ಸಾಧಕರ ಪ್ರೇರಣೆ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತು : ಶಂಕರ ಪಾಟೀಲ
Motivation from achievers made it possible to hold high positions: Shankar Patil
ಸಾಧಕರ ಪ್ರೇರಣೆ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತು : ಶಂಕರ ಪಾಟೀಲ
ಶಿಗ್ಗಾವಿ 27 : ಐತಿಹಾಸಿಕ ಮಾಮಲೇ ದೇಸಾಯಿ ಶಿಕ್ಷಣ ಸಂಸ್ಥೆಯ ಸಾಧಕರ ಪ್ರೇರಣಯೇ ನನಗೆ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂದುಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಆಯುಕ್ತ ಶಂಕರ ಪಾಟೀಲ ಹೇಳಿದರು. ಪಟ್ಟಣದ ಶಿಗ್ಗಾವಿ ತಾಲೂಕ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ಮಾಮಲೇದೇಸಾಯಿ ಮಹಾವಿದ್ಯಾಲಯದಲ್ಲಿ ನಡೆದ 78 ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಸಾಧಕರಿರುವ ಈ ಸಂಸ್ಥೆಯ ಆದರ್ಶ ಗುಣಗಳು ನನಗೆ ಮಾದರಿಯಾಗಿದೆ ಅಲ್ಲದೇ ಬರೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದರೇ ಮಾತ್ರ ಉನ್ನತ ವ್ಯಾಸಾಂಗ ಪಡೆಯಬಹುದು ಎಂಬುದು ತಪ್ಪು ಕಲ್ಪನೆ ಇದೆ ಅದರಿಂದ ಹೊರಬರಬೇಕು ಮತ್ತು ಯಾವ ವ್ಯಕ್ತಿ ಏನನ್ನಾದರೂ ಸಾಧನೆ ಮಾಡಬಹುದು ಅದಕ್ಕೆ ನಮ್ಮ ಆಯ್ಕೆ ಉತ್ತಮವಾಗಿರಬೇಕು, ಉನ್ನತ ಗುರಿ ಇರಬೇಕು ಎಂದರು.ಉಪಾಧ್ಯಕ್ಷ ದತ್ತಣ್ಣಾ ವೇರ್ಣೇಕರ ಸಮಿತಿ ವರದಿ ವಾಚಿಸಿದರು, ಪ್ರಾಚಾರ್ಯ ಆರ್.ಎಸ್. ಭಟ್ ವಿದ್ಯಾಲಯದ ವರದಿ ವಾಚನ ಮಂಡಿಸಿದರು. ರಟ್ಟಿಹಳ್ಳಿ ಎ.ಎಸ್.ಐ ಮತ್ತು ಜಾನಪದ ಕಲಾವಿದ ಅಶೋಕ ಕೊಂಡ್ಲಿ ಮಾತನಾಡಿ ಸಾಧಿಸುವ ಚಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಆ ನಿಟ್ಟಿನಲ್ಲಿ ಮಾಮಲೇ ದೇಸಾಯಿ ಸಮೂಹ ಸಂಸ್ಥೆ ವಿವಿಧ ಸಮುದಾಯದ ವಿಧ್ಯಾರ್ಥಿಗಳ ಪಾಲಿಗೆ ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಅಲ್ಲದೇ ಸರಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರು ವಂಚನೆಗೊಳಗಾಗುತ್ತಿದ್ದಾರೆ ಆದ್ದರಿಂದ ಜಾಗೃತರಾಗಬೇಕು ಎಂದು ಹಾಸ್ಯ ಚಟಾಕಿಗಳ ಮೂಲಕ ರಂಜಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಸನ್ನಾನಿಸಲಾಯಿತು. ಈ ಸಂದರ್ಭದಲ್ಲಿ ರಾಜಣ್ಣಾ ಮಾಮ್ಲದೇಸಾಯಿ,ಸಿದ್ದಾರ್ಥಗೌಡ ಪಾಟೀಲ,ಡಾ.ಪಿ.ಆರ್.ಪಾಟೀಲ, ಎಸ್.ಎಂ. ಚಿನ್ನಪ್ಪನವರ, ವಿ.ಬಿ. ಮೇಟಿ, ಎಂ.ಎಲ್. ದೇಶಪಾಂಡೆ, ಸಿ.ಎಸ್. ಪಾಲನಕರ,ಎಸ್. ಎಸ್. ರಾಮಗೇರಿ, ಎಸ್.ಎಂ.ಬುಳ್ಳಕ್ಕನವರ, ವಿ.ಎಂ. ಅಂಕಲಕೋಟಿ, ಜಯಣ್ಣ ಹೆಸರೂರ, ಜಿ.ಎನ್.ಯಲಿಗಾರ, ಕೆ.ಡಿ.ಪಾಟೀಲ, ಸುರಗೀಮಠ, ಹಿರೇಮಠ, ಬಿ.ಎಂ.ಹಿರೂಲಾಲ, ರಾಘವೇಂದ್ರ ದೇಶಪಾಂಡೆ, ಸಚಿನ ಜೋಶಿ, ಶಿವಾನಂದ ಕುನ್ನೂರ, ಬಸವರಾಜ ರಾಗಿ, ಗಂಗಾಧರ ಬುಳ್ಳಕ್ಕನವರ, ರಾಘವೇಂದ್ರ ಉಡುಪಿ ಸೇರಿದಂತೆ ಶಿಕ್ಷಕ ವೃಂದ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಉಪಪ್ರಾಚಾರ್ಯ ಕೆ.ಬಿ.ಚನ್ನಪ್ಪ ಸ್ವಾಗತಿಸಿದರು. ಶಿಕ್ಷಕರಾದ ಕೆ.ಹೆಚ್.ಬಂಡಿವಡ್ಡರ, ಎಸ್.ಟಿ.ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 