗರಣಗಳ ಸಂಪೂರ್ಣ ತನಿಖೆಯಾಗಬೇಕೆಂದು. ಸಮಗ್ರ ತನಿಖೆಯ ನಂತರ 2ಜಿ ಯಂತೆ ಸುಳ್ಳೆಂದು ಸಾಬೀತಾಗುತ್ತದೆ, ಆದರೆ ಈಗ ಸಿದ್ಧರಾಮಯ್ಯನವರು ತುಂಬಾ ನೊಂದುಕೊಂಡಿದ್ದಾರೆ.  

ನಿವೇಶನ ತವರಿನ ಉಡುಗೊರೆ, ಗಂಡ ಕೊಡಿಸಿದ್ದಲ್ಲ :  

ಅಷ್ಟಕ್ಕೂ ನಿವೇಶನ ಅವರ ಹೆಂಡತಿಯ ಹೆಸರಲ್ಲಿದ್ದು ಅದು ಅವರ ತವರುಮನೆಯವರು ಕೊಟ್ಟ ಉಡುಗೊರೆ, ಗಂಡ ಸಿಎಂ ಸಿದ್ಧರಾಮಯ್ಯ ಕೊಡಿಸಿದ್ದಲ್ಲ. ಆದರೆ ಯಾವುದೇ ಪಾತ್ರವಿಲ್ಲದ ಸಿದ್ಧರಾಮಯ್ಯವನವರ ಮೇಲೆ ಕೇಸ್ ಹಾಕಿರುವುದರ ಹಿಂದೆ ಕೇವಲ ರಾಜಕೀಯ ದುರುದ್ದೇಶವಿದೆ ಅವರನ್ನು ರಾಜಕೀಯವಾಗಿ ಮುಗಿಸುವ ಕುಮ್ಮಕ್ಕಿದೆ ಇದಕ್ಕೆ ನಾವು ಅವಕಾಶ ಕೊಡದೇ ಅವರ ಜೊತೆ ನಾವಿರುತ್ತೇವೆ ಎಂದರು. 

ಪ್ರಾಸಿಕ್ಯೂಷನ್ ಅನುಮತಿ ಮಾಧ್ಯಮಗಳ ಸೃಷ್ಠಿ : ಸಿಎಂ ಸಿದ್ಧರಾಮಯ್ಯ ವಿರುದ್ಧ ನಾವು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಎಂದು ಸ್ವತಃ ರಾಜ್ಯಪಾಲರೇ ಹೇಳಿದ್ದಾರೆ ಆದರೆ ಮಾಧ್ಯಮದವರು ಮಾತ್ರ ಪ್ರಾಸಿಕ್ಯೂಷನ್‌ಗೆ ಅನುಮತಿ ಎಂದು ಬಿಂಬಿಸಿದವು ಎಂದು ಅಸಮಾಧಾನ ವ್ಯಕ್ತಪಡಿಸಿ ಯಾಕೆ ಆ ರೀತಿ ಮಾಡಿದರು ಎಂದು ಪ್ರಶ್ನಿಸಿದರು.