ಉಡುಪಿ, ಆಗಸ್ಟ್ 31: ದೇಶದಲ್ಲಿ ವಿರೋಧ ಪಕ್ಷಗಳು ಬಲವಾಗಿಲ್ಲ ಎಂಬ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬ್ಯಾಂಕ್ ಗಳ ವಿಲೀನ ಸೇರಿದಂತೆ ಮನಸೋಇಚ್ಛೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ದೂರಿರುವ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸರ್ಕಾರದ ಈ ಧೋರಣೆ ಅಭಿವೃದ್ಧಿಗೆ ಮಾರಕ ಎಂದು ಉಡುಪಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರದ ಎನ್ ಡಿ ಎ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪಿಸಲು ಕಾಂಗ್ರೆಸ್ ನಾಯಕರು ಮೊದಲು ಎಚ್ಚೆತ್ತುಕೊಳ್ಳಬೇಕು. ದೇಶಾದ್ಯಂತ ಈ ಸರ್ಕಾರದ ಜನ ವಿರೋಧಿ ಕ್ರಮಗಳ ವಿರುದ್ದ ಹೋರಾಟ ನಡೆಸಬೇಕು. ಇದು ಕಾಂಗ್ರೆಸ್ ನ ರಾಷ್ಟ್ರೀಯ ಕರ್ತವ್ಯ ಕೂಡಾ ಎಂದು ಮೊಯ್ಲಿ ಸಲಹೆ ನೀಡಿದ್ದಾರೆ.
ಕೇಂದ್ರೀಯ ಏಜೆನ್ಸಿಗಳಾದ ಸಿಬಿಐ, ಇಡಿ ಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಹೆದರಿಸುವ, ಹಿಂಸಿಸುವ ಕೆಲಸ ನಡೆಯುತ್ತಿದೆ. ಚಿದಂಬರಂ ಅವರನ್ನು ಬಂಧಿಸಲಾಗಿದೆ. ಇನ್ನು ಡಿ .ಕೆ. ಶಿವಕುಮಾರ್ ಅವರನ್ನೂ ಬಂಧಿಸಲಿದ್ದಾರೆ. ಇಂತಹ ಕುತಂತ್ರಗಳಿಗೆ ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಹೆದರಬಾರದು ಎಂದು ಸಲಹೆ ನೀಡಿದರು.
ಬ್ಯಾಂಕ್ ಗಳ ವಿಲೀನ ಕೇಂದ್ರ ಸರ್ಕಾರದ ಆತುರದ ನಿರ್ಧಾರ . ಕಾಶ್ಮೀರ ವಿಚಾರದಲ್ಲೂ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ ಎಂದು ಮೊಯ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಬ್ಯಾಂಕ್ ವಿಲೀನ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ ಅವರು ಕರಾವಳಿ ಜಿಲ್ಲೆಗಳು ಬ್ಯಾಂಕ್ಗಳ ತೊಟ್ಟಿಲು. ಅವಿಭಜಿತ ಕರಾವಳಿ ಜಿಲ್ಲೆ ಜಿಲ್ಲೆಗಳು ನಾಲ್ಕು ಬ್ಯಾಂಕ್ಗಳ ತವರು. ಮೊದಲು ವಿಜಯ ಬ್ಯಾಂಕ್ ವಿಲೀನಗೊಳಿಸಿದರು ಈಗ ಕೆನರಾ, ಸಿಂಡಿಕೇಟ್ ಕಾಪರ್ೊರೇಷನ್ ಬ್ಯಾಂಕ್ ಸರದಿ ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಬ್ಯಾಂಕ್ ಗಳಿಗೂ ತನ್ನದೇ ಆದ ಒಂದು ಅಸ್ಮಿತೆ ಇದೆ, ಸಣ್ಣ ಬ್ಯಾಂಕ್ ಗಳ ವಿಲೀನ ಮಾಡುವ ಮೂಲಕ ದೊಡ್ಡ ಬ್ಯಾಂಕ್ ಮಾಡುತ್ತೇವೆ ಎನ್ನುತ್ತಾರೆ. ಈ ಬ್ಯಾಂಕ್ಗಳು ಇನ್ನು ಗ್ರಾಮೀಣಜನರಿಗೆ ಸೇವೆ ತಲುಪುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಾಪರ್ೊರೇಟ್ ವಲಯಗಳಿಗೆ ಸಾಲ ಕೊಡಲು ದೊಡ್ಡ ಬ್ಯಾಂಕ್ ಮಾಡಿದ್ದಾರೆ. ನಮ್ಮ ಬ್ಯಾಂಕ್ಗಳನ್ನು ಹೊರದೇಶದ ಬ್ಯಾಂಕ್ಗಳಿಗೆ ವಿಲೀನ ಮಾಡಿದರೂ ಜನರು ಅಚ್ಚರಿಪಡಬೇಕಾಗಿಲ್ಲ. ರಿಸವರ್್ ಬ್ಯಾಂಕ್ ದೇಶದ ಆಥರ್ಿಕತೆಯ ಬುನಾದಿ. ರಿಸವರ್್ ಬ್ಯಾಂಕ್ ಮೀಸಲು ನಿಧಿಯನ್ನು ಕೇಂದ್ರ ಸಕರ್ಾರ ಪಡೆದಿದೆ. ಆಥರ್ಿಕ ತುತರ್ು ಪರಿಸ್ಥಿತಿ ಇದ್ದಾಗ ಮಾತ್ರ ಹೀಗೆ ಮಾಡುತ್ತಾರೆ. ಈಗ ದೇಶದಲ್ಲಿ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 18 ಜಿಲ್ಲೆಗಳಲ್ಲಿ ಉಂಟಾದ ನೆರೆಯಿಂದ ಸುಮಾರು 5 ಲಕ್ಷ ಕೋಟಿ ನಷ್ಟವಾಗಿದೆ. ಐಎಎಸ್ ಅಧಿಕಾರಿಗಳ ನಿಯೋಗದಿಂದ ಪ್ರಯೋಜನ ಇಲ್ಲ. ತಜ್ಞರ ಸಮಿತಿ ಮಾಡಬೇಕು. ಕೇಂದ್ರ ಸಕರ್ಾರ ಪ್ರವೇಶ ಆಗಬೇಕು. ಇವತ್ತಿನವರೆಗೆ ಕೇಂದ್ರ ಸಕರ್ಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ನುಡಿದರು
ಪರಿಹಾರ ಘೋಷಣೆಗೆ ಪ್ರಧಾನಿ ಮಂತ್ರಿಗಾಗಿ ಕಾಯಬೇಕೆ..? ಎಂದು ಪ್ರಶ್ನಿಸಿದ, ಮೊಯ್ಲಿ ಅಮಿತ್ ಷಾ ರಾಷ್ಟ್ರೀಯ ವಿಪತ್ತು ಸಮಿತಿ ಅಧ್ಯಕ್ಷರೂ ಕೂಡಾ. ಅವರು ಬಂದು ರಾಜ್ಯದ ಸ್ಥಿತಿ ಖುದ್ದು ನೋಡಿದ್ದಾರೆ. ಹಾಗಿದ್ದರೂ ಪರಿಹಾರ ಘೋಷಿಸಿಲ್ಲ ಇದನ್ನು ನೋಡಿದರೆ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ನೆರೆ ಪರಿಸ್ಥಿತಿಯನ್ನು ಹಗುರವಾಗಿ ತೆಗೆದುಕೊಂಡಿವೆ ಎಂದು ಆರೋಪಿಸಿದರು.