ತಮಿಳುನಾಡಿನಲ್ಲಿ ಮೋದಿ ದೇಗುಲ

ತಿರುಚಿನಾಪಳ್ಳಿ, ಡಿ 26, ರಾಜಕೀಯ ನಾಯಕರು ಮತ್ತು ಸೆಲೆಬ್ರಿಟಿಗಳ ಹೆಸರಿನಲ್ಲಿ ದೇಗುಲ ನಿರ್ಮಿಸುವ ಪ್ರವೃತ್ತಿಯನ್ನು ಮುಂದುವರಿಸಿರುವ ತಮಿಳುನಾಡಿದ ರೈತನೋರ್ವ ಪ್ರಧಾನಿ ನರೇಂದ್ರ ಮೋದಿ ಅವರ ದೇಗುಲ ನಿರ್ಮಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.  ತಮಿಳುನಾಡಿನ 50 ವರ್ಷದ ರೈತ ಪಿ.ಶಂಕರ್  ತಿರುಚಿನಾಪಳ್ಳಿಯ ಎರಕುಡಿಯಲ್ಲಿನ ತಮ್ಮ ಕೃಷಿ ಭೂಮಿಯಲ್ಲಿ 8-8 ಅಡಿಯ ದೇಗುದಲ್ಲಿ ಮೋದಿ ಅವರ ಪ್ರತಿಮೆ ಸ್ಥಾಪಿಸಿದ್ದಾರೆ. ಪ್ರಧಾನಿ ಮೋದಿ ಅವರು ಬಡವರು ಹಾಗೂ ಹಿಂದುಳಿದ ಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಅನೇಕ ಕಾರ್ಯಕ್ರಮಗಳಿಗೆ ಧನ್ಯವಾದ ಸಮರ್ಪಣೆಯಾಗಿ ಇದನ್ನು ನಿರ್ಮಿಸಲಾಗಿದೆ. ಹಣೆಯಲ್ಲಿ ತಿಲಕ ಹೊಂದಿದ್ದು, ನೀಲಿ ಶಾಲನ್ನು ಹೊಂದಿರುವ ಮೋದಿಯ ಪ್ರತಿಮೆ ಸಾಕಷ್ಟು ಜನರನ್ನು ಆಕರ್ಷಿಸುತ್ತಿದೆ. ಇದನ್ನು ಒಂದು ವಾರದ ಹಿಂದೆ ಉದ್ಘಾಟನೆಗೊಂಡಿತ್ತು. 1.20 ಲಕ್ಷ ರೂ.ವೆಚ್ಚದ ಈ ದೇಗುಲವನ್ನು 8 ತಿಂಗಳುಗಳಲ್ಲಿ ನಿರ್ಮಿಸಲಾಗಿದೆ. ಪ್ರತಿನಿತ್ಯ ಇಲ್ಲಿ ಮೋದಿ ಪ್ರತಿಮೆಗೆ ಆರತಿ ಮಾಡಲಾಗುತ್ತದೆ. ಎಂಜಿಆರ್ ಹಾಗೂ ಜಯಲಲಿತಾ ಅವರ ಅಭಿಮಾನಿಯಾಗಿರುವ ಇವರು ಮೋದಿ ಅವರ ಕೆಲಸಗಳಿಗೆ ಪ್ರಭಾವಿತರಾಗಿದ್ದಾರೆ.  ಅವರ ಎರಡನೇ ಬಾರಿ ಅಧಿಕಾರಕ್ಕೇರಿದರೆ ಮುಡಿ ನೀಡುವುದಾಗಿ ಡಿಂಡಿಗುಲ್ ಜಿಲ್ಲೆಯ ಪಳನಿಯ ಬೆಟ್ಟದಲ್ಲಿ ಹರಕೆ ಹೊತ್ತುಕೊಂಡಿದ್ದರಂತೆ. ಆದ್ದರಿಂದ  ತಾವು ಈಗ ಹೋಗಿ ಹರಕೆ ತೀರಿಸುವುದಾಗಿ ಅವರು ಯುಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮತ್ತು ಶೌಚಾಲಯ ನಿರ್ಮಾಣ ಯೋಜನೆಯ ಫಲಾನುಭವಿಯಾಗಿದ್ದಾರೆ.  ತಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ವೈದ್ಯ ಹಾಗೂ ಇನ್ನೊಬ್ಬರನ್ನು ಇಂಜಿನಿಯರ್ ಮಾಡುವ ಗುರಿ ಹೊಂದಿರುವ ಶಂಕರ್, ಮೋದಿ ಅವರು ದೇಗುಲಕ್ಕೆ ಭೇಟಿ ನೀಡಲಿ ಎಂಬ ಆಶಯ ಹೊಂದಿದ್ದಾರೆ.