ಬಾಯಿ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ: ರಾಜಶೇಖರ

Mouth is a mirror that reflects health: Rajasekhara

 ಕೆ ಎಲ್ ಇ ಆಸ್ಪತ್ರೆಯಲ್ಲಿ ಉಚಿತ ದಂತ ತಪಾಸನಾ ಶಿಬಿರ 

ಬೆಳಗಾವಿ 29: ಬಾಯಿಯು ನಮ್ಮ ಆರೋಗ್ಯದ ಮೂಲವಾಗಿದೆ ನಮ್ಮ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡುತ್ತಿದ್ದರು.  

ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಕೆ ಎಲ್ ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಉದ್ಯಮಬಾಗ ನ ಕೆ ಎಲ್ ಇ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ತಪಾಸಣೆ ಶಿಬಿರದ ಅಂಗವಾಗಿ ಮಾತನಾಡುತ್ತಿದ್ದರು. ನಮ್ಮ ಆರೋಗ್ಯವನ್ನು ವ್ಯಾಖ್ಯಾನಿಸುವಾಗ ಬಾಯಿಯ ಹಾಗೂ ಹಲ್ಲುಗಳ ಆರೋಗ್ಯವು ಅತ್ಯಮೂಲ್ಯವಾದ ಪಾತ್ರವನ್ನು ವಹಿಸುತ್ತದೆ. ಅಂತೆಯೇ ವೈದ್ಯರು ತಪಾಸಣೆಯ ಸಮಯದಲ್ಲಿ ಬಾಯಿಯನ್ನು ಪರೀಕ್ಷಿಸುತ್ತಾರೆ. ಇದರಿಂದ ವ್ಯಕ್ತಿಯ ರೋಗ ಪರೀಕ್ಷೆಗೆ ಅನುಕೂಲವಾಗುತ್ತದೆ. ಬಾಯಿಯ ಹಾಗೂ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವದು ಆರೋಗ್ಯವನ್ನು ಕಾಪಾಡಿಕೊಂಡಷ್ಟೇ ಮುಖ್ಯವಾಗಿದೆ ಎಂದರು.  

ಈ ಸಂದರ್ಭದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತ  “ನಾವು ಆರೋಗ್ಯವಾಗಿರಬೇಕೆಂದರೆ ನಮಗೆ ಆಹಾರದ ಅವಶ್ಯಕತೆಯಿದೆ ಆ ಆಹಾರವನ್ನು ಪೌಷ್ಟಿಕಾಂಶವಾಗಿ ಮಾರಿ​‍್ಡಸಿ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ದಂತಗಳ ಪಾತ್ರ ಮಹತ್ತರವಾಗಿದೆ. ಸುಂದರ ದಂತ ಪಂಕ್ತಿಗಳು ಆರೋಗ್ಯಯುತ ಶರೀರದ ಸೂಚಕವಾಗಿವೆ. ಹಲ್ಲುಗಳು ಆರೋಗ್ಯವಾಗಿದ್ದರೆ ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಜಗಿದು ತಿನ್ನಬಹುದಾಗಿದೆ ಇದರಿಂದ ನಾವು ಸೇವಿಸುವ ಆಹಾರವು ನಮ್ಮ ಶರೀರಕ್ಕೆ ಶಕ್ತಿಯಾಗಿ ಪರಿಣಮಿಸುವಲ್ಲಿ ಹಲ್ಲುಗಳ ಆರೋಗ್ಯವು ಅತೀ ಮುಖ್ಯವಾಗಿದೆ ಮತ್ತು ನಮ್ಮ ಕೆ ಎಲ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿಯೂ ಸಹ ದಂತ ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗಿದ್ದು ಅಗತ್ಯವಿರುವ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು  ಎಂದು ತಿಳುವಳಿಕೆ ನೀಡಿದರು 

ಶಿಬಿರದಲ್ಲಿ 115 ನಾಗರಿಕರಿಗೆ ದಂತ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆಗಳನ್ನು ಸ್ಥಳದಲ್ಲಿಯೇ ಮಾಡಲಾಯಿತು. ಈ ಸಂದರ್ಭದಲ್ಲಿ ಉದ್ಯಮಬಾಗ ನ ಕೆ ಎಲ್ ಇ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಮದನ ಡೋಂಗ್ರೆ,  ಹಿರಿಯ ವೈದ್ಯ ಡಾ. ಸಿ ಎನ್ ತುಗಶೆಟ್ಟಿ, ಕೆ ಎಲ್ ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಸಮುದಾಯ ದಂತ ವಿಭಾಗದ ಮುಖ್ಯಸ್ಥೆ  ಡಾ. ರೂಪಾಲಿ ಸಂಕೇಶ್ವರಿ, ಜನಸಂಪರ್ಕ ಅಧಿಕಾರಿಗಳಾದ ಸಂತೋಷ ಇತಾಪೆ, ಮಹಾಂತೇಶ ಇಂಚಲ, ಕ್ರಿಷ್ಣಾ ಗುಮಾಸ್ತೆ, ಲಕ್ಷ್ಮೀ ಪಾಟೀಲ, ಸಾಗರ ಅಕನೋಜಿ ಹಾಗೂ ದಂತ ವೈದ್ಯ ವಿದ್ಯಾರ್ಥಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.