ಕಲಿಕೆ, ಜ್ಞಾನಕ್ಕೆ ಮಾತ್ರ ಮೊಬೈಲ್ ಬಳಕೆ ಸೀಮಿತವಾಗಲಿ: ಪ್ರೊ. ಸಬಿಹಾ ಭೂಮಿಗೌಡ
Mobile use should be limited to learning and knowledge only: Prof. Sabiha Bhumigowda
ಲೋಕದರ್ಶನ ವರದಿ
ಕಲಿಕೆ, ಜ್ಞಾನಕ್ಕೆ ಮಾತ್ರ ಮೊಬೈಲ್ ಬಳಕೆ ಸೀಮಿತವಾಗಲಿ: ಪ್ರೊ. ಸಬಿಹಾ ಭೂಮಿಗೌಡ
ವಿಜಯಪುರ 27: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿದ್ದರೂ, ಅದರ ಬಳಕೆಯನ್ನು ಕಲಿಕೆ ಮತ್ತು ಜ್ಞಾನಕ್ಕೆ ಮಾತ್ರ ಸೀಮಿತಗೊಳಿಸಿದರೆ ಅದರಿಂದಾಗುವ ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂದು ಮಹಿಳಾ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಚಿಲ್ಡ್ರನ್ ಆಫ್ ಇಂಡಿಯಾ ಪೌಂಡೇಶನ್ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಿಶೋರಿ ನಾಯಕಿ ಹಾಗೂ ಕಿಶೋರ ನಾಯಕರಿಗಾಗಿ ‘ಅಂತರ್ಜಾಲ ಬಳಕೆಯಲ್ಲಿ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯ ರಕ್ಷಣೆ’ ಎಂಬ ವಿಷಯದ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಮಾಧ್ಯಮಗಳ ಯುಗದಲ್ಲಿ ಡಿಜಿಟಲ್ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಪ್ರತಿಯೊಬ್ಬರ ಬದುಕಿನಲ್ಲಿಯೂ ದೇವತೆಗಳೂ ಇರುತ್ತಾರೆ, ರಾಕ್ಷಸರೂ ಇರುತ್ತಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅವರನ್ನು ಗುರುತಿಸುವುದು ಅಷ್ಟೇ ಸುಲಭವಾಗಿಲ್ಲ. ಮೊಬೈಲ್ ಎನ್ನುವ ಉಪಕರಣಕ್ಕೆ ನಾವು ದಾಸರಾಗಿರುವುದರಿಂದ ಅನೇಕ ಸಾಮಾಜಿಕ ಮತ್ತು ವೈಯಕ್ತಿಕ ಸಮಸ್ಯೆಗಳು ಉದ್ಭವಿಸುತ್ತಿವೆ. ಆಧುನಿಕ ರಾಕ್ಷಸರು ಸ್ನೇಹ, ಪ್ರೀತಿ, ಸಹಾಯ ಮುಂತಾದ ಮುಖವಾಡಗಳ ಹಿಂದೆ ಮರೆತು ಕಳ್ಳಸಾಗಾಣಿಕೆ ಹಾಗೂ ದುರುಪಯೋಗಕ್ಕೆ ಮುಂದಾಗುತ್ತಿದ್ದಾರೆ. ಇಂತಹ ಅಪಾಯಕರ ಪರಿಸ್ಥಿತಿಗಳ ಬಗ್ಗೆ ಅರಿವು ಹೊಂದಿ, ವಿಶೇಷವಾಗಿ ಹೆಣ್ಣುಮಕ್ಕಳು ಜಾಗರೂಕರಾಗಿರುವುದು ಅತ್ಯಂತ ಅವಶ್ಯಕ. ಮನುಷ್ಯನ ಜೀವನದಲ್ಲಿ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಅಷ್ಟೇ ಮಹತ್ವ ಮಾನಸಿಕ ಆರೋಗ್ಯಕ್ಕೂ ಇದೆ. ಸುರಕ್ಷಿತ ಡಿಜಿಟಲ್ ಬಳಕೆ ಆರೋಗ್ಯಕರ ಹಾಗೂ ಸಮತೋಲನಯುತ ಜೀವನಕ್ಕೆ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಸಂದಿಗ್ಧ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಜಾಗೃತಿ ಅತ್ಯಂತ ಅವಶ್ಯಕವಾಗಿದೆ. ಮಾಯಾಜಾಲದಂತಿರುವ ತಂತ್ರಜ್ಞಾನ ಮಾನವ ಜೀವನಕ್ಕೆ ಹಲವು ಸೌಲಭ್ಯಗಳನ್ನು ನೀಡಿರುವುದರೊಂದಿಗೆ ಅನೇಕ ಗಂಭೀರ ಸಮಸ್ಯೆಗಳನ್ನೂ ಉಂಟುಮಾಡುತ್ತಿದೆ. ಇಂದಿನ ಮಕ್ಕಳು ತಂದೆ-ತಾಯಿಗಳಿಗೆಲ್ಲ, ಮೊಬೈಲ್‌ಗೆ ದಾಸರಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಮೊಬೈಲ್ ಮೂಲಕ ಕಲಿಯುವಿಕೆಗೆ ಹೋಲಿಸಿದರೆ ಪುಸ್ತಕದ ಮೂಲಕ ಕಲಿಕೆ ಹೆಚ್ಚು ಆಳವಾದ ಮತ್ತು ದೀರ್ಘಕಾಲಿಕ ಪ್ರಭಾವ ಬೀರುತ್ತದೆ. ಪುಸ್ತಕ ಓದುವ ಅಭ್ಯಾಸ ಮಕ್ಕಳಲ್ಲಿ ವಿಚಾರಶಕ್ತಿ, ಏಕಾಗ್ರತೆ ಮತ್ತು ಶಿಸ್ತು ಬೆಳೆಸುವುದರೊಂದಿಗೆ ಐಎಎಸ್, ಕೆಎಎಸ್, ಪಿಎಸ್‌ಐ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಮೌಲ್ಯಮಾಪನ ಕುಲಸಚಿವ ಬಿ ಎಲ್ ಲಕ್ಕಣ್ಣನವರ, ಶಿಕ್ಷಣ ನಿಕಾಯದ ಡೀನ್ ಪ್ರೊ. ಸಕ್ಪಾಲ್ ಹೂವಣ್ಣ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಪ್ರೊ. ಶಾಂತಾದೇವಿ ಟಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಮುಖ್ಯಸ್ಥರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 500ಕ್ಕೂ ಹೆಚ್ಚು ಕಿಶೋರಿ ನಾಯಕಿ ಹಾಗೂ ಕಿಶೋರ ನಾಯಕರು ಉಪಸ್ಥಿತರಿದ್ದರು.
ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಟಿಡಿಎಚ್ ನೆದರಲ್ಯಾಂಡ್‌ನ ಭಾರತ-ನೇಪಾಳ ರಾಷ್ಟ್ರೀಯ ನಿರ್ದೇಶಕ ಪಿ. ತಂಗಪರುಮಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ ಜ್ಯೋತಿ ಎ. ಉಪಾದ್ಯೆ ಸ್ವಾಗತಿಸಿದರು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮೀದೇವಿ, ವಾಯ್ ಅತಿಥಿಯರನ್ನು ಪರಿಚಯಿಸಿದರು. ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ ನಿರೂಪಿಸಿದರು. ಪ್ರೊ.ಯು.ಕೆ. ಕುಲಕರ್ಣಿ ವಂದಿಸಿದರು.
