ಅಮೆರಿಕದಲ್ಲಿ ಕರೋನ ಸೊಂಕಿಗೆ 9 ಸಾವಿರಕ್ಕೂ ಹೆಚ್ಚು ಜನ ಬಲಿ

ವಾಷಿಂಗ್ಟನ್, ಎಪ್ರಿಲ್ 6,ಮಾರಣಾಂತಿಕ  ಕರೋನ ಸೋಂಕಿಗೆ ಈವರೆಗೆ ಅಮೆರಿಕದಲ್ಲಿ  9 ಸಾವಿರಕ್ಕು ಹೆಚ್ಚು  ಜನರು ಮೃತಪಟ್ಟಿದ್ದಾರೆ. ಸೋಂಕು  ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದ್ದು ಸರ್ಕಾರಕ್ಕೆಬಹಳ   ದೊಡ್ಡ ತಲೆನೋವಾಗಿ ಪರಿಣಿಮಿಸಿದೆ. ಇದು ಜಾಗತಿಕವಾಗಿ ಕರೋನ ಸೋಂಕಿನಿಂದ  ಸಂಭವಿಸಿದ ಮೂರನೇ ಅತಿದೊಡ್ಡ ಸಾವಿನ ಪ್ರಮಾಣವಾಗಿದೆ .
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ- ಅಂಶಗಳ ಪ್ರಕಾರ, ಪ್ರಸ್ತುತ ಸಾವಿನ ಸಂಖ್ಯೆ 9562 ಕ್ಕೆ ಏರಿಕೆಯಾಗಿದೆ. ನ್ಯೂಯಾರ್ಕ್ ನಗರದವೊಂದರಲ್ಲೆ 2, 250 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.ದೇಶದಲ್ಲಿ 331,000 ಕ್ಕೂ ಹೆಚ್ಚು ಕರೋನ ಸೋಂಕಿನ  ಪ್ರಕರಣಗಳು ದೃಡಪಟ್ಟಿದೆ.  ಇದು ಎಲ್ಲಾ ದೇಶಗಳೀಗಿಂತ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ.  ಈ ನಡುವೆ  ಅಧ್ಯಕ್ಷ ಟ್ರಂಪ್ ಇಂದು ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ,ಮಾತನಾಡಿ  ಮಲೇರಿಯಾ ಚಿಕಿತ್ಸೆಗಾಗಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಸಂಗ್ರಹ ಮಾಡಲಾಗಿದೆ, ಇದು ಸೋಂಕಿನ  ರೋಗಿಗಳಿಗೆ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.