ಲೋಕದರ್ಶನ ವರದಿ
ಗಂಗಾವತಿ 31: ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಪ್ರತಿಯೊಬ್ಬ ಯುವಕರಿಗೂ ಉದ್ಯೋಗ ಸೃಷ್ಟಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ, ಅವರ ಆಶಯದಂತಯೇ ಇಲ್ಲಿ ಕೇಂದ್ರ ಸರಕಾರದ ಕೌಶಲ್ಯ ಯೋಜನೆಯಲ್ಲಿ ಹತ್ತಾರು ಕಂಪನಿಗಳು ಈ ಭಾಗದ ಯುವಕರಿಗೆ ಉದ್ಯೋಗ ನೀಡಲು ಮುಂದಾಗಿದ್ದು, ಯುವಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ರೈತ ಮುಖಂಡ ಹೆಚ್ಎಂ ತಿಪ್ಪೇರುದ್ರಸ್ವಾಮಿ ಕರೆ ನೀಡಿದರು.
ತಾಲೂಕಿನ ಮರಳಿ ಗ್ರಾಮದ ಎಂಎಸ್ಎಂಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಆಯೋಜಿಸಿದ ಕೇಂದ್ರ ಸರಕಾರದ ಕೌಶಲ್ಯ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕೌಶಲ್ಯಭಿವೃದ್ಧಿಗಳಿಂದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. ಉದ್ಯೋಗ ವಂಚಿತರು ಮತ್ತು ವಿದ್ಯಾಥರ್ಿಗಳು ಬಡವರು ಮತ್ತು ಮಧ್ಯಮವಗದವರಿಗೆ ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿಗಳಿಂದ ತರಬೇತಿ ಮತ್ತು ಉದ್ಯೋಗ ನೀಡುತ್ತಿರುವುದು ಪ್ರಶಂಶನೀಯ ಮತ್ತು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಎಂಎಸ್ಎಂಸ್ ಶಿಕ್ಷಣಾ ಸಂಸ್ಥೆಯ ಅಧ್ಯಕ್ಷ ಸಿದ್ದರಾಮಸ್ವಾಮಿ ಹೆಚ್ಎಂ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆವತಿಯಿಂದ ಉದ್ಯೋಗಮೇಳ ಆಯೋಜಿಸಿದ್ದೇವೆ. ಪ್ರಧಾನಮಂತ್ರಿ ಮೋದಿಯ ಕನಸು ಪ್ರತಿಯೊಂದು ಸಂಸದ ಕ್ಷೇತ್ರಗಳಲ್ಲಿ ನಿರುದ್ಯೋಗಿಗಳಿಗೆ ಕೌಶಲ್ಯ ನೀಡಿ ಉದ್ಯೋಗವನ್ನು ಪ್ರಧಾನಮಂತ್ರಿ ಕೌಶಲ್ಯವಿಕಾಸ್ ಯೋಜನೆ ಒದಗಿಸುತ್ತಿದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಸಹಕಾರದಿಂದ ಮರಳಿ ಎಂಸ್ಎಸ್ ಶಿಕ್ಷಣಾ ಸಂಸ್ಥೆಯಲ್ಲಿ ಕೌಶಲ್ಯ ಕೇಂದ್ರನ್ನು ಪ್ರಾರಂಭಮಾಡಲಾಗಿದೆ. ಈ ಕೇಂದ್ರದಲ್ಲಿ ನೂರಾರು ನಿರುದ್ಯೋಗಿಗಳು ತರಬೇತಿಯನ್ನು ಪಡೆದು ರಾಜ್ಯದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಕೌಶಲ್ಯಕೇಂದ್ರ ಮತ್ತು ಉದ್ಯೋಗಮೇಳಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದರಿಂದ ಸಾಕಷ್ಟು ವಿದ್ಯಾಥರ್ಿ ಮತ್ತು ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದು ಹೆಳಿದರು.
ನಂತರ ಮರಳಿ ಕೌಶಲ್ಯ ಕೇಂದ್ರದಲ್ಲಿ ತರಬೇತಿಯನ್ನು ಪಡೆದ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಉದ್ಯೋಗಮೇಳದಲ್ಲಿ ಸುಮಾರು ರಾಜ್ಯದ ಪ್ರತಿಷ್ಟಿತ ಸಂಸ್ಥೆಗಳಾದ ಎಸ್ಬಿಐ ಲೈಫ್ ಇನ್ಸೂರೆನ್ಸ್, ಹಿಮ್ಮತ್ಸಿಂಗ್, ಎಲ್ ಅಂಡ್ಟಿ ಫೈನಾನ್ಸ್, ಆಕ್ಸಿಸ್ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಸೇರಿದಂತೆ 21 ಕಂಪನಿಗಳು ಹಾಜರಾಗಿದ್ದವು. ಈ ಮೇಳದಲ್ಲಿ ನೂರಾರು ವಿದ್ಯಾಥರ್ಿಗಳು ಮತ್ತು ನಿರುದ್ಯೋಗಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ರಮೇಶ ಕುಲಕಣರ್ಿ, ಎಂಎಸ್ಎಂಎಸ್ ಸಂಸ್ಥೆಯ ಆಡಳಿತಾಧಿಕಾರಿ ವಿರೂಪಾಕ್ಷಯ್ಯ ಸ್ವಾಮಿ, ಜಿ.ಪಂ ಸದಸ್ಯ ಪ್ರಭಾಕರ್, ಸಿಎನ್ಆರ್ ಕಾಲೇಜಿನ ಉಪನ್ಯಾಸಕ ತಾಯಪ್ಪ, ತಾ.ಪಂ. ಸದಸ್ಯರುಗಳಾದ ಮಹಮ್ಮದ್ರಫಿ, ಆಶಾ ಹುಸ್ಸೇನ್ಸಾಬ್, ಮರಳಿ ಗ್ರಾ.ಪಂ ಸದಸ್ಯರುಗಳಾದ ಬಸಪ್ಪ, ಕೌಶಲ್ಯ ಕೇಂದ್ರದ ಪ್ರಶಾಂತ್, ಅಶ್ವಥ್, ಮಲ್ಲಿಕಾಜರ್ುನ ಸೇರಿದಂತೆ ಉಪನ್ಯಾಸಕರು, ವಿದ್ಯಾಥರ್ಿಗಳು ಭಾಗವಹಿಸಿದರು.