ಪರಿಸರ ವಾಹನಕ್ಕೆ ಹೆಚ್ಚ ಒತ್ತು ನೀಡಬೇಕು : ಎಸ್‌ಪಿ ರೋಹನ ಜಗದೀಶ
More emphasis should be given to eco-friendly vehicles: SP Rohan Jagadeesh
ಗದಗ 14: ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಪರಿಸರ ವಾಹನಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ಹೇಳಿದರು.
ಅವರು ಗದಗ ನಗರದ ಮಾಣಿಕಬಾಗ ಆಟೋಮೊಬೈಲ್ಸ್ ಶಾಖೆಯಲ್ಲಿ ಅತ್ಯಾಧುನಿಕ ಟಾಟಾ ಹ್ಯಾರಿಯರ್ ಇವಿ ಕಾರನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ದೃಷ್ಟಿಯಿಂದ ಟಾಟಾದವರು ಟಾಟಾ ಎಲೆಕ್ಟ್ರಿಕಲ್ ಕಾರ್ ಹೊರತಂದಿದ್ದಾರೆ, ಪ್ರಯಾಣಿಕರು ರಸ್ತೆ ಸುರಕ್ಷತಾ ಬಗ್ಗೆ ಹೆಚ್ವಿನ ಒತ್ತು ಕೊಡಬೇಕು ಕಾರ್ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸಿಟ್ ಬೆಲ್ಟ್ ಬಳಕೆ ಮಾಡಿಕೊಳ್ಳಬೇಕು, ವೇಗದ ಮಿತಿ ಕಡಿಮೆ ಇರಲಿ ಎಂದು ಗ್ರಾಹಕರಿಗೆ ತಿಳಿ ಹೇಳಿದರು,
ಉದ್ಘಾಟನೆಗೊಳಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಟಾಟಾದಲ್ಲಿ ಇಂತ ಪ್ರಾಡಕ್ಟ್ ತಂದಿದ್ದು ಖುಷಿ ತಂದಿದ್ದು ನಗರ ಸೇರಿದಂತೆ ಸುತ್ತಮುತ್ತಲಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ ಕುರಡಗಿ ಪರಿಸರ ರಕ್ಷಣೆಗೆ ಇಂತವ ಇವಿ ಕಾರಗಳು ಅತ್ಯವಶ್ಯಕವಾಗಿವೆ ಎಂದು ಹೇಳಿದರು.
ಮಾಣಿಕ್ ಬ್ಯಾಗ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಗದಗ ಶಾಖೆ ಮುಖ್ಯಸ್ಥ ಕಾರ್ತಿಕ ಶಿಗ್ಲಿಮಠ ಅವರು ಮಾತನಾಡಿ, ಹ್ಯಾರಿಯರ್ ಎಲೆಕ್ಟ್ರಿಕಲ್ ಕಾರ್ ವಿಶೇಷತೆಂದರೆ 4ವ್ಹಿಲ್ ಡ್ರೈವ್, 5ಸ್ಟಾರಸೇಫ್ಟಿ, ರೇಟಿಂಗ್, ಸಿಂಗಲ್ ಚಾರ್ಜಗೆ 628 ಕಿಮೀ ಚಲಿಸುತ್ತದೆ, ಅಡ್ಯಾಸ ಲೆವಲ್ಟೊ, ಫ್ಯೂಚರ್ ಇದ್ದು 560ಕ್ಯಾಮೆರಾ ವಿಶೇಷಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈಶ್ವರ. ಕರಮುಡಿ, ಲಿಂಗರಾಜ ಶಿಗ್ಲಿಮಠ, ಎಸ್ ಪಿ ಸಂಶಿಮಠ, ಈಶಪ್ಪ ಮುನವಳ್ಳಿ, ಡಾ ರಾಜಶೇಖರ, ಸೋಮು ಹೊನ್ನಗುಡಿ, ಅವಿನಾಶ ಹೊನ್ನಗುಡಿ, ಬಸವರಾಜ ಮೂಗುಂಡಮಠ, ಸಚಿನ. ಕುರಡಗಿ, ನಾಗರಾಜ ಹಿರೇಮಠ, ಮಹೇಶ. ಮಾಳೆಕೊಪ್ಪಮಠ, ನಂದೀಶ ಕುಬಸದ, ಎಸ್‌ಬಿಐ ಚೀಫ ಮ್ಯಾನೇಜರ ಅರವಿಂದ ದಾಬೋಲೆ, ಕೆನೆರಾ ಬ್ಯಾಂಕ್ ಆರ್‌ಬಿಎಚ್ ಮ್ಯಾನೇಜರ ಕಿರಣ ಪಾಟೀಲ್, ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಪ್ರಸಾದ, ಬ್ಯಾಂಕ್ ಆಫ್ ಇಂಡಿಯಾ ಲೋನ ಸೊರ್ಸಿಂಗ್ ಮ್ಯಾನೇಜರ ಷರೀಫ್, ಮಹಿಂದ್ರಾ ಫೈನಾನ್ಸ್ ಮುತ್ತು ಇಂಡಸಂಡ ಬ್ಯಾಂಕ್ ಶರಣಯ್ಯ ಹಾಗೂ ಮಾಣಿಕಬ್ಯಾಗ್ ಸಿಬ್ಬಂದಿಗಳು ಇದ್ದರು
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 