ಗೋಷ್ಠಿಗಳು
ಕಿಶೋರಿ ನಾಯಕಿ ಹಾಗೂ ಕಿಶೋರ ನಾಯಕರಿಗಾಗಿ ಮೂರು ದಿನಗಳ ವಿಶಿಷ್ಟ ಕಾರ್ಯಕ್ರಮದಲ್ಲಿ ‘ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯ’ ಎಂಬ ವಿಷಯದ ಕುರಿತು ಗೋಷ್ಠಿ ನಡೆಯಿತು. ಈ ಗೋಷ್ಠಿಯಲ್ಲಿ ನಗರದ ಮನೋವೈದ್ಯ ಡಾ. ಮಂಜುನಾಥ ಮಸಳಿ, ಧಾರವಾಡನ ಮಾನಸಿಕ ಆರೋಗ್ಯ ತಜ್ಞ ರಾಮಪ್ಪ ತಿಮ್ಮಾಪೂರ, ನಿಮ್ಹಾನ್ಸ್ನ ಮಾನಸಿಕ ಆರೋಗ್ಯ, ಯೋಜನಾ ಸಂಯೋಜಕ ಡಾ. ವೀರುಪಾಕ್ಷ, ಮನೋವೈದ್ಯ ಡಾ. ಗೌತಮಿ ಎಸ್‌ಜಿ, ಬೆಂಗಳೂರಿನ ಮಾನಸಿಕ ತಜ್ಞ ಕೇಶವ, ಪ್ರೊ.ಶಾಂತಾದೇವಿ.ಟಿ, ಪ್ರೊ.ರಾಜಕುಮಾರ ಮಾಲಿಪಾಟೀಲ, ಡಾ. ಜಿ ಸೌಭಾಗ್ಯ, ಡಾ. ಸುರೇಖಾ ರಾಠೋಡ, ಪ್ರೊ.ಎಂ.ಪಿ.ಬಳಿಗಾರ, ಸಂಗೀತಾ ಪವಾರ, ಸರಸ್ವತಿ ಬೆಳ್ಳುಂಡಗಿ, ಸುನಿತಾ ಶಿವಮಂದಿರ, ಡಾ. ರಶ್ಮಿ ವಂಶಾಕೃತಮಠ, ರುಕ್ಮವ್ವ ಅಗಸರ, ಸುಷ್ಮಾ ಪವಾರ ಇದ್ದರು.
ಕಿಶೋರಿ ನಾಯಕಿ ಹಾಗೂ ಕಿಶೋರ ನಾಯಕರಿಗಾಗಿ ಮೂರು ದಿನಗಳ ವಿಶಿಷ್ಟ ಕಾರ್ಯಕ್ರಮದಲ್ಲಿ ‘ಡಿಜಿಟಲ್ ಸುರಕ್ಷತೆ ಮತ್ತು ಅರಿವು’ ಎಂಬ ವಿಷಯದ ಕುರಿತು ಗೋಷ್ಠಿ ನಡೆಯಿತು. ಈ ಗೋಷ್ಠಿಯಲ್ಲಿ ವಾಸುದೇವ ಶರ್ಮ, ಡಾ. ಟಿ ರಾಮಾಂಜನಯ್ಯ, ಶ್ರೀಮತಿ. ಮಂಜುಳಾ, ಸರೋಜ ಅಶೋಕ, ಮಹಾಲಕ್ಷ್ಮಿ ಜೇನಿಫರ್, ಪ್ರೊ.ಲಕ್ಷ್ಮಿ ದೇವಿ ವೈ, ಪ್ರೊ.ಯು.ಕೆ ಕುಲಕರ್ಣಿ, ಪ್ರೊ. ಡಾ. ಶ್ವೇತಾ ಬೆಂಗಾರೆ, ಡಾ. ಕಲಾವತಿ ಕಾಂಬಳೆ, ಪ್ರೊ.ಹನುಮಂತಯ್ಯ ಪೂಜಾರ, ಡಾ. ರಜಿಯಾಬೇಗಂ ನಧಾಪ, ಡಾ. ರಶ್ಮಿ ವಂಶಾಕೃತಮಠ, ಸಂಗೀತಾ ಪವಾರ, ಅನುಷಾ, ರುಕ್ಮವ್ವ ಅಗಸರ, ಸುಷ್ಮಾ ಪವಾರ, ಶಿಲ್ಪಾ ಮನೋಹರ ಮೀಶಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 