ಲೋಕದರ್ಶನವರದಿ
ಚಿಮ್ಮಡ; ಮಾತ್ರಭಾಷಾ ಮಾದ್ಯಮದಲ್ಲಿ ಶಿಕ್ಷಣ ಪಡೆಯುವುದು ಸುಲಭ ಹಾಗೂ ಅನುಕೂಲಕರವಾಗಿದ್ದು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವಂತಾಗಬೇಕೆಂದು ಗ್ರಾಂ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುಕರ್ಿ ಹೇಳಿದರು.
ಗ್ರಾಮದ ಸರಕಾರಿ ಉದರ್ು ಕಿ.ಪ್ರಾ. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಎಸ್ಡಿಎಂಸಿ ಹಾಗೂ ಖಡ್ಡಾಯ ವಗರ್ಾವಣೆಯಲ್ಲಿ ನೂತನವಾಗಿ ಆಗಮಿಸಿದ ನೂತನ ಶಿಕ್ಷಕರ ಸ್ವಾಗತ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು ಈ ಉದರ್ು ಶಾಲೆಯ ಅಭಿವೃದ್ದಿಗೆ ಮುಸ್ಲಿಂ ಸಮಾಜದ ಯುವಕರು ಕಳೆದ ಎರಡು ವರ್ಷಗಳಿಂದ ಶತಪ್ರಯತ್ನದ ಫಲವಾಗಿ ಇಂದು ಮೂವರು ನೂತನ ಶಿಕ್ಷಕರನ್ನು ಶಾಲೆಗೆ ವಗರ್ಾಯಿಸಿದ್ದು ಹೆಚ್ಚು ಮಕ್ಕಳನ್ನು ಶಾಲೆಗೆ ಧಾಖಲು ಮಾಡುವ ಮೂಲಕ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದರು.
ಇನ್ನೋರ್ವ ಅಥಿತಿ ಪ್ರಭು ನೇಸೂರ, ಇಬ್ರಾಹಿಂ ಡಾಂಗೆ. ಮಾತನಾಡಿ ಶಾಲೆಯ ಆಭಿವೃದ್ದಿಗೆ ಶಾಲಾ ಸುಧಾರಣಾ ಸಮೀತಿಯ ಕಾರ್ಯ ಮಹತ್ವದ್ದಾಗಿದ್ದು ಶಿಕ್ಷಕರು, ಪಾಲಕರ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಮೂಲಕ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂದರು. ಪ್ರಾಸ್ತಾವಿಕವಾಗಿ ಸಲಹಾ ಸಮೀತಿಯ ಸದಸ್ಯ ಇಲಾಹಿ ಜಮಖಂಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಇಮಾಮ ಯಾದವಾಡ ವಹಿಸಿದ್ದರು. ಅಥಿತಿಗಳಾಗಿ ಅಂಜುಮನ್ ಸಮೀತಿಯ ಅಧ್ಯಕ್ಷ ಸಲೀಮ ಜಮಖಂಡಿ, ಪ್ರಮುಖರಾದ ಅಪ್ಪಾಲಾಲ ಬಿಜಾಪೂರ, ಮಹ್ಮದ ಯಾದವಾಡ, ರುಸ್ತುಂ ಮಾಲದಾರ, ದಸ್ತಗೀರ ಕೌಜಲಗಿ, ಅಮೀರಲಿ ಸಕರ್ಾವಸ, ಉಪಾದ್ಯಕ್ಷ ಅಸ್ಲಂ ಸರಕಾವಸ, ಶಿಕ್ಷಕರಾದ ಇಮ್ತಿಯಾಜ ಇನಾಮದಾರ, ಝೆಡ್.ಎಚ್. ಇಂಡಿಕರ, ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು. ಶಿಕ್ಷಕಿ ಇನಾಮದಾರ ಸ್ವಾಗತಿಸಿದರು. ಇಂಡಿಕರ ಎಚ್. ಕೆ. ಅಂಬಲೆ ನಿರೂಪಿಸಿದರು, ಎಸ.ಟಿ. ಹುನಶಾಳ ವಂದಿಸಿದರು