ಮಿಸಸ್ ಪ್ಲಾನೇಟ್ 2019 ಮುಕುಟ ತೊಟ್ಟ ಕರ್ನಾಟಕದ ಮೊದಲ ಸುಂದರಿ ಡಾ. ಪ್ರಿಯಾಂಕ ಅಭಿಷೇಕ್

ಬೆಂಗಳೂರು, ನ 18 :     ಬಲ್ಗೇರಿಯಾದಲ್ಲಿ ನಡೆದ ಮಿಸಸ್ ಪ್ಲಾನೇಟ್ 2019  ಸುಂದರಿಯರ ಸ್ಪರ್ಧೆಯಲ್ಲಿ  ಕರ್ನಾಟಕದ ಡಾ. ಪ್ರಿಯಾಂಕ ಅಭಿಷೇಕ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 

ಬಲ್ಗೇರಿಯಾದ ಸೋಫಿಯಾದಲ್ಲಿ ಇರಾನಾ ಪಾಪಝೋವಾ ಸಂಸ್ಥೆ ಈ ತಿಂಗಳಲ್ಲಿ ಆಯೋಜಿಸಿದ್ದ 10ನೇ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಿಸಸ್ ಪ್ಲಾನೇಟ್ 2019  ಸುಂದರಿಯರ ಸ್ಪಧರ್ೆಯ ಅಂತಿಮ ಸುತ್ತಿನಲ್ಲಿ ಡಾ. ಪ್ರಿಯಾಂಕ ಅಭಿಷೇಕ್ ಆಯ್ಕೆಯಾಗಿ ಜಾಗತಿಕ ಮಟ್ಟದ ಮುಕುಟ ತೊಟ್ಟು ಸಂಭ್ರಮಿಸಿದ್ದಾರೆ. 

ಜಗತ್ತಿನಾದ್ಯಂತ ಮದುವೆಯಾದ ಸುಂದರ ಮಹಿಳೆಯರನ್ನು ಒಂದೆಡೆ ಸೇರಿಸುವ, ಇಂತಹ ಮಹಿಳೆಯರು ತನ್ನ ದೇಶದ ಕಲೆ, ್ಠದ್ಠ್ಲಿೃ್ತಿ, ಜೀವನ ಪದ್ಧತಿ, ದೇಶ, ದೇಶಗಳ ನಡುವೆ ಬಾಂಧವ್ಯ ವೃದ್ದಿಸುವ ಪ್ರತಿನಿಧಿಯಾಗಿ ಪಾಲ್ಗೊಳ್ಳುವ ಉದ್ದೇಶದಿಂದ ಇಂತಹ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.  

ಇಂತಹ ಪ್ರಮುಖ ಸುಂದರಿ ಸ್ಪರ್ಧಿಯ ಅಂತಿಮ ಘಟ್ಟಕ್ಕೆ ಪ್ರಿಯಾಂಕ ಅಭಿಷೇಕ್ ಅವರೊಬ್ಬರೇ ತಲುಪಿದ್ದು, ಕಿರೀಟ ತೊಡುವ ಮೂಲಕ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ. 

ಇದೇ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ಮಿಸೆಸ್ ಇಂಡಿಯಾ ಸುಂದರಿ ಸ್ಪರ್ಧೆಯಲ್ಲಿ ಗೆದ್ದು ಸಂಭ್ರಮಿಸಿದ್ದರು. ಈ ಸ್ಪರ್ಧೆಯನ್ನು ದೀಪಾಲಿ ಫಡ್ನೀಸ್ ಅವರು ಆಯೋಜಿಸಿದ್ದರು. ಭಾರತದ ಸೌಂದರ್ಯ ಮತ್ತು ಪ್ರತಿಭೆಯನ್ನು ನಿರೂಪಿಸಲು ಮಿಸೆಸ್ ಇಂಡಿಯಾ ಏಕೈಕ ಮತ್ತು ಅತ್ಯುತ್ತಮ ವೇದಿಕೆಯಾಗಿದೆ. ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು, ಮಹಿಳಾ ಸಬಲೀಕರಣಕ್ಕಾಗಿ ಬೆಂಬಲ ನೀಡುವ ಕೆಲಸವನ್ನು ಶ್ರೀಮತಿ ದೀಪಾಲಿ ಫಡ್ನೀಸ್ ಮಾಡುತ್ತಿದ್ದಾರೆ. 

ವಿಶೇಷವೆಂದರೆ ಪ್ರಿಯಾಂಕ ಅಭಿಷೇಕ್ ಮಿಸೆಸ್ ಇಂಡಿಯಾ ಕಿರೀಟ ತೊಟ್ಟ ವರ್ಷವೇ ಈ ಮಹತ್ವದ ಅಂತಾರಾಷ್ಟ್ರೀಯ ಸ್ಪರ್ಧೆ ನಡೆದಿದೆ. ವೃತ್ತಿಯಲ್ಲಿ ದಂತ ವೈದ್ಯರಾಗಿರುವ ಪ್ರಿಯಾಂಕ, ಕಲಾವಿದೆಯೂ ಆಗಿದ್ದಾರೆ. ಹಾಸನದಲ್ಲಿ ಜನ್ಮ ತಳೆದ ಪ್ರಿಯಾಂಕ ಅವರು ಬೆಂಗಳೂರಿನ ಅಭಿಷೇಕ್ ಸುಬ್ರಮಣ್ಯ ಅವರನ್ನು ಮದುವೆಯಾಗಿದ್ದಾರೆ. ಐರಾ ಮತ್ತು ವೀರಾ ಎಂಬ ಇಬ್ಬರು ಮಕ್ಕಳ ತಾಯಿಯಾಗಿರುವ ಪ್ರಿಯಾಂಕ ಜಗತ್ತಿನಾದ್ಯಂತ ಆಗಮಿಸಿದ್ದ ಎಲ್ಲಾ ಸ್ಪರ್ಧೆಗಳನ್ನು ಹಿಂದಿಕ್ಕಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. 

ಪ್ರಿಯಾಂಕ ಅಭಿಷೇಕ್ ಅವರು ಅಣ್ವಸ್ತ್ರ ಕುರಿತಂತೆ ಏಳು ಮಂದಿ ತೀಪುಗಾರರ ಸಮ್ಮುದಲ್ಲಿ ಚತುರ ಉತ್ತರ ನೀಡಿ ಸೈ ಎನಿಸಿಕೊಂಡರು. ಮಕ್ಕಳಿಗೆ ರಂಗೋಲಿ ಮತ್ತು ಬಾಲಿವುಡ್ ಡ್ಯಾನ್ಸ್ ಹೇಳಿಕೊಡುವ ಇವರು ಮಕ್ಕಳ ಹೃದಯ ಗೆದ್ಧ ಮಹಿಳೆಯಾಗಿದ್ದಾರೆ. ಅಂತಿಮ ಹಂತದಲ್ಲಿ ತಮ್ಮ ಸರ್ವಾಂಗೀಣ ಪ್ರದರ್ಶನದ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.