ಮೆಕ್ಸಿಕೊ ನಗರ, ಏಪ್ರಿಲ್ 20 (ಸ್ಪುಟ್ನಿಕ್) ಮೆಕ್ಸಿಕೊದಲ್ಲಿ ಕಳೆದ 24 ಗಂಟೆಗಳಲ್ಲಿ 30 ಕ್ಕೂ ಹೆಚ್ಚು ಜನರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ದೇಶದಲ್ಲಿ ಒಟ್ಟು 8,200 ಕ್ಕೂ ಹೆಚ್ಚು ಕರೋನ ಸೋಂಕು ಪ್ರಕರಣಗಳು ದೃಡಪಟ್ಟಿದೆ ಎಂದು ಮೆಕ್ಸಿಕನ್ ಉಪ ಆರೋಗ್ಯ ಸಚಿವ ಹ್ಯೂಗೋ ಲೋಪೆಜ್-ಗ್ಯಾಟೆಲ್ ಹೇಳಿದ್ದಾರೆ. ಇದೆ ,20 ರಂದು ಮೆಕ್ಸಿಕೊದಲ್ಲಿ: 8,261 ಖಚಿತ ಪ್ರಕರಣಗಳು, 10,139 ಶಂಕಿತ ಪ್ರಕರಣಗಳು, ಮತ್ತು 686 ಸಾವುಗಳು ಸಂಭವಿಸಿದೆ ಎಂದು ಲೋಪೆಜ್-ಗ್ಯಾಟೆಲ್ ಹೇಳಿದ್ದಾರೆ.ಒಂದು ದಿನದ ಹಿಂದೆ, ಉಪ ಆರೋಗ್ಯ ಸಚಿವರು 7,497 ದೃ ಡಪಡಿಸಿದ ಪ್ರಕರಣಗಳು ಮತ್ತು 650 ಸಾವುಗಳನ್ನು ವರದಿ ಮಾಡಿದ್ದರು ಲೋಪೆಜ್-ಗ್ಯಾಟೆಲ್ ಪ್ರಕಾರ, ಮೆಕ್ಸಿಕೊದಲ್ಲಿ ಸುಮಾರು 63 ಪ್ರತಿಶತದಷ್ಟು ಪ್ರಕರಣಗಳು ಸೌಮ್ಯವಾಗಿದ್ದು ಮತ್ತು 37 ಪ್ರತಿಶತ ಪ್ರಕರಣಗಳಿಗೆ ಮಾತ್ರ ಆಸ್ಪತ್ರೆಗೆ ಅಗತ್ಯತೆ ಉಂಟಾಗಿದೆ ಎಂದರು. ಶನಿವಾರ ಅಮೆರಿಕದ ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೋನ ವಿರುದ್ಧದ ಹೋರಾಟದಲ್ಲಿ ಮೆಕ್ಸಿಕೊಕ್ಕೆ ವೆಂಟಿಲೇಟರ್‌ಗಳನ್ನು ಒದಗಿಸುವ ಮೂಲಕ ಅಗತ್ಯ ಸಹಾಯ ಮಾಡಲು ಸಿದ್ಧ ಎಂದು ಹೇಳಿದ್ದಾರೆ.