ಮಕ್ಕಳ ಕಲಿಕೆಗೆ ಪ್ರೇರಣಾ ಕ್ಲಬ್ ಪ್ರೋತ್ಸಾಹ: ಬಡಿಗೇರMotivational Club Encouragement for Children's Learning: Badigera
Lokadrshan Daily
1/5/25, 1:39 AM ಪ್ರಕಟಿಸಲಾಗಿದೆ
ಹುನಗುಂದ: ಮಕ್ಕಳ ಸ್ವಯಂ ಶಿಸ್ತು ಮತ್ತು ಕಲಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರೇರಣಾ ಕ್ಲಬ್ಗಳನ್ನು ರಚಿಸಲಾಗಿದೆ ಎಂದು ಶಿಕ್ಷಕ ಎಂ.ಜಿ.ಬಡಿಗೇರ ಹೇಳಿದರು.
ಸಮೀಪದ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರೇರಣಾ ಕ್ಲಬ್ಗಳ ಪಾಕ್ಷಿಕ ಸಭೆಯಲ್ಲಿ ಅವರು ಮಾತನಾಡಿ,ಏಳನೇ ತರಗತಿ ಮುಗಿಸುವ ಪ್ರತಿ ಮಗುವೂ ಸ್ಪಷ್ಟ ಓದು, ಶುದ್ಧಬರಹ ಮತ್ತು ಸರಳ ಲೆಕ್ಕಾಚಾರದ ಕನಿಷ್ಠ ಸಾಮಥ್ರ್ಯಗಳನ್ನು ಗಳಿಸಲು ತಂಡಗಳಲ್ಲಿನ ಕಲಿಕೆಯಲ್ಲಿ ಮುಂದಿರುವ ಮಕ್ಕಳು ಇತರ ಮಕ್ಕಳಿಗೆ ಸಹಾಯ ಮಾಡುವ ಮೂಲಕ ನಿರ್ದಿಷ್ಟ ಗುರಿ ಸಾಧನೆ ಮಾಡಬೇಕು.ಆ ಮೂಲಕ ಸಿಲ್ವರ್ ಸ್ಟಾರ್ ಹಾಗೆಯೇ ವೈಯಕ್ತಿಕ ಸ್ವಚ್ಛತೆ ಮತ್ತು ಶಿಸ್ತಿನಿಂದ ಗ್ರೀನ್ ಸ್ಟಾರ್ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಪಿಂಕ್ ಸ್ಟಾರ್ಗಳನ್ನು ಗಳಿಸಿಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಶಿಕ್ಷಕ ಅಶೋಕ ಬಳ್ಳಾ ಮಾತನಾಡಿ, ಕಲಿಕೆ ಮಗುವಿನಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ. ಆದ್ದರಿಂದ ಮಕ್ಕಳು ಶಾಲೆಗೆ ಗೈರಾಗದೆ ನಿರಂತರ ಹಾಜರಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಹಾಗೆಯೇ ಶಾಲೆಯ ಪ್ರತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಿಕ್ಷಕಣದ ಗುರಿ-ಉದ್ದೇಶಗಳ ಈಡೇರಿಕೆಗೆ ಸಹಕರಿಸಬೇಕು ಎಂದರು.
ಪ್ರೇರಣಾ ತಂಡಗಳ ನಾಯಕರುಗಳಾದ ದಾನೇಶ್ವರಿ ನಾಗರಾಳ, ಭಾಗ್ಯಶ್ರೀ ಚಲವಾದಿ, ಮಲ್ಲಪ್ಪ ಅಳ್ಳೋಳ್ಳಿ, ದ್ಯಾಮನಗೌಡ ಹನಮನ್ನವರ, ಬಡಕಪ್ಪ ಗೌಡರ, ಬಸಯ್ಯ ವೀರಾಪೂರ, ಆನಂದವ್ವ ಕೊಣ್ಣೂರ, ರಕ್ಷಿತಾ ಹಿರೇಮಠ, ಸಂಜನಾ ಹುನಗುಂಡಿ, ನಿಂಗರಾಜ ಭಜಂತ್ರಿ, ಪ್ರಭು ಬಡಿಗೇರ, ಗೋಲಪ್ಪ ಕೊಣ್ಣೂರ,ಅಕ್ಷತಾ ವಠಾರದ ತಮ್ಮ ತಂಡಗಳ ಸಾಧನೆಗಳ ವರದಿ ಒಪ್ಪಿಸಿದರು. ಶಾಲೆಯ ಮುಖ್ಯಗುರು ಎ.ಐ.ಕಂಬಳಿ ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.
ಹುನಗುಂದ ತಾಲೂಕಿನ ಹೊನ್ನರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೇರಣಾ ಕ್ಲಬ್ಗಳ ಪಾಕ್ಷಿಕ ಸಭೆ ಜರಗಿತು.