ಅಂತಾರಾಷ್ಟ್ರೀಯ ಆಲೂ ಸಮ್ಮೇಳನದಲ್ಲಿ ಮೋದಿ ಭಾಷಣ

ನವದೆಹಲಿ, ಜ.27 :            ಗುಜರಾತ್ ನ ಗಾಂಧಿನಗರದಲ್ಲಿ ನಡೆಯಲಿರುವ ಮೂರನೇ ಅಂತಾರಾಷ್ಟ್ರೀಯ ಆಲೂಗಡ್ಡೆ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.  

ವಿಡಿಯೋ ಕಾನ್ಫರೆನ್ಸ್ ಮೂಲಕ, ಮೋದಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆಲೂಗಡ್ಡೆ ಕ್ಷೇತ್ರದಲ್ಲಿ ಸಂಶೋಧನೆ  ಮತ್ತು ವ್ಯಾಪಾರ ಅವಕಾಶಗಳ ಬಗ್ಗೆ ಗಮನ ಹರಿಸಲಿದ್ದಾರೆ. ಮತ್ತು ಮುಂಬರುವ ದಶಕಗಳ ಮಾರ್ಗಸೂಚಿಯನ್ನು ಸಹ ರೂಪಿಸುವ ಸಾಧ್ಯತೆ ಇದೆ. 

ವಿಶ್ವ ಆಲೂಗೆಡ್ಡ ಸಮ್ಮೇಳನ ಪ್ರತಿ 10 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇದಕ್ಕೂ ಮೊದಲು 1999 ಮತ್ತು 2008 ರಲ್ಲಿ ಈ ಸಮ್ಮೇಳನ ನಡೆದಿತ್ತು.ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಅದರ ಕೇಂದ್ರ ಕೃಷಿ ಸಂಶೋಧನಾ ಸಂಸ್ಥೆ (ಶಿಮ್ಲಾ) ಮತ್ತು ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ ಸಹಯೋಗದೊಂದಿಗೆ ಭಾರತೀಯ ಆಲೂಗಡ್ಡೆ ಸಂಘವು ಈ ಸಮ್ಮೇಳನವನ್ನು ಆಯೋಜಿಸಿದೆ.  

ಗುಜರಾತ್ ಭಾರತದಲ್ಲಿ ಅತಿದೊಡ್ಡ ಆಲೂಗೆಡ್ಡೆ ಉತ್ಪಾದಿಸುವ ರಾಜ್ಯವಾಗಿದೆ ಮತ್ತು ಭಾರತದಲ್ಲಿ ಆಲೂಗೆಡ್ಡೆ ಕೃಷಿ ಕಳೆದ 11 ವರ್ಷಗಳಲ್ಲಿ ಶೇಕಡಾ 19 ರಷ್ಟು ಹೆಚ್ಚಾಗಿದೆ.