ಆಸ್ಪತ್ರೆಯಲ್ಲಿ ನವಜಾತ ಶಿಶು ಬಿಟ್ಟು ಬಾಣಂತಿ ಪರಾರಿ

Mother ran away leaving the newborn in the hospital

ಬೆಳಗಾವಿ 13: ಹೆರಿಗೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ನಿನ್ನೆಯಷ್ಟೆ ಹೆರಿಗೆಯಾಗಿದ್ದ ಮಗುವನ್ನು ಬಿಟ್ಟು ಬಾಣಂತಿ ತಾಯಿ ಯಾರಿಗೂ ತಿಳಿಸದೆ ಪರಾರಿಯಾಗಿರುವ ಘಟನೆ ನಡೆದಿದೆ. 

ಹೆತ್ತ ಮಗುವನ್ನು ಬಿಟ್ಟು ಪರಾರಿಯಾಗಿರುವ ಮಹಿಳೆಯನ್ನು ಬೈಲಹೊಂಗಲದ ನಿವಾಸಿ ಬೀಬಿಜಾನ್ ಸದ್ದಾಂಹುಸೇನ್ ಸಯ್ಯದ್ ಎಂದು ಗುರುತಿಸಲಾಗಿದೆ. ಸದ್ಯ ಮಗು ದಾದಿಯರ ಆರೈಕೆಯಲ್ಲಿದ್ದು, ಆಸ್ಪತ್ರೆಯವರು ನೀಡಿದ ದೂರಿನಂತೆ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಈ ಬಗ್ಗೆ ಬೀಬಿಜಾನ್ ಮೇಲೆ ಪ್ರಕರಣ ದಾಖಲಾಗಿದೆ.