ಮುಂಬೈ, 23 ಮಹಾರಾಷ್ಟ್ರ ರಾಜಕೀಯ ದೊಡ್ಡ ತಿರುವು ಪಡೆದುಕೊಂಡಿದೆ. ರಾತ್ರೋ ರಾತ್ರಿ ಸಮೀಕರಣಗಳು ಬದಲಾಗಿವೆ. ಬೆಳಗ್ಗೆ ಎದ್ದು ನೋಡಿದರೆ ಮರಾಠ ನಾಡಿನ ರಾಜಕೀಯದಲ್ಲಿ ಯಾರೂ ಊಹಿಸದ ರೀತಿ ನಡೆದುಹೋಗಿವೆ. ಅಧಿಕಾರ ಹಿಡಿದೇ ಬಿಟ್ಟೆವು ಎಂಬ ಶಿವಸೇನೆಯ ಕನಸನ್ನು ಬಿಜೆಪಿ - ಎನ್ಸಿಪಿ ಭಗ್ನ ಗೊಳಿಸಿವೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಇನ್ನೇನು... ಮುಖ್ಯಮಂತ್ರಿ ಗದ್ದುಗೆಯಲ್ಲಿ ಕುಳಿತು ಬಿಟ್ಟೆ ಎಂದು ಭಾವಿಸಿಕೊಂಡ ಕ್ಷಣಗಳಲ್ಲೇ ಅನಿರೀಕ್ಷಿತವಾಗಿ ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಮಂತ್ರಿಯಾಗಿ ಆಗಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಬಿಜೆಪಿ - ಎನ್ಸಿಪಿ ಕೂಡಿ ಸಕರ್ಾರ ರಚಿಸಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರವೂ ನಡೆದುಹೋಗಿದೆ. ಮುಂಬೈ ನಗರ ಮೇಯರ್ ಹುದ್ದೆಯನ್ನು ಸವರ್ಾನುಮತದಿಂದ ಪಡೆದುಕೊಂಡೆ ಎಂದು ಹೆಮ್ಮೆಪಡುತ್ತಿದ್ದ ಶಿವಸೇನೆಗೆ, ಬಿಜೆಪಿ -ಎನ್ಸಿಪಿ ಸೇರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿವೆ. ಶಿವಸೇನೆ- ಎನ್ಸಿಪಿ ಮೈತ್ರಿಯನ್ನು ಟೀಕಿಸಿದ್ದ ಬಿಜೆಪಿ, ರಾತ್ರಿ ಬೆಳಗಾಗುವುದರೊಳಗೆ ಎನ್ ಸಿ ಪಿ ಜತೆ ಸೇರಿ ಸಮ್ಮಿಶ್ರ ಸಕರ್ಾರವನ್ನು ರಚಿಸಿರುವುದು ಗಮನಾರ್ಹವಾಗಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ತಮ್ಮದೇ ಸಕರ್ಾರ ರಚನೆಯಾಗುವಂತೆ ನೋಡಿಕೊಳ್ಳುವ ಮೂಲಕ ಚಾಣಾಕ್ಷತೆ ಮೆರೆದಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಶರದ್ ಪವಾರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗಲೇ ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ಸಿಪಿ ಸಮ್ಮಿಶ್ರ ಸಕರ್ಾರ ಖಾಯಂ ಎಂದು ಬಿತ್ತರಗೊಂಡ ಸುದ್ದಿಗಳು ಇಂದು ನಿಜವಾಗಿವೆ. ಅದೇ ಸಮಯದಲ್ಲಿ, ಶರದ್ ಪವಾರ್ ಗೆ ಪ್ರಧಾನಿ ಮೋದಿ ರಾಷ್ಟ್ರಪತಿ ಹುದ್ದೆಯ ಆಮಿಷ ವೊಡ್ಡಿದ್ದಾರೆ ಎಂಬ ಶಿವಸೇನೆಯ ಆರೋಪವನ್ನು ಶರದ್ ಪವಾರ್ ತಳ್ಳಿಹಾಕಿದ್ದರು. ಕಾಂಗ್ರೆಸ್ ಮತ್ತು ಶಿವಸೇನೆ ಸಕರ್ಾರ ರಚನೆಗೆ ಮಾತುಕತೆ ನಡೆಸುತ್ತಿರುವಾಗಲೇ ಪವಾರ್ ಬಿಜೆಪಿ ಜತೆ ಸೇರಿ ಸಕರ್ಾರ ರಚಿಸಿಸುವ ಮೂಲಕ ಚಾಣಕ್ಷತೆ ಪ್ರದಶರ್ಿಸಿದ್ದಾರೆ. ಮೋದಿ-ಶಾ ಜೋಡಿ ಶಿವಸೇನೆಗೆ ಅನಿರೀಕ್ಷಿತ ಆಘಾತ ನೀಡುವ ಮೂಲಕ ದೇಶದ ಪ್ರಸಕ್ತ ರಾಜಕಾರಣದಲ್ಲಿ ತಮ್ಮನ್ನು ಮೀರಿಸುವವರು ಯಾರೂ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.