ನವ ಭಾರತ ಸಾಕ್ಷರತಾ ಕಾರ್ಯಕ್ರಮದಡಿ ಪ್ರೇರಕರ ತರಬೇತಿ ಕಾರ್ಯಾಗಾರ
Motivator Training Workshop under Nav Bharat Literacy Programme
ಲಕ್ಷ್ಮೇಶ್ವರ" 30: ಕಲಿಕಾರ್ಥಿಯ(ಅನಕ್ಷರಸ್ಥರ) ಓದು, ಬರಹ, ಲೆಕ್ಕಾಚಾರ, ಅರಿವು ಮತ್ತು ಕ್ರಿಯಾಶೀಲತೆಯನ್ನು ನೋಡಿಕೊಳ್ಳಲು ಸ್ವಯಂ ಸೇವಕ ಬೋಧಕರ ನೆರವಿನೊಂದಿಗೆ ಕಲಿಕಾರ್ಥಿಗಳೇ ನಿರ್ವಹಿಸುವಂತೆ ಬಾಳಿಗೆ ಬೆಳಕು ಪುಸ್ತಕ ಸಿದ್ಧಪಡಿಸಲಾಗಿದೆ. ಈ ಪ್ರಾಥಮಿಕೆಯನ್ನು ಆಧರಿಸಿ ಅನುಷ್ಠಾನಾಧಿಕಾರಿಗಳಿಗೆ, ಬೋಧಕರಿಗೆ ವಿಶೇಷ ಪರಿಣಿತ ತಂಡವನ್ನು ರಚಿಸಿ, ಅವರ ಮೂಲಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಕೀ ನಾಯ್ಕ ಹೇಳಿದರು. ಜಿಲ್ಲಾ ಲೋಕ ಶಿಕ್ಷಣ ಸಮಿತಿ ಗದಗ ಶಾಲಾ ಶಿಕ್ಷಣ ಇಲಾಖೆ (ದ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಗದಗ, ತಾಲೂಕ ಪಂಚಾಯತ ಶಿರಹಟ್ಟಿ ಸಹಯೋಗದೊಂದಿಗೆ ಪಿ ಎಮ್ ಶ್ರೀ ಸ ಹಿ ಪ್ರಾ ಶಾಲೆ ನಂ 04 ಲಕ್ಷ್ಮೇಶ್ವರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಸ್ವಯಂ ಸೇವಕ ಬೋಧಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಡಿನ ವಿದ್ಯಾವಂತ ಸಮುದಾಯ, ಕಲಿಯದವರಿಗೆ ಕಲಿಸುವ ಹೊಣೆ ಹೊತ್ತು ಸಾಕ್ಷರತೆ ಸಾಧಿಸುವ ಜವಾಬ್ದಾರಿ ಸ್ವಯಂ ಸೇವಕ ಬೋಧಕರಿಗೆ ಇದೆ ಹಾಗಾಗಿ ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ 20 ಅನಕ್ಷರಸ್ಥರಿಗೆ, ಅಕ್ಷರ ಜ್ಞಾನ ನೀಡುವ ಮೂಲಕ ತಾವು ಪ್ರಯತ್ನಿಸಬೇಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಎಮ್ ಯರಗುಪ್ಪಿ ಹೇಳಿದರು. ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಉಮೇಶ್ ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಕೀ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಬಿ ಎಸ್ ಭಜಂತ್ರಿ,ಬಿ ಆರ್ ಪಿ ಬಿ ಎಮ್ ಯರಗುಪ್ಪಿ,ಪ್ರಧಾನ ಗುರುಗಳಾದ ಬಿ ಎಮ್ ಕುಂಬಾರ, ಕೆ ಡಿ ಕಗ್ಗಲಗೌಡರ, ಕೆ ಬಿ ಗೊಜನೂರ, ಎಸ್ ಸಿ ಹುಲಿಕಂಠಿಮಠ, ಎಸ್ ಕೆ ಚಾಂದಖಾನವರ ಹಾಗೂ ತಾಲೂಕಿನ ಸಾಕ್ಷರತಾ ಪ್ರೇರಕರಿದ್ದರು. ಎನ್ ಪಿ ಪ್ಯಾಟಿಗೌಡರ ಸ್ವಾಗತಿಸಿದರು, ಎನ್ ಎ ಮುಲ್ಲಾ ವಂದಿಸಿದರು, ಶ್ರೀನಿವಾಸ್ ಮತ್ತೂರ ನಿರೂಪಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 