ಚೀನಾದ ಯುನಾನ್‍ ನಲ್ಲಿ ಕಾಡ್ಗಿಚ್ಚು ನಂದಿಸಲು 1,000 ಕ್ಕೂ ಹೆಚ್ಚು ಮಂದಿ ಜೀವನ್ಮರಣ ಹೋರಾಟ

ಕುಬ್ನಿಂಗ್, ಏಪ್ರಿಲ್ 19, ನೈರುತ್ಯ ಚೀನಾದ ಯುನಾನ್‍ ಪ್ರಾಂತ್ಯದ ಕಾಡಿನಲ್ಲಿ ವ್ಯಾಪಿಸಿದ ಬೆಂಕಿಯನ್ನು ನಂದಿಸಲು ಸುಮಾರು 1,000 ಜನರನ್ನು ನಿಯೋಜಿಸಲಾಗಿದೆ ಎಂದು ಅಗ್ನಿಶಾಮಕ ಪೊಲೀಸರು ಭಾನುವಾರ ತಿಳಿಸಿದ್ದಾರೆ.ಲಿಜಿಯಾಂಗ್ ನಗರ ವ್ಯಾಪ್ತಿಯ ಯುಲಾಂಗ್ ಕೌಂಟಿಯ ಕ್ಸಿಂಗ್ವೆನ್ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಸ್ಥಳೀಯ ಕಾಲಮಾನ ಶನಿವಾರ ಮಧ್ಯಾಹ್ನ 1. 30ಕ್ಕೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ನಗರದ ಕಾಡ್ಗಿಚ್ಚು ಶಮನ ಪೊಲೀಸರು ತಿಳಿಸಿದ್ದಾರೆ.ಭಾನುವಾರ ಬೆಳಿಗ್ಗೆ 9.30ರ ವೇಳೆಗೆ ಕಾಡಿನ ಉತ್ತರ ಮತ್ತು ಪಶ್ಚಿಮ ತುದಿಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದಿದೆ.ದಕ್ಷಿಣ ಭಾಗದಲ್ಲಿ ಹೊತ್ತಿಉರಿಯುತ್ತಿರುವ ಕಾಡಿನ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ. ಕಾಡ್ಗಿಚ್ಚು ಇತರ ಪ್ರದೇಶಗಳಿಗೆ ವ್ಯಾಪಿಸುವುದನ್ನು ತಡೆಯಲು ಹೆಲಿಕಾಪ್ಟರ್‍ ಗಳನ್ನೂ ನಿಯೋಜಿಸಲಾಗಿದೆ.