ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ಎಸ್.ನಾಯ್ಕ :
ಕಾರವಾರ: ಅಪಘಾತದಲ್ಲಿ ಗಾಯಗೊಂಡವರನ್ನು ತಾವೇ ಸ್ವತಃ ಜಿಲ್ಲಾ ಆಸ್ಪತ್ರೆಗೆ ಕರೆತಂದರೂ ಕ್ರಿಮ್ಸ ಅಧೀನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ಇಲ್ಲದೆ ಹೋದದ್ದು ಕಂಡ ಶಾಸಕಿ ರೂಪಾಲಿ ನಾಯ್ಕ ಕೆಂಡಾಮಂಡಲವಾದರು. ಸಕಾಲದಲ್ಲಿ ಅಂಬ್ಯುಲೆನ್ಸ್ ಕಳುಹಿಸದೆ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಶಾಸಕಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಮಧ್ಯಾಹ್ನ ಬಿಣಗಾ ಬಳಿ ಬೈಕ್ ಹಾಗೂ ಮೀನು ಸಾಗಾಣಿಕಾ ವಾಹನದ ನಡುವೆ ಅಪಘಾತ ಉಂಟಾಗಿ ಬೈಕ್ ಸವಾರರು ತೀವ್ರ ಅಸ್ವಸ್ಥರಾಗಿದ್ದರು. ಅಂಕೋಲಾದಲ್ಲಿ ಕಾರ್ಯಕ್ರಮ ಮುಗಿಸಿ ಕಾರವಾರಕ್ಕೆ ಮರಳುತ್ತಿದ್ದ ಶಾಸಕರು ತಮ್ಮ ವಾಹನ ನಿಲ್ಲಿಸಿ, ಗಾಯಾಳುಗಳನ್ನು ಉಪಚರಿಸಿದರು. ಅಂಬ್ಯುಲೆನ್ಸ್ ಕಳುಹಿಸುವಂತೆ ಕ್ರಿಮ್ಸ ಅಧೀನ ಆಸ್ಪತ್ರೆಗೆ ಪೋನ್‌ನಲ್ಲಿ ತಿಳಿಸಿದರು. ಅಂಬ್ಯುಲೆನ್ಸ್ ಕೂಡ ಸಕಾಲದಲ್ಲಿ ಬರದಿದ್ದಾಗ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಬೇರೊಂದು ಅಂಬ್ಯುಲೆನ್ಸ್ ನಲ್ಲಿ ಶಾಸಕರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದರು. ಆದರೆ ಅಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲು ತುರ್ತುಚಿಕಿತ್ಸಾ ಘಟಕದಲ್ಲಿ ಯಾವುದೇ ವೈದ್ಯರು ಇಲ್ಲದಿರುವುದ ಕಂಡ ಶಾಸಕರು ಸಿಬ್ಬಂದಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಅಲ್ಲಿನ ಅವ್ಯವಸ್ಥೆಯನ್ನು ನೋಡಿ ಕೆಂಡಾಮAಡಲರಾದರು. ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಮೆಡಿಕಲ್ ಕಾಲೇಜಿನ ನಿರ್ದೇಶಕರಿಗೆ ಕರೆ ಮಾಡಿ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.
ಶಾಸಕರ ಮಾನವೀಯತೆ ಬಗ್ಗೆ ಪ್ರಶಂಸೆ ;
ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸಿ ಜಿಲ್ಲಾ ಆಸ್ಪತ್ರೆಗೆ ಕರೆತಂದ ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಮಾನವೀಯತೆಯನ್ನು ಸ್ಥಳದಲ್ಲಿ ಇದ್ದವರು ಪ್ರಶಂಶಿಸಿದರು.
.....................