ಬೆಂಗಳೂರು, ಜುಲೈ 19 ರಾಜ್ಯದ ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಹಲವೆಡೆ ಭಾರಿ ಮಳೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಕೂಡ ವರ್ಷಧಾರೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗೇರುಸೊಪ್ಪದಲ್ಲಿ ಅತಿ ಹೆಚ್ಚು 17 ಸೆ.ಮೀ. ಮಳೆ ದಾಖಲಾಗಿದೆ. ಉಳಿದಂತೆ, ಸಿದ್ದಾಪುರ 17, ಆಗುಂಬೆ 14, ಮಂಗಳೂರು, ಕದ್ರಾ ತಲಾ 11, ಲಿಂಗನಮಕ್ಕಿ 9, ಬೈಲಹೊಂಗಲ 8, ಹೊನ್ನಾವರ, ಶೃಂಗೇರಿ ತಲಾ 7, ರಾಣೆಬೆನ್ನೂರು, ಬಿ.ದುರ್ಗಾ ತಲಾ 6, ಮೂಡಬಿದಿರೆ, ಪುತ್ತೂರು, ಕಾರ್ಕಳ, ಕೊಲ್ಲೂರು, ಕಿರವಟ್ಟಿ, ಸವದತ್ತಿ, ಚಿಂಚೋಳಿ, ಬಾಗಮಂಗಲ, ಶ್ರೀರಾಮಪುರ ತಲಾ 5, ಸುಬ್ರಹ್ಮಣ್ಯ , ಜಯಪುರ, ಬೆಂಗಳೂರಿನಲ್ಲಿ ತಲಾ 4, ಮಂಗಳೂರು, ಮಾನಿ, ಭಟ್ಕಳ, ಅಂಕೋಲ, ಹಾವೇರಿ, ಹುನಗುಂದ, ಬಾಗೇವಾಡಿ, ಮಡಿಕೇರಿ, ತಾಳಗುಪ್ಪ, ಬೇಲೂರು, ಚಿಕ್ಕಬಳ್ಳಾಪುರದಲ್ಲಿ ತಲಾ 3, ಸುಳ್ಯ, ಕೋಟಾ, ಶಿರಾಳಿ, ಮಂಕಿ, ಸಿದ್ದಾಪುರ, ಮುನ್ಡಗೋಡು, ಹಳಿಯಾಳ, ನರಗುಂದ, ಕಲಬುರಗಿ, ಹೊಸನಗರ, ಬಸರಾಳು, ಮದ್ದೂರು, ಹೊನ್ನಾಳಿ, ಹೊಸದುರ್ಗ, ಹುಲಿಯೂರು ದುರ್ಗ, ರಾಮನಗರ, ಚನ್ನಪಟ್ಟಣದಲ್ಲಿ ತಲಾ 2 ಸೆ.ಮೀ ಮಳೆಯಾಗಿದೆ.
ಶನಿವಾರ ಮುಂಜಾನೆಯವರೆಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 28 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಬಹುದಾಗಿದೆ.