ಸಂಬರಗಿ 15: ಗ್ಯಾರೆಂಟಿ ಯೋಜನೆಯಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಅದರಿಂದ ಸರ್ಕಾರ ಈ ಯೋಜನೆಯನ್ನು ಸ್ಥಗೀತ ಗೊಳಿಸಬೇಕು ಗ್ರಾಮೀಣ ಭಾಗದ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಗ್ರಾಮೀಣ ಪ್ರದೇಶ ಬರಮುಕ್ತ ಮಾಡಿ ರೈತರ ಸಮಸ್ಯೆಗೆ ಹೆಚ್ಚಿನ ಗಮನ ನೀಡಬೇಕು, ರೈತರ ಕನಸನ್ನು ನನಸು ಮಾಡಲು ಸರಕಾರ ಮುಂದಾಗಬೇಕೆಂದು ಜೈ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ. ಬಿ ಎನ್ ಜಗದೀಶ್ ಹೇಳಿದರು.
ಗಡಿ ಭಾಗದ ಬಳ್ಳಿಗೇರಿ ಗ್ರಾಮದಲ್ಲಿ ಶನಿವಾರ ಜೈ ಕರ್ನಾಟಕ ಕನ್ನಡ ರಾಜ್ಯೋತ್ಸವ ನಿಮಿತ್ಯ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಸಸಿಗೆ ನೀರು ಉಣಸುವ ಮೂಲಕ ಉದ್ಘಾಟಿಸಿ ಮಾತನಾಡಿ ಅವರು ಈ ಭಾಗದ ನೀರಾವರಿ ಯೋಜನೆ ನೆನಗುದ್ದಿಗೆಗೆ ಬಿದ್ದಿದೆ, ಸರಕಾರ ರೈತರ ಸತ್ವ ಪರೀಕ್ಷಾ ನೋಡಬಾರದು ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಿ ರೈತರ ಕನಸು ನನಸು ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು. ಗಡಿ ಭಾಗದ ಕನ್ನಡ ಶಾಲೆಗಳು ಸಮಸ್ಯೆಗೆ ಪರಿಹಾರ ಒದಗಿಸಬೇಕು, ಹೆಚ್ಚಿನ ಶಿಕ್ಷಕರನ್ನು ನೇಮಿಸಬೇಕು, ಗಡಿಭಾಗದ ಕನ್ನಡ ಶಾಲೆಗಳು ಮುಚ್ಚುತ ಇದಾವೆ ಸರ್ಕಾರ ಈ ಕಡೆ ಗಮನ ಹರಿಸ್ತಾ ಇಲ್ಲ, ಈ ಭಾಗದ ನೀರಾವರಿ ಯೋಜನೆ, ವಿವಿಧ ಸಮಸ್ಯೆಗಳ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಚರ್ಚೆ ಮಾಡಲಾಗುವುದು, ಈ ಗ್ರಾಮದಲ್ಲಿ ವೀರ ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಮಾಡಲು ನಾನು ಪ್ರಯತ್ನ ಮಾಡುತ್ತೇನೆ, ಈ ಕುರಿತು ಮುಖ್ಯಮಂತ್ರಿಗೆ ಮಾಹಿತಿ ನೀಡಿ ಸಮಸ್ಯೆ ಪರ್ಯಾಯ ಗೊಳಿಸಲು ಸಿದ್ಧವಾಗಿದ್ದೇನೆ. ಅಭಿವೃದ್ಧಿ ಕಾಮಗಾರಿಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಕಕಮರಿ ಮಠದ ಶ್ರೀ ಸದ್ಗುರು ಅಭಿನಯ ಜಂಗಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವೈಹಿಸಿ ಮಾತನಾಡಿದ ಅವರು ರಾಜಕೀಯ ಜನರು ಚುನಾವಣೆ ವೇಳೆ ಚುನಾವಣೆ ಬಂದ ಮೇಲೆ ಒಬ್ಬರಿಗೊಬ್ಬರು ಶತ್ರುಗಳಾಗುತ್ತಾರೆ ಮತ್ತು ಮತದಾನ ಮುಗಿದ ನಂತರ ಸ್ನೇಹಿತರು ಆಗುತ್ತಾರೆ, ಗಡಿ ಭಾಗದ ಬರ ಗ್ರಾಮಗಳಿಗೆ ನೀರು ಕೊಡಿ ಎಂಬ ಒಂದೇ ಒಂದು ಬೇಡಿಕೆ ಇದೆ ಉಳಿದಂತೆ ಎಲ್ಲ ರಾಜಕೀಯ ನಾಯಕರೂ ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆ ಸಂದರ್ಭದಲ್ಲಿ ತಿರುಗಾಡಲು ಕಷ್ಟವಾಗುವುದರಿಂದ ರೈತರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬಸವೇಶ್ವರ ಶುಗರ್ ಚೇರಮನ್ ರಘುನಾಥ ಕದಂಮ,ಬಸವೇಶ್ವರ್ ಸುಗರ್ಸ್ ನಿರ್ದೇಶಕರಾದ ವಿಜಯ ಕದಂಮ,ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ನ್ಯಾಯವಾದಿ ನಿಂಗಪ್ಪ ಖೋಕಲೆ, ರಾಮಚಂದ್ರಯ್ಯ ಆರ್ ಮುನಿಸ್ವಾಮಿ ರಜಿತ್ ಗಗನರಾಜು, ಪ್ರಾಚಾರ್ಯರು ಮಹಾಲಿಂಗ ಮೇತ್ರಿ, ದೀಪಕ್ ಬುರ್ಲಿ , ಪ್ರಶಾಂತ ತ್ತೋಡ್ಕರ್ ರೇಖಾ ಪಂಜಾಬ್ಗಳು, ನಿಜಪ್ಪ ಹಿರೇಮನಿ, ಸೇರಿದಂತ ಗಣ್ಯರು ಜೈ ಕರ್ನಾಟಕ ಎಲ್ಲತಾಲೂಕ ಜಿಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಆಕಾಶ ನಂದಗಾವ್ ಸ್ವಾಗತಿಸಿದರು, ವಿಜಯ ಪವಾರ್ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ್ ಬಡ್ಕಂಬೆ ಕಾರ್ಯಕ್ರಮ ನಿರೂಪಣೆ ಮಾಡಿದರು.