ಲೋಕದರ್ಶನ ವರದಿ
ಕಾಗವಾಡ 21: ಪಾಲಕರು ತಮ್ಮ ಮಕ್ಕಳ ವರ್ತನೆ ಮತ್ತು ಕಲಿಕೆಯ ಬಗ್ಗೆ ಕಾಳಜಿವಹಿಸಿ ಅವರ ದಿನನಿತ್ಯದ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು.ಆದಷ್ಟು ಅವರನ್ನು ಮೊಬೈಲ್ಗಳ ಬಳಕೆಯಿಂದ ದೂರವಿಡಲು ಹಾಗೂ ಅವರ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಪ್ರಾಚಾರ್ಯ ಡಾ.ಎಸ್.ಓ.ಹಲಸಗಿ ಅಭಿಪ್ರಾಯಪಟ್ಟರು.
ಮಂಗಳವಾರ ರಂದು ಸ್ಥಳೀಯ ಶಿವಾನಂದ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕ-ಪಾಲಕರ ಸಂಘದ ವತಿಯಿಂದ ಹಮ್ಮಿಕೊಂಡ ಶಿಕ್ಷಕ-ಪಾಲಕರ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ನಮ್ಮ ಮಹಾವಿದ್ಯಾಲಯಕ್ಕೆ ನ್ಯಾಕ್ ಮೂರನೇ ಆವರ್ತನಕ್ಕಾಗಿ ನ್ಯಾಕ್ ತಂಡವು ಫೆಬ್ರುವರಿ ಕೊನೆಯ ವಾರದಲ್ಲಿ ಭೇಟಿ ನೀಡುವ ನಿರೀಕ್ಷೆಯಿದ್ದು ಮಹಾವಿದ್ಯಾಲಯದ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ ಮೌಲ್ಯಾಂಕನ ಮಾಡಲು ಬಂದಾಗ ತಮ್ಮ ಉಪಸ್ಥಿತಿ ಹಾಗೂ ಭೇಟಿ ನೀಡಿದ ನ್ಯಾಕ್ ತಂಡದ ಜೊತೆಗೆ ತಮ್ಮ ಒಳ್ಳೇಯ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಅವಶ್ಯವಿರುತ್ತದೆ. ಕಾರಣ ತಾವು ಸದಾ ಕಾಲೇಜಿನ ಅಭಿವೃದ್ಧಿಗೊಸ್ಕರ ಕಾಲೇಜಿನೊಂದಿಗೆ ಇದೇ ಸಂಬಂಧ ಹೊಂದಿರಬೇಕೆಂದು ಹೇಳಿದರು.
ಮಹಾವಿದ್ಯಾಲಯದ ಶಿಕ್ಷಕ-ಪಾಲಕರ ಸಂಘದ ಕಾರ್ಯಧ್ಯಕ್ಷರು ಹಾಗೂ ಕಾಲೇಜು ಸ್ಟೆರಿಂಗ್ ಕಮೀಟಿಯ ಸಂಯೋಜಕರಾದ ಪ್ರೊ.ಎಸ್.ಎಸ್. ಬಾಗನೆ, ನ್ಯಾಕ್ದ ಕಾರ್ಯ ಬಾಹುಳ್ಯವನ್ನು ಸವಿಸ್ಥಾರವಾಗಿ ಪಾಲಕರಿಗೆ ವಿವರಿಸಿ ಪಾಲಕರು ಮತ್ತು ವಿದ್ಯಾರ್ಥಿಗಳು ನ್ಯಾಕ್ನ ಕಾರ್ಯದಲ್ಲಿ ಪಾಲ್ಗೊಂಡು ಮಹಾವಿದ್ಯಾಲಯಕ್ಕೆ ಒಳ್ಳೆಯ ಮಾನ್ಯತೆ ಸಿಗುವಂತೆ ಸಹಕರಿಸಬೇಕು ಎಂದರು.ಮತ್ತು ನ್ಯಾಕ್ ನೀಡುವ ಶ್ರೇಣಿ ಮತ್ತು ಮಹಾವಿದ್ಯಾಲಯದಲ್ಲಿರುವ ಎಲ್ಲ ಸೌಲಭ್ಯಗಳ ಕುರಿತು ಅಲ್ಲದೆ ಪ್ರಗತಿಯ ಸಂಕ್ಷಿಪ್ತ ನೋಟವನ್ನು ವಿವರಿಸಿದರು.
ವಿದ್ಯಾಥರ್ಿ ಕಲ್ಯಾಣಾಧಿಕಾರಿ ಪ್ರೊ. ಬಿ.ಎ.ಪಾಟೀಲ ಮಾತನಾಡಿ, ಪಾಲಕರು ಮಹಾವಿದ್ಯಾಲಯಕ್ಕೆ ಎಲ್ಲ ರೀತಿಯ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಗಮನಿಸುತ್ತಿರಬೇಕು ಅಂದಾಗ ಮಾತ್ರ ಶಿಕ್ಷಕ ಮತ್ತು ಪಾಲಕರ ನಡುವಿನ ಈ ರೀತಿಯ ಸಭೆಗಳು ಯಶಸ್ವಿಯಾಗುವುದಕ್ಕೆ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಸಂಸ್ಥೆಯ ಏಕನ್ಯಾಸಧಾರಿಗಳಾದ ಪ.ಪೂ. ಯತೀಶ್ವರಾನಂದ ಸ್ವಾಮೀಜಿಗಳು ವಿದ್ಯಾಥರ್ಿಗಳ ಬೆಳವಣಿಗೆಗೆ ಶಿಕ್ಷಕರಷ್ಟೇ ಪಾಲಕರದ್ದು ಜವಾಬ್ದಾರಿಯಿದ್ದು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿದರೆ ತಮ್ಮ ಮಕ್ಕಳು ಭಾವಿ ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಡಾ.ಎಸ್.ಎ.ಕಕರ್ಿ ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ 100ಕ್ಕೂ ಹೆಚ್ಚು ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಿ.ಡಿ.ನಗರಕರ ಸ್ವಾಗತಿಸಿದರು, ಕು. ಸೋನಾಲಿ ಫಡತರೆ ಕಾರ್ಯಕ್ರಮ ನಿರೂಪಿಸಿದರು. ಡಾ.ಆರ್.ಎಸ್.ಕಲ್ಲೋಳಿಕರ ವಂದಿಸಿದರು.