ತಾಯಿ-ಮಗನ ಕೊಲೆ: ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳ ಬಂಧನ

Mother-son murder: Arrest of two more absconding accused

ತಾಯಿ-ಮಗನ ಕೊಲೆ: ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳ ಬಂಧನ

ಬೆಳಗಾವಿ 07: ನಿಪ್ಪಾಣಿ ತಾಲೂಕು ಅಕ್ಕೋಳ ಗ್ರಾಮದ ಬಾಳೋಬಾ ಮಾಳನಲ್ಲಿ ಬುಧವಾರ ಮಾರಕಾಸ್ತ್ರಗಳಿಂದ ಹೊಡೆದು ತಾಯಿ-ಮಗನ ಕೊಲೆ ಮಾಡಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳನ್ನು ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಸಂತೋಷ ನಾಯಿಕ, ಮಹಾದೇವ ಬಂಧಿತರಾಗಿದ್ದಾರೆ. ಹುಕ್ಕೇರಿ ತಾಲೂಕಿನ ಕೋಣನಕೇರಿಯ ರವಿ ಖಾನಪ್ಪಗೋಳ ಎಂಬಾತ ಅಕ್ಕೋಳದ ಮಂಗಲ ನಾಯಿಕ ಅವರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಅದಕ್ಕೆ ತಾಯಿ ಮಂಗಲ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮಂಗಲ ಮತ್ತು ಅವರ ಪುತ್ರ ಪ್ರಜ್ವಲ್ ಅವರನ್ನು ಕೊಲೆ ಮಾಡಲಾಗಿತ್ತು. ರವಿ ಮತ್ತು ಆತನ ಗೆಳೆಯ ಲೋಕೇಶ ನಾಯಿಕನನ್ನು ಪೊಲೀಸರು ಬಂಧಿಸಿದ್ದಾರೆ.