ಮುಖ್ಯಮಂತ್ರಿ ‌,ಗೃಹಸಚಿವರು ಶೀಘ್ರವಾಗಿ ಗುಣಮುಖರಾಗಲಿ- ಶಾಸಕಿ ರೂಪಾಲಿ ನಾಯ್ಕ ಪ್ರಾರ್ಥನೆ

ಅಮಿತ್ ಶಾ ಹಾಗೂ ಯಡಿಯೂರಪ್ಪ ಶೀಘ್ರ ಚೇತರಿಕೆಗೆ ಶಾಸಕಿ‌ ರೂಪಾಲಿ ಎಸ್.ನಾಯ್ಕ ಪ್ರಾರ್ಥನೆ

ಕಾರವಾರರ ದೇಶದ ಗೃಹ ಸಚಿವ ಅಮಿತ್ ಶಾ ಹಾಗೂ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಕೋವಿಡ್-1ಸೋಂಕಿಗೆ ಒಳಗಾಗಿಕಿತ್ಸೆ ಪಡೆಯುತ್ತಿದ್ದು,  ಇವರು  ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ಎಸ್.ನಾಯ್ಕ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೋನಾ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತ, ಕೊರೋನಾ ವಾರಿಯರ್ಸ್ಅನ್ನು ಹುರಿದುಂಬಿಸುತ್ತ, ರಾಜ್ಯದ 6 ಕೋಟಿಗೂ ಹೆಚ್ಚು ಜನರ ಆರೋಗ್ಯಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಸ್ವತಃ ತಾವು ಚಿಕಿತ್ಸೆ ಪಡೆಯುತ್ತಿರುವಾಗಲೂ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಅಮಿತ್ ಶಾ ಅವರೂ ಕೂಡ ರಾಷ್ಟ್ರದ ಭದ್ರತೆಗಾಗಿ, ಸುಗಮ ಜನಜೀವನಕ್ಕಾಗಿ ಅವಿರತವಾಗಿ ಶ್ರಮಿತ್ತಿದ್ದಾರೆ.

ಇವರಿಬ್ಬರೂ ಆರೋಗ್ಯದಿಂದ ಇದ್ದು, ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳ ಪರವಾಗಿ ದೇವರಲ್ಲಿ ಪ್ರಾರ್ಥಿಸುವುದಾಗಿ ಶಾಸಕರಾದ  ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.

ಕ್ಷೇತ್ರದ ಜನತೆ ಕೊರೋನಾ ಬಗ್ಗೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸುವಂತೆ  ಶಾಸಕರು ವಿನಂತಿಸಿದ್ದಾರೆ.