ಲೋಕದರ್ಶನ ವರದಿ
ಸಂಬರಗಿ 02: ಸಚಿವ ಶ್ರೀಮಂತ ಪಾಟೀಲ ಇವರ ಪ್ರೇರಣೆಯಿಂದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ, ಕುಡಿಯುವ ನೀರು ಹಾಗೂ ಶಾಲಾ ಕೊಠಡಿಗಳ ಕೆಲಸಗಳು ಇಲ್ಲಿಯವರೆಗೆ ಪ್ರಗತಿಯಲ್ಲಿ ಇದ್ದು, ಇಲ್ಲಿಯವರೆಗೆ ಸುಮಾರು ನೂರಾರು ಕೋಟಿ ರೂಪಾಯಿ ಕುಡಿಯುವ ನೀರಿಗೆ ವೆಚ್ಚ ಮಾಡಲಾಗಿದೆಯೆಂದು ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಬಿ.ಜೆ.ಪಿ ಮುಖಂಡ ಆರ್. ಎಮ್. ಪಾಟೀಲ ಹೇಳಿದರು.
ನಾಗನೂರ ಪಿ.ಎ ಗ್ರಾಮದ ಹೊರವಲಯದ ಪವಾರ ತೋಟದ ವಸ್ತಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆ ಯೋಜನೆ ವತಿಯಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಅವರು ಸಂಬರಗಿ ಗ್ರಾಮದಿಂದ ಸುಮಾರು 2 ಕಿ.ಮೀ ಪೈಪ್ಲೈನ್ ಮುಖಾಂತರ ಪವಾರ ತೋಟದ ವಸ್ತಿಗೆ ನೀರು ಪೂರೈಕೆ ಮಾಡಿ ತೋಟದ ವಸ್ತಿ ನೀರಿನ ಸಮಸ್ಯೆ ಸತತವಾಗಿ ಮುಕ್ತಗೊಳಿಸುವ ಗುರಿ ಇದೆ. ಸಚಿವ ಶ್ರೀಮಂತ ಪಾಟೀಲ ನುಡಿದಂತೆ ನಡೆದಿದ್ದಾರೆ. ಪ್ರಥಮವಾಗಿ ಗ್ರಾಮೀಣ ಪ್ರದೇಶದಲ್ಲಿ ಇರುವ ತೋಟದ ವಸ್ತಿ ರಸ್ತೆ, ಕುಡಿಯುವ ನೀರು, ಬಾಂದಾರ ಹಾಗೂ ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದಾರೆ.
ಹಲವಾರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಅಭಿವೃದ್ದಿ ಕುಂಠಿತವಾಗಿದ್ದು, ಕಾಗವಾಡ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಅಭಿವೃದ್ದಿ ಕೆಲಸಗಳು ಭರ್ಜರಿಯಿಂದ ಸಾಗಿವೆ.
ಈ ವೇಳೆ ಅಣ್ಣಾಸಾಬ ಮಿಸಾಳ, ಈಶ್ವರ ಕುಂಬಾರೆ, ವಿನಾಯಕ ಬಾಗಡಿ, ಅಪ್ಪಣ್ಣ ಕಾಕಾ ಮಗದುಮ್ಮ, ರಾಜು ಮಾನೆ, ವಿಶ್ವನಾಥ ದೇವಮಾನೆ, ಬಸಗೌಡ ಪಾಟೀಲ, ಅಪ್ಪಾ ಪವಾರ, ವಾಸು ಪವಾರ, ಅಜೀತ ಪವಾರ, ಸುನೀಲ ಖಾಂಡೇಕರ, ಸಂಜಯ ಕಾಂಬಳೆ, ರಾಮ ಸೊಡ್ಡಿ, ಶಿವಾಜಿ ಗಾಡಿವಡ್ಡರ, ಅಶೋಕ ಚೌಗುಲಾ, ಮಚ್ಚೇಂದ್ರ ಚಿಂಚನೆ, ಅಭಿಯಂತರ ವೀರಣ್ಣ ವಾಲಿ, ಎಸ್.ಬಿ. ಗೋಳಸಂಗೆ, ಅಶೋಕ ಮಾನೆ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.