ರಸ್ತೆಗಳು, ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು : ಶಾಸಕ ಲಕ್ಷ್ಮಣ್ ಸವದಿ
More emphasis will be given to roads, health and education: MLA Laxman Savadi
ಸಂಬರಗಿ 30 : ಗಡಿ ಭಾಗದ ಗ್ರಾಮಗಳ ಸಂಪರ್ಕ ಹೊಂದಿರುವ ಗಡಿ ಪ್ರದೇಶದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸಿದೆ ಮತ್ತು ಗಡಿ ಪ್ರದೇಶದ ರಸ್ತೆಗಳು ಉತ್ತಮಗೊಂಡಿವೆ. ರಸ್ತೆಗಳು, ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಸ್ವಾಮಿ ತೋಟ ವಸ್ತಿಯಿಂದ ಅಭ್ಯಳಗೆ ಎರಡು ಕಿಲೋಮೀಟರ್ ರಸ್ತೆಗೆ 3.60 ಲಕ್ಷ ರೂ. ವೆಚ್ಚವಾಗಿದೆ. ಆ ಸಮಯದಲ್ಲಿ, ರಸ್ತೆಯ ಡಾಂಬರೀಕರಣವನ್ನು ಕಾಮಗಾರಿ ಚಾಲನೆ ನೀಡಿ ಮಾತನಾಡಿ ಅವರು ಎರಡು ಕಿಲೋಮೀಟರ್ ರಸ್ತೆಯ ಕೆಲಸ ವಿಳಂಬವಾಗಿ ಹಲವು ವರ್ಷಗಳೇ ನಿನ್ನಗುದ್ಧಿಗೆ ಬಿದ್ದಿತ್ತು .
ಈ ರಸ್ತೆ ಸಂಬರಗಿ ಮೂಲಕ ಖೀಳೀಗಾಂವ್‌ಗೆ ಹೋಗುತ್ತಿದೆ.ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಇದು ಅನುಕೂಲಕರವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ರಸ್ತೆಯನ್ನು ಮಾಡಿರಲಿಲ್ಲ, ಆದರೆ ಅವರ ಪ್ರಯತ್ನದಿಂದಾಗಿ ರಸ್ತೆಯನ್ನು ಡಾಂಬರೀಕರಣ ಮಾಡಲಾಗುತ್ತಿದೆ. ಹಿಂದಿನ ಸರ್ಕಾರ ರಸ್ತೆ ಕೆಲಸಕ್ಕೆ ವಿಳಂಬ ಮಾಡಿತು ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಸ್ತೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ಆದ್ಯತೆ ನೀಡಿದೆ.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಾಯಕ ಬಾಗಡಿ , ಗ್ರಾ.ಪಂ.ಮಾಜಿ ಅಧ್ಯಕ್ಷ ಭಾರತ್ ಮಾನೆ, ಗುತ್ತಿಗೆದಾರ ರಾಜು ಅಲ್ಬಾಳ್, ಅಣ್ಣಾಸಾಹೇಬ ಮಾನೆ, ವಿಜಯ ವಾಘಮಾರೆ, ಶಂಕರ್, ಆವಘಡೇ ಮಲ್ಲಿಕಾರ್ಜುನ್, ಮಗದುಮ ಗೂಳಪ್ಪನವರು,ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 