ಆಧುನಿಕ ತಂತ್ರಜ್ಞಾನದ ಪುರುಷ ಸಂತಾನ ಹರಣ ಚಿಕಿತ್ಸೆ * ತಿಂಗಳಾಂತ್ಯದಿಂದ ಪ್ರಾರಂಭ : ಡಿಎಚ್ಓ
ಕಾರವಾರ 22: ತಾಯಿ ಮತ್ತು ಮಗುವಿನ ಆರೋಗ್ಯದ ರಕ್ಷಣೆಯ ದೃಷ್ಟಿಯಿಂದ ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ ಇಲಾಖೆ ನವೆಂಬರ ತಿಂಗಳ ಅಂತ್ಯದಿಂದ ಪ್ರಾರಂಭಿಸಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಎನ್.ಅಶೋಕಕುಮಾರ ಹೇಳಿದರು.
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರ ಪದೇ ಪದೇ ಗರ್ಭಧಾರಣೆಯಿಂದ ಮಹಿಳೆಯರ ಸಾವು ತಪ್ಪಿಸಲು ಪುರುಷರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಯ ಅಗತ್ಯತೆ ಇದೆ. ಆಧುನಿಕ ಸ್ವರೂಪದ ಶಸ್ತ್ರ ಚಿಕಿತ್ಸೆ ಬಂದಿದ್ದು, ಅದನ್ನು ನವ್ಹೆಂಬರ್ ಅಂತ್ಯದಿಂದ ಪ್ರಾರಂಭಿಸಲಾಗುವುದು. ಈ ಚಿಕಿತ್ಸೆಯಲ್ಲಿ ಪುರುಷರಿಗೆ ಯಾವುದೇ ರೀತಿಯ ಸಮಸ್ಯೆ ಇರುವದಿಲ್ಲ. ಈ ಶಸ್ತ್ರಚಿಕಿತ್ಸೆಯು ಗುಪ್ತಾಂಗಕ್ಕೆ ಕತ್ತರಿ ಹಾಕುವುದಿಲ್ಲ. ಹೊಲಿಗೆ ಹೊಲಿಯುವ ಪದ್ಧತಿಯೂ ಇಲ್ಲ. ಚಿಕಿತ್ಸೆ ನಂತರ ಯಾವುದೇ ರೀತಿಯಲ್ಲಿ ನೋವು ಮತ್ತು ಅದಕ್ಕಾಗಿ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯತೆ ಇರುವದಿಲ್ಲ ಎಂದರು.
ಪುರುಷ ಸಂತಾನ ಹರಣ ಶಸ್ರ್ತಚಿಕಿತ್ಸೆಯ ಅಭಿಯಾನವನ್ನು ಆರೋಗ್ಯ ಇಲಾಖೆಯು ನವೆಂಬರ 28 ರಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲಾ ಆಸ್ಪತ್ರೆ, ಅಂಕೋಲಾದ ತಾಲೂಕು ಆಸ್ಪತ್ರೆಯಲ್ಲಿ, 29ರಂದು ಕುಮಾಟಾ ತಾಲೂಕು ಆಸ್ಪತ್ರೆ ಮತ್ತು ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ, ನ. 30ರಂದು ಶಿರಸಿ ತಾಲೂಕು ಆಸ್ಪತ್ರೆ ಹಾಗೂ ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ, ಡಿಸೆಂಬರ್ 2ರಂದು ಯಲ್ಲಾಪುರ ತಾಲೂಕು ಆಸ್ಪತ್ರೆ ಮತ್ತು ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ, ಡಿಸೆಂಬರ್ 3ರಂದು ಹಳಿಯಾಳ ತಾಲೂಕು ಆಸ್ಪತ್ರೆ ಹಾಗೂ ಜೋಯಿಡಾ ತಾಲೂಕು ಆಸ್ಪತ್ರೆಯಲ್ಲಿ,ಡಿ. 4ರಂದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲ್ಲಿ ನಡೆಯಲಿದೆ.
ಮೊದಲು ಪುರುಷರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲಾಗುವದು. ನಂತರದಲ್ಲಿ ಅವರಾಗಿಯೇ ಶಸ್ತ್ರ ಚಿಕಿತ್ಸೆಗೆ ಮುಂದೆ ಬಂದವರಿಗೆ ಸಂತಾನಹರಣ ಶಸ್ರ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಇದರಲ್ಲಿ ಯಾವುದೇ ರೀತಿಯಲ್ಲಿ ಒತ್ತಡ ಇರುವದಿಲ್ಲ. ಸಂತಾನ ಹರಣ ಶಸ್ರ್ರಚಿಕಿತ್ಸೆಯನ್ನು ಮಾಡಿಸಿಕೊಂಡು ಪುರುಷರಿಗೆ 1100 ರೂ. ಗಳನ್ನು ಅವರ ಬ್ಯಾಂಕ್ ಖಾತೆಗೆ ವಗರ್ಾಯಿಸಲಾಗುತ್ತದೆ ಎಂದು ಡಿ.ಎಚ್.ಓ ವಿವರಿಸಿದರು.
ಅವರ ಜಿಲಾ ಕ್ಷಯರೋಗ ನಿಯಂತ್ರಾಣಿಧಿಕಾರಿ ಡಾ.ಮಹಾಬಲೇಶ್ವರ ಹೆಗಡೆ, ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ ಡಾ.ಶಂಕರ ರಾವ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಚ್.ನಾಯ್ಕ ಉಪಸ್ಥಿತರಿದ್ದರು.