ಸಮಾಜವನ್ನು ಬೆಳಗಿ ಸಂತ ಪರಂಪರೆಗೆ ಮಾದರಿ: ಶಾಂತವೀರ
ಲೋಕದರ್ಶನವರದಿ
ಹಾವೇರಿ04: ಭಾರತಕ್ಕೆ ಇಂದು ಜಗತ್ತಿನಲ್ಲಿ ವಿಶ್ವಗುರು ಸ್ಥಾನಮಾನ ದೊರಕಿದ್ದರೆ ಅದಕ್ಕೆ ಕಾರಣ ಇಲ್ಲಿ ಸಿಗುವ ಬೆಳ್ಳಿ ಬಂಗಾರದಿಂದ ಅಲ್ಲಾ, ಅದರ ಬದಲಾಗಿ ಇಲ್ಲಿ ಜನ್ಮ ತಾಳಿದ ಸಾಧು ಸಂತರ ಆದರ್ಶ ಜೀವನದ ಪರೆಂಪರೆಯಿಂದ. ಅಂತಹ ಆದರ್ಶ ಸ್ವಾಮಿಗಳ ಪುಣ್ಯ ಸ್ಮರಣೊತ್ಸವು ನಮಗೆಲ್ಲಾ ಸ್ಪೂತರ್ಿದಾಯಕ ಕಾರ್ಯವಾಗಿದೆ ಎಂದು ನಗರದ ಸಿಂದಗಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 39 ನೇ ಪುಣ್ಯ ಸ್ಮರಣೋತ್ಸವದ 4 ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಭಕ್ತ ಸಮುದಾಯವನ್ನು ಅಜ್ಞಾನ, ಅಂಧಕಾರದಿಂದ ಮುಕ್ತಗೊಳಿಸಿ, ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಅವರಲ್ಲಿ ಭಿತ್ತಿ ಆ ಮೂಲಕ ಸಮಾಜವನ್ನು ಬೆಳಗಿ ಸಂತ ಪರಂಪರೆಗೆ ಮಾದರಿಯಾದವರು ಲಿಂ.ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಎಂದು ಹೇಳಿದರು.
ಶ್ರಮಿಕ ವರ್ಗವು ರಟ್ಟೆ ಮುರಿದು ರೊಟ್ಟಿ ತಯಾರಿಸಿ ಮಠಕ್ಕೆ ನೀಡಿದಾಗ ಅದು ಪ್ರಸಾದವಾದಂತೆ, ಸಂಸ್ಕಾರಯುತ ಶಿಕ್ಷಣ ನೀಡಿದಾಗ ಸಾಮಾನ್ಯ ವ್ಯಕ್ತಿಯೂ ಮಹಾಮಹಿರರಾಗುತ್ತಾನೆ. ಅಂಥಹ ಶಿಕ್ಷಣವು ಸಿಂದಗಿ ಪಾಠಶಾಲೆಯಲ್ಲಿ ದೊರೆಯುತ್ತದೆ. ಅದಕ್ಕೆಲ್ಲಾ ಗುರು ಹಾನಗಲ್ಲ ಕುಮಾರ ಸ್ವಾಮಿಗಳ ಆಶೀವರ್ಾದ ಕಾರಣ ಎಂದು ಹೇಳಿದರು.
ಮಹಾತ್ಮರ ಬದುಕು ಬೆಳಕು ಕುರಿತು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಮಹಾಂತ ದೇವರು ಶೇಗುಣಸಿ ಮಾತನಾಡಿ, ಸಮಾಜದಲ್ಲಿ ಧರ್ಮ ಅಧೋಗತಿಗೆ ಇಳಿದಾಗ ಕಾಲ ಕಾಲಕ್ಕೆ ಯುಗಪುರುಷರು ಈ ನಾಡಿನಲ್ಲಿ ಅವತರಿಸಿ ಧರ್ಮ, ಸಮಾಜವನ್ನು ಕಾಪಾಡಿರುತ್ತಾರೆ. ಅಂಥಹ ಯುಗಪುರುಷರಲ್ಲಿ ಬಸವಾದಿ ಶಿವಶರಣರು, ಯಡೆಯೂರು ಸಿದ್ಧಲಿಂಗೇಶ್ವರ, ಹಾನಗಲ್ಲ ಕುಮಾರ ಶಿವಯೋಗಿಗಳು ಅಗ್ರಗಣ್ಯರು ಎಂದು ಹೇಳಿದರು.
ನರೋಣದ ಖ್ಯಾತ ಜಾನಪದ ಕಲಾವಿದ ಗಾನಕೋಗಿಲೆ ಮಾರುತಿ ಕಾಸರ ಜಾನಪದ ತತ್ವಗೀತೆಗಳನ್ನು ಪ್ರಸ್ತುತ ಪಡಿಸಿದರು.
ಸಮಾರಂಭದಲ್ಲಿ ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು, ಹನುಮಂತಪ್ಪ ಕಾಮನಹಳ್ಳಿ, ಎಂ.ಎಸ್ ಹಿರೇಮಠ, ಶಿವಯೋಗಿಸ್ವಾಮಿ ಹಿರೇಮಠ, ಅಂಕಲಗಿ ಶಾಸ್ತ್ರೀಜಿ, ಚನ್ನಬಸಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಆಕಾಶವಾಣಿ ಕಲಾವಿದ ಗುರುನಾಥ ಸುತಾರ ಪ್ರಾಥರ್ಿಸಿದರು. ಜಿ.ಎಸ್ ಭಟ್ ಸ್ವಾಗತಿಸಿದರು. ಶ್ರೀಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 