ಸಚಿವ ಪಾಟೀಲರ ಜನ್ಮ ದಿನಾಚರಣೆ: ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಚಿವ ಪಾಟೀಲರ ಜನ್ಮ ದಿನಾಚರಣೆ: ಉಚಿತ ಆರೋಗ್ಯ ತಪಾಸಣೆ ಶಿಬಿರ Minister Patil's birthday: Free health check-up camp

ಸಚಿವ ಪಾಟೀಲರ ