ಸಾಮಾಜಿಕ ನ್ಯಾಯದ ಕನ್ನಡಿ ಭಾರತ ಸಂವಿಧಾನದ ಮುನ್ನುಡಿ

ಸಾಮಾಜಿಕ ನ್ಯಾಯದ ಕನ್ನಡಿ ಭಾರತ ಸಂವಿಧಾನದ ಮುನ್ನುಡಿ Mirror of Social Justice PREFACE OF INDIA CONSTITUTION

ಗದಗ 26: ಭಾರತೀಯ ಸಂವಿಧಾನದ ಪೂರ್ವಪೀಠಿಕೆಯಲ್ಲಿಯೇ  ಸಾಮಾಜಿಕ ನ್ಯಾಯದ ತತ್ವವನ್ನು ಎತ್ತಿಹಿಡಿದಿದ್ದು, ಭಾರತದಲ್ಲಿನ ಸಾವಿರಾರು ಜಾತಿ ಉಪಜಾತಿಗಳು ಪ್ರಶ್ನಾತೀತವಾಗಿ ಸಂವಿಧಾನವನ್ನು ಒಪ್ಪಿಕೊಳ್ಳಲು ಸಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವ ಆದರ್ಶಗಳೇ ಕಾರಣವಾಗಿವೆ ಎಂದು ಎಸ್‌. ವಿ. ಸಂಕನೂರ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  

ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ “ಸಂವಿಧಾನದ ಮೌಲ್ಯಗಳು ಮತ್ತು ಮಾನವ ಹಕ್ಕುಗಳು” ಎನ್ನುವ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು   ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮವನ್ನು ಉದ್ಘಾಟಿಸಿ ಮತಾನಾಡಿದ ಎಸ್‌.ವಿ ಸಂಕನೂರರವರು ಭಾರತೀಯ ಸಂವಿಧಾನವು ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳ ಅಡಿಯಲ್ಲಿ ಸಮಾನತೆಯ ಹಕ್ಕುಗಳನ್ನು ನೀಡಿದ್ದು, ಕಾನೂನಿನ ಮುಂದೆ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಪರಿಗಣಿಸುವುದರ ಮೂಲಕ ಪ್ರಜೆಗಳಿಗೆ ಸಾಮಾಜಿಕ ನ್ಯಾಯ ನೀಡಿದೆ. ಅದೇ ರೀತಿಯಾಗಿ ಮೂಲಭೂತ ಕರ್ತವ್ಯಗಳೂ ಅಸ್ತಿತ್ವದಲ್ಲಿದ್ದು, ರಾಷ್ಟ್ರ ದ್ವಜವನ್ನು ಗೌರವಿಸುವುದು, ಪರಿಸರ ರಕ್ಷಣೆ, ಸಾರ‌್ವಜನಿಕ ಆಸ್ತಿಯ ಸಂರಕ್ಷಣೆ ಹಾಗೂ ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಹಾಗೂ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಭಾರತೀಯ ಸಂವಿಧಾನ ಕುರಿತ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ವಿತರಿಸಿದರು.  

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಿ.ಎಸ್ ರಾಚಯ್ಯನವರು ಸಂವಿಧಾನದ ಮೌಲ್ಯಗಳು ಹಾಗೂ ಮಾನವ ಹಕ್ಕುಗಳ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿ, ಸಂವಿಧಾನದ ಪೀಠಿಕೆಯಲ್ಲಿಯೇ ಸಮಾನತೆ, ಬ್ರಾಹೃತ್ವ, ಸೆಕ್ಯಲರಿಸಂ, ಸಮಾಜವಾದಿ ಮೌಲ್ಯಗಳನ್ನು ಪ್ರಸ್ತುತಪಡಿಸಲಾಗಿದ್ದು, ಮಾನವ ನಿರ್ಮಿತ ಅಸಮಾನತೆಯ ವಿರುದ್ದವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದಂತಹ ಪರಿಹಾರಗಳನ್ನು ಭಾರತೀಯ ಸಂವಿಧಾನ ಹೊಂದಿದೆ. ಭಾರತೀಯ ಸಂವಿಧಾನ ಮಾತ್ರವೇ ದಿನದಿಂದ ದಿನಕ್ಕ ತನ್ನ ಸ್ವರೂಪದಿಂದಾಗಿ ಬಲಗೊಳ್ಳುತ್ತಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ.ಕೆ.ಮಠ ಇವರು ಸಂವಿಧಾನದ ಮೌಲ್ಯಗಳನ್ನು ತಿಳಿದುಕೊಳ್ಳುವುದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಾಗಿದೆ ಎಂದು ತಿಳಿಸಿದರು.  

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಯ ಹಾಗೂ ಐ.ಕ್ಯು.ಎ.ಸಿ ಸಂಯೋಜಕರಾದ ಡಾ. ವೀಣಾ ಅವರು ವಿಚಾರ ಸಂಕಿರಣದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ವಿಠ್ಠಲ ಕೋಳಿಯವರು ವಂದಿಸಿದರು. ಪ್ರೊ. ಗೌರಾ ಯಳಮಲಿಯವರು ಅತಿಥಿಗಳನ್ನು ಪರಿಚರಿಸಿದರು ಪ್ರೊ. ವಿಣಾ ತಿರ್ಲಾಪರ ಬಹುಮಾನ ವಿಜೇತರನ್ನು ಘೋಷಿಸಿದರು, ಪ್ರೊ. ವಿಶಾಲ ತಳಗಡೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.