ರೈತರಿಗೆ ಕೈಕೊಟ್ಟ ಮುಂಗಾರು ಮಳೆ : ರೈತರ ಬಾಳು ಹಾಳು

    ರೈತರಿಗೆ ಕೈಕೊಟ್ಟ ಮುಂಗಾರು ಮಳೆ : ರೈತರ ಬಾಳು ಹಾಳು  Monsoon rains fail farmers: Farmers' lives ruined

ಲೋಕದರ್ಶನ ವರದಿ

ಯರಗಟ್ಟಿ 30: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಕುಸಿದ ಕಾರಣ ರೈತರ ಆತಂಕ ಹೆಚ್ಚಿದೆ. ತಾಲ್ಲೂಕಿನ ರೈತರು ಹೆಸರು, ಉದ್ದು, ಶೇಂಗಾ, ಮುಸುಕಿನ ಜೋಳ, ಹತ್ತಿ ಸೇರಿ ವಿವಿಧ ಬಗೆಯ ಬಿತ್ತನೆ ಬೀಜ, ಗೊಬ್ಬರ ಇಟ್ಟುಕೊಂಡು ಜಮೀನು ಬಿತ್ತನೆ ಮಾಡಿಕೊಂಡರು ಮಳೆ ಕೈಕೊಟ್ಟಿದೆ.  ಮುಂಗಾರಿನ ಆರಂಭದಲ್ಲಿ ಕೆಲವೆಡೆ ಮಳೆ ಕೊಂಚ ಸುರಿದಿದ್ದರಿಂದ ಹೆಸರು, ಉದ್ದು, ಈರುಳ್ಳೆ, ಶೇಂಗಾ, ಬಿತ್ತನೆ ಮಾಡಿ ಹೆಡೆಕುಂಟೆ ಹೊಡೆದು ಕಳೆ ತೆಗೆಯಲಾಗಿತ್ತು. ಆ ಬೆಳೆಗಳಿಗೆ ಮಳೆ ಅಗತ್ಯವಾಗಿದ್ದು, ಮುಂಗಾರು ಕೈಕೊಟ್ಟ ಕಾರಣ ಬೆಳೆ ಬಾಡಿದವು ಜೊತೆಗೆ ಹಲವು ರೋಗಗಳಿಗೆ ತುತ್ತಾಗಿವೆ.

ಓಷಧ ಸಿಂಪಡಣೆ ಮಾಡುವುದಕ್ಕೂ ಹಿಂದೆ ಮುಂದೆ ನೋಡದ ರೈತರು ಸಿಂಪಡಣೆ ಮಾಡಿ ಕೈಸುಟ್ಟುಕೊಂಡರು. ಹಲವೆಡೆ ಭೂಮಿ ಉಳುಮೆ ಮಾಡಲು ಮಳೆಯಿಲ್ಲದ ಕಾರಣ ಭೂಮಿಯನ್ನು ಬೀಳು ಬಿಟ್ಟು ಮಳೆಗಾಗಿ ಮುಗಿಲಿನತ್ತ ನೋಟ ಬೀರುವಂತಾಗಿದೆ. ಮಳೆ ಸುರಿಯದ್ದರಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಗ್ರಾಮೀಣ ಭಾಗದಲ್ಲಿ ರೈತರು ಮಳೆಗಾಗಿ ದೇವರ ಮೊರೆ ಹೋಗುವಂತ ಘಟನೆಗಳು ಬೆಳಕಿಗೆ ಬಂದಿವೆ.

‘ನೀರಿಲ್ಲದೆ ಹೆಸರು, ಉದ್ದು, ಶೇಂಗಾ, ಮುಸುಕಿನ ಜೋಳ, ಹತ್ತಿ ಬೆಳೆಗಳು ಒಣಗಿದವು ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಸಾಲ ಮಾಡಿ ಮುಂಚಿತವಾಗಿಯೇ ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಮಳೆ ಬಾರದಕಾರಣ ಹೆಸರು, ಉದ್ದು, ಮೆಕ್ಕೆಜೋಳ, ಶೇಂಗಾ, ಹತ್ತಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಏನಾದರೂ ಮಾಡಿ ಸರಕಾರ ರೈತರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಏನು ಮಾಡಬೇಕು ಎಂಬುದೇ ತೋಚದಂತಾಗಿದೆ’ ಎಂದು ರೈತ ಈರ​‍್ಪ ಹಾದಿಮನಿ, ಮಹಾಂತೇಶ ತೋಟಗಿ ‘ಪತ್ರಕರ್ತರ’ ಎದುರು.

ತಮ್ಮ ಅಳಲು ತೋಡಿಕೊಂಡರು.  ಈ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ 27000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ 250 ಹೆಕ್ಟೇರ್ ಶೇಂಗಾ ಬಿತ್ತನೆ, 6000 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ, 6500 ಹೆಕ್ಟೇರ್ ಹೆಸರು ಬಿತ್ತನೆ, 100 ಹೆಕ್ಟೇರ್ ಉದ್ದು ಬಿತ್ತನೆ, 300 ಹೆಕ್ಟೇರ್ ಹತ್ತಿ ಬಿತ್ತನೆ, 12000 ಹೆಕ್ಟೇರ್ ಕಬ್ಬು ಬಿತ್ತನೆ ಬಿತ್ತನೆ ಮಾಡಿದ ರೈತಬಾಳು ಹಾಳಾಗಿದೆ ಆದರು ಸರಕಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ.