ಧಾರವಾಡ ಮಹಾನಗರ ಪಾಲಿಕೆಗಾಗಿ ಆಂದೋಲನ
Movement for Dharwad Municipal Corporation
ಲೋಕದರ್ಶನ ವರದಿ
ಧಾರವಾಡ 23 : ವಾತಾವರಣದಲ್ಲಿ ಸಾಹಿತ್ಯವಿದೆ, ಸಂಗೀತವಿದೆ. ನೃತ್ಯವಿದೆ, ಕಾವ್ಯವಿದೆ, ಇಲ್ಲಿಯ ಉಸಿರಾಟವೇ ಒಂದು ಅಮೃತಪಾನ’ ಎಂದು ಧಾರವಾಡದ ಕುರಿತು ನ. ಹ. ಕಟಗೇರಿ ಅವರು ಹೇಳಿದ್ದರು. ಕನ್ನಡ ಮತ್ತು ಕರ್ನಾಟಕದ ಪರವಾಗಿ ನಡೆಯುವ ಆಂದೋಲನಗಳಿಗೆ ನೆಲೆಯಾಗಿರುವ ಧಾರವಾಡ, ತನ್ನದೇ ಆದ ಹಿತದೃಷ್ಟಿಯಿಂದ ಮತ್ತೊಂದು ಆಂದೋಲನದಲ್ಲಿ ಮುನ್ನಡೆದಿದೆ. ಅದುವೇ ಧಾರವಾಡ ನಗರ ಪಾಲಿಕೆಗಾಗಿ ನಡೆಸಿರುವ ಆಂದೋಲನ. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯು ಮೇ 15, 2026 ರಿಂದ ಧಾರವಾಡ ಪಾಲಿಕೆ ಕಛೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕರ್ನಾಟಕದ ವಾಯುವ್ಯ ಭಾಗದಲ್ಲಿರುವ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳ ನಾಗರಿಕ ಮೂಲ ಸೌಕರ್ಯ ಮತ್ತು ಆಡಳಿತದ ನಗರಸಭೆಯಾಗಿದೆ. ಈ ಎಚ್.ಡಿ.ಎಂ.ಸಿ. ಯು 213 ಕಿ.ಮೀ. ವಿಸ್ತೀರ್ಣವನ್ನು ನಿರ್ವಹಿಸುತ್ತದೆ. ಜಿ.ಆರ್.ನಲವಡಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪ್ರಥಮ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 1962ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎಚ್.ಡಿ.ಎಂ.ಸಿ.ಯು 82 ಚುನಾಯಿತ ಸದಸ್ಯರನ್ನು ಒಳಗೊಂಡಿದೆ. ಎಚ್.ಡಿ.ಎಂ.ಸಿ.ಯನ್ನು ಸಂಯೋಜಿಸುವ ಮೊದಲು ಎರಡು ನಗರಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಹುಬ್ಬಳ್ಳಿ ಪುರಸಭೆಯು ಅಗಸ್ಟ 15, 1855ರಲ್ಲಿ ಸ್ಥಾಪಿತವಾದರೆ, ಧಾರವಾಡ ಪುರಸಭೆಯು ಜನವರಿ 1, 1856ರಲ್ಲಿ ಅಸ್ತಿತ್ವಕ್ಕೆ ಬಂದಿತು. 1920ರಲ್ಲಿ ಧಾರವಾಡ ಪುರಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿ ಎನ್.ಜಿ.ಕರಗುದರಿ ಅವರು ಅಧಿಕಾರ ವಹಿಸಿಕೊಂಡರು.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿ-ಧಾರವಾಡ ಮಹಾನಗರವೇ ದೊಡ್ಡದು. ಧಾರವಾಡ ಜಿಲ್ಲೆಯನ್ನು ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ ಮತ್ತು ಕುಂದಗೋಳ ಎಂಬ ತಾಲೂಕಗಳಾಗಿ ವಿಂಗಡಿಸಲಾಗಿದೆ. ಧಾರವಾಡ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದು, ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿದೆ. ಧಾರವಾಡ ನಗರವು ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಐ.ಐ.ಟಿ. ಮತ್ತು ಐ.ಐ.ಐ.ಟಿ. ಅಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಹೊಂದಿದೆ. ಎಚ್.ಡಿ.ಎಂ.ಸಿ. ವ್ಯಾಪ್ತಿಯ 67 ವಾರ್ಡಗಳಲ್ಲಿ 44 ವಾರ್ಡಗಳು ಹುಬ್ಬಳ್ಳಿಯಲ್ಲಿದ್ದು, 23 ವಾರ್ಡಗಳು ಧಾರವಾಡದಲ್ಲಿದ್ದವು. ಪುನರ್ವಿಂಗಡನೆಯ ನಂತರ ಹುಬ್ಬಳ್ಳಿಯಲ್ಲಿ 56 ವಾರ್ಡಗಳು ಮತ್ತು ಧಾರವಾಡದಲ್ಲಿ 26 ವಾರ್ಡಗಳು ಆದವು. ಸಧ್ಯ ಅಂದಾಜು 13 ಲಕ್ಷ ಜನಸಂಖ್ಯೆ ಹೊಂದಿರುವ ಎಚ್.ಡಿ.ಎಂ.ಸಿ. ಪಾಲಿಕೆಯಿಂದ ಧಾರವಾಡದ ಪ್ರತ್ಯೇಕ ಪಾಲಿಕೆಗಾಗಿ 2018ರಿಂದ ಆಂದೋಲನ ನಡೆದಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 