ನವದೆಹಲಿ, ಏ 3, ಕೊರೊನಾ ವಿರುದ್ಧ ಹೋರಾಟಕ್ಕೆ ಪ್ರಧಾನಿ ಮೋದಿ ಹೊಸ ತಂತ್ರ, ಬೆಂಬಲಕ್ಕಾಗಿ ಜನತೆಗೆ ಕರೆ ನೀಡಿದ್ದಾರೆ. ಇದೆ 5 ರಂದು ರಾತ್ರಿ 9 ಗಂಟೆಗೆ ಸರಿಯಾಗಿ ದೇಶದ ಜನತೆ ಮನೆಯಲ್ಲಿನ ಲೈಟ್ ಗಳನ್ನು ಆರಿಸಿ, 9 ನಿಮಿಷಗಳ ಕಾಲ ದೀಪ, ಮೊಂಬತ್ತಿ ಹಚ್ಚಿ, ಎಲ್ಲರೂ ಅಂಧಕಾರ, ಮಹಾಮಾರಿ ಕರೋನ ತೊಲಗಿಸಲು ಸಹಕರಿಸಿ ಎಂದು ಪ್ರಧಾನಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.ಇಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪ್ರಧಾನಿ, ಲಾಕ್ ಡೌನ್ ಜಾರಿಯಾಗಿ ಇಂದಿಗೆ 10 ದಿನಗಳಾಗಿವೆ.ಕಳದೆ 22 ರಂದು ಜನತಾ ಕರ್ಫ್ಯೂಗೆಕರೆ ನೀಡಲಾಗಿತ್ತು. ಇದನ್ನು ದೇಶದ ಜನತೆ ಯಶಸ್ವಿಯೂ ಗೊಳಿಸಿದ್ದು ಇದನ್ನು ಈಗ ವಿಶ್ವವೇ ಅನುಸರಿಸಿತ್ತು ಇದೆ ಭಾನುವಾರ ನಾವು ಕೊರೊನಾ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. 130 ಕೋಟಿ ಭಾರತೀಯರು ಮಹಾಸಂಕಲ್ಪ ಮಾಡಬೇಕಿದೆ. ಭಾನುವಾರ ರಾತ್ರಿ 9 ಗಂಟೆಗೆ ದೇಶದ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿನ ಲೈಟ್ ಆಫ್ ಮಾಡಿ 9 ನಿಮಿಷಗಳ ಕಾಲ ಮೇಣದ ಬತ್ತಿ, ದೀಪ, ಟಾರ್ಚ್ ಮೊಬೈಲ್ ಲೈಟ್ ಗಳನ್ನು ಬೆಳಗಿಸಿ ಎಂದು ಪ್ರಧಾನಿ ಕರೆ ಮನವಿ ಮಾಡಿದ್ದಾರೆ .