ಅತ್ಯುತ್ತಮ ಸಾಧನೆ ಮಾಡಿದ ಮದರ್ ತೆರೇಸಾ ಪಿಯು ಕಾಲೇಜು

ಅತ್ಯುತ್ತಮ ಸಾಧನೆ ಮಾಡಿದ ಮದರ್ ತೆರೇಸಾ ಪಿಯು ಕಾಲೇಜು Mother Teresa PU College achieved the best results

ಲೋಕದರ್ಶನ ವರದಿ

ಕಂಪ್ಲಿ 11: ಪಟ್ಟಣದಲ್ಲಿರುವ ಪ್ರತಿಷ್ಠಿತ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು(ಪಿಯು) ಪ್ರತಿ ವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಯಶಸ್ಸಿನ ಪಥದಲ್ಲಿ ಮುಂದುವರಿದಿದೆ.ರಾಜ್ಯದಲ್ಲಿ ಪಿಯು ಫಲಿತಾಂಶ ಪ್ರಕಟಗೊಂಡಿದ್ದು,  ಇಲ್ಲಿನ ಪಿಯು ಕಾಲೇಜು 2025-26ನೇ ಸಾಲಿನ ಫಲಿತಾಂಶದಲ್ಲಿ ಶೇ.94 ರಷ್ಡು ಫಲಿತಾಂಶ ಪಡೆದಿದೆ. ಒಟ್ಟು 96 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 17 ಡಿಸ್ಟಿಂಕ್ಷನ್, 63 ಪ್ರಥಮ, 11 ದ್ವಿತೀಯ ಸ್ಥಾನದ ಸಾಧನೆ ಮಾಡಿದೆ.ನಂತರ ಪ್ರಾಚಾರ್ಯ ಮಹಾಬಲೇಶ್ವರ​‍್ಪ ಮಾತನಾಡಿ, ಇಡೀ ರಾಜ್ಯದಲ್ಲಿ ಪಿಯು ಫಲಿತಾಂಶ ಪ್ರಕಟವಾಗಿದೆ.

ಈ ಫಲಿತಾಂಶದಲ್ಲಿ 96 ವಿದ್ಯಾರ್ಥಿಗಳ ಪೈಕಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.94 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಶೇ.100ಕ್ಕೆ 100ರಷ್ಟು ಫಲಿತಾಂಶ ಬಂದಿದ್ದು, ಇದರಿಂದ ಸಂಸ್ಥೆ ಮತ್ತು ಕಾಲೇಜಿನ ಕೀರ್ತಿ ಹೆಚ್ಚಿಸಿದೆ. ಇದರಲ್ಲಿ 10 ಡಿಸ್ಟಿಂಕ್ಷನ್, 20 ಪ್ರಥಮ, 11 ದ್ವಿತೀಯ ಬಂದಿದೆ. ಮತ್ತು ಈ ಫಲಿತಾಂಶದಲ್ಲಿ ಚೈತನ್ಯ 577(ಶೇ.96.16) ಅಂಕದೊಂದಿಗೆ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಭೂಮಿಕಾ 575(ಶೇ.95.83), ಮೇಘ್ನಾ 569(ಶೇ.94.83), ಬಿ.ಬಾನುಪ್ರಿಯಾ 566(ಶೇ.94.33), ಶೃತಿ 560(ಶೇ.93.33), ಎಂ.ಕಾವೇರಿ 549(ಶೇ.91.50) ಅಂಕಗಳೊಂದಿಗೆ ಸಾಧನೆಗೈದಿದ್ದಾರೆ.

ಮತ್ತು ಕಲಾ ವಿಭಾಗದಲ್ಲಿ 56 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗುವದೊಂದಿಗೆ ಶೇ.94.79ರಷ್ಟು ಫಲಿತಾಂಶ ಗಳಿಸಿದೆ. ಇದರಲ್ಲಿ 7 ಡಿಸ್ಟಿಂಕ್ಷನ್, 43 ಪ್ರಥಮ ಬಂದಿವೆ. ಪಿ.ಶಾಶಾಬೀ 554(ಶೇ.92.33), ಜ್ಯೋತಿ 552(ಶೇ.92), ಹೆಚ್‌.ವಾತ್ಸಲ್ಯ 533(ಶೇ.88.83), ಕೆ.ರೇಖಾ 518(ಶೇ.86.33), ಸುಷ್ಮಿತಾ 514(ಶೇ.85.66), ರೇಷ್ಮಾ 513(ಶೇ.85.50) ಅಂಕದ ಮೂಲಕ ಶಾಲೆಯ ಹೆಗ್ಗಳಿಗೆ ಪಾತ್ರರಾಗಿದ್ದಾರೆ ಎಂದರು.ವಿದ್ಯಾರ್ಥಿಗಳ ಸಾಧನೆಗೆ ವಿವಿಎಸ್‌ಎಸ್ ಟ್ರಸ್ಟ್‌ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ, ಕಾರ್ಯದರ್ಶಿ ಪ್ರಕಾಶ ಜಿ.ನಾಯಕ, ಪ್ರಾಂಶುಪಾಲ ಬಿ.ಮದ್ದಾನೆಪ್ಪ, ಟ್ರಸ್ಟ್‌ ಪದಾಧಿಕಾರಿಗಳು, ಉಪನ್ಯಾಸಕರು, ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.