ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಚಿವ ಪ್ರಲ್ಹಾದ ಜೋಶಿ

ಶಿಗ್ಗಾವಿ 16: ಕ್ಷೇತ್ರದ ಮತದಾರರ ಆರ್ಶಿವಾದದಿಂದ ಎರಡನೇ ಬಾರಿಗೆ ಸಚಿವನಾಗಿದ್ದೇನೆ. ನನ್ನನ್ನು ಬೆಂಬಲಿಸಿದ ಎಲ್ಲ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.ಧಾರವಾಡ ಲೋಕಸಭಾ ಕ್ಷೇತ್ರದಿಂದ 5 ನೇ ಬಾರಿಗೆ ಸಂಸದರಾಗಿ 2 ನೇ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಪಟ್ಟಣಕ್ಕೆ ಆಗಮಿಸಿದ ಪ್ರಲ್ಹಾದ ಜೋಶಿಯವರನ್ನು ಮುಖಂಡ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಅಭಿಮಾನಿಗಳು ಸ್ವಾಗತ ಮಾಡಿ ಸನ್ಮಾನಿಸಿ ಹಾರೈಸಿದರು.  ಪಟ್ಟಣದ ಗ್ರಾಮದೇವಿ, ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಧಾರವಾಡ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕ್ರಿಯಾಯೋಜನೆ ತಯಾರಿಸಿ ಕಾರ್ಯಕ್ರಮಗಳ ಅನುಷ್ಠಾನದ ಭರವಸೆಯನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ಶಶಿಧರ ಯಲಿಗಾರ, ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ನರಹರಿ ಕಟ್ಟಿ, ಸುಭಾಸ ಚವ್ಹಾಣ, ಬಸವರಾಜ ನಾರಾಯಣಪುರ, ರೇಣುಕನಗೌಡ ಪಾಟೀಲ, ದೇವಣ್ಣಾ ಚಾಕಲಬ್ಬಿ, ಡಾ.ಮಲ್ಲೇಶಪ್ಪ ಹರಿಜನ, ಕರೆಪ್ಪ ಕಟ್ಟಿಮನಿ, ಕೋಟ್ರ​‍್ಪ ನಡೂರ, ಹನುಮರೆಡ್ಡಿ ನಡುವಿನಮನಿ, ಈರಣ್ಣಾ ನವಲಗುಂದ, ಹನುಮಂತಪ್ಪ ಮಾದರ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.