ಭೋವಿ ಅಭಿವೃದ್ಧಿ ನಿಗಮದ ಕೊಟ್ಯಾಂತರ ರೂ.ಗಳ ದುರುಪಯೋಗ: ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹ
Misappropriation of crores of rupees by Bhovi Development Corporation: Demand for disciplinary actio
ವಿಜಯಪುರ 10: ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಜೊತೆ ಸೇರಿ ನಿಗಮದಿಂದ ಕೊಟ್ಯಾಂತರ ರೂ.ಗಳ ದುರುಪಯೋಗ ಪಡಿಸಿಕೊಂಡಿರುವ ಕಾಂತು ಒಡೆಯರ, ಪರಶುರಾಮ ಹೋಸಪೇಟಿ, ಕಿರಣ ಗುಂಜಿ, ಹಾಗೂ ಪುಂಡಲಿಕ ಮುರಾಳ, ಅವರ ವಿರುದ್ಧ ಇಲಾಖೆ ತನಿಖೆ ನಡೆಸಿ ಅವರ ಆಸ್ತಿಗಳನ್ನು ಮುಟ್ಟುಗೋಲುಹಾಕಿಕೊಳ್ಳುವುದರ ಮೂಲಕ ನಿಗಮದ ಹಣವನ್ನು ವಸೂಲಿ ಮಾಡಿ ಅವರ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕ್ರಾಂತೀವೀರ ಬೆಳವಡಿ ವಡ್ಡರ ಯಲ್ಲಣ್ಣ ಯುವ ವೇದಿಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿಠ್ಠಲ ವಡ್ಡರ ಮಾತನಾಡಿ, ಕಾನೂನು ದುರುಪಯೋಗ ಪಡಿಸಿಕೊಂಡು ಮಧ್ಯವರ್ತಿಗಳಾದ ಕಾಂತು ಒಡೆಯರ, ಪರಶುರಾಮ ಹೋಸಪೇಟಿ, ಕಿರಣ ಗುಂಜಿ, ಹಾಗೂ ಪುಂಡಲಿಕ ಮುರಾಳ, ಇವರು ವಿಜಯಪುರ ಜಿಲ್ಲೆಯ ಮದಭಾವಿ ಎಂಬ ಒಂದೆ ಗ್ರಾಮದಲ್ಲಿ ಸುಮಾರು 40 ಫಲಾನುಭವಿಗಳ ಪೈಕಿ 13 ಜನರಿಗೆ 10 ಲಕ್ಷ ಮತ್ತು 27 ಜನರಿಗೆ 5 ಲಕ್ಷ ರೂ ಗಳನ್ನು ಮಂಜೂರು ಮಾಡಿ ಅವರ ಬ್ಯಾಂಕಿನ ಖಾತೆಗೆ ಜಮೆ ಮಾಡಿಸಿ ಅವರ ಕಡೆಯಿಂದ ಮುಂಗಡವಾಗಿ ಚೆಕ್ ತೆಗೆದುಕೊಂಡು ಹಣವನ್ನು ತಾವು ವರ್ಗಾವಣೆ ಮಾಡಿಕೊಂಡು ವಂಚಿಸಿರುತ್ತಾರೆ. ಅಲ್ಲದೇ ಫಲಾನುಭವಿಗಳು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಸದರಿ ಬ್ಯಾಂಕಿನವರು ನಿಮ್ಮ ಹಣ ಮತ್ತೊಂದು ಕಂಪನಿಗೆ ಹೋಗಿರುತ್ತದೆ ಎಂದು ಹೇಳಿದ್ದಾರೆ. ಇದಲ್ಲದೆ ನಮ್ಮ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕಿನ ಫಲಾನುಭವಿಗಳಿಗೆ ಇದೇ ರೀತಿ ವಂಚಿಸಿ ಅಕ್ರಮ ಹಣ ್ಘ ಆಸ್ತಿ ಪಾಸ್ತಿಗಳನ್ನು ಈ ನಾಲ್ವರು ಮಾಡಿಕೊಂಡಿದ್ದಾರೆ. ಈ ನಾಲ್ವರಲ್ಲಿ, ಪ್ರಮುಖನಾದ ಕಾಂತು ಒಡೆಯರ, ಎಂಬಾತನು ಅನುದಾನಿತ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಎಸ್. ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆದ್ದರಿಂದ ವಿಜಯಪುರ ಭೋವಿ ಅಭಿವೃದ್ಧಿ ನಿಗಮದಲ್ಲಿ ಭೋವಿ ಸಮಾಜದ ಫಲಾನುಭವಿಗಳಿಗೆ ತುಂಬಾ ದೊಡ್ಡ ಪ್ರಮಾಣದಲ್ಲಿ ಮೋಸ ಹಾಗೂ ವಂಚಿಸಿರುವ ಕಾಂತು ಒಡೆಯರ, ಪರಶುರಾಮ ಹೋಸಪೆಟಿ, ಕಿರಣ ಗುಂಜಿ. ಹಾಗೂ ಪುಂಡಲಿಕ ಮುರಾಳ, ಇವರ ವಿರುದ್ಧ ತನಿಖೆ ನಡೆಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಮೂಲಕ ನಿಗಮದ ಹಣವನ್ನು ವಸೂಲಿ ಮಾಡಿ ಅವರ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಬೇಕೆಂದು ನಮ್ಮ ಸಂಘಟನೆ ಹಾಗೂ ಸಮಸ್ತ ಭೋವಿ ಸಮಾಜದ ವತಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ವತಿಯಿಂದ ಧರಣಿ ಸತ್ಯಾಗ್ರಹವನ್ನು ತಮ್ಮ ಕಛೇರಿಯ ಎದುರು ಹಮ್ಮಿಕೊಳ್ಳಲಾಗುವುದು.
ಈ ಸಂದರ್ಭದಲ್ಲಿ ಶಿವಾನಂದ ಒಡ್ಡರ ಇಂಗಳೇಶ್ವರ, ಶೆಟ್ಟೆಪ್ಪ ಬಂಡಿವಡ್ಡರ ಮಧಭಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 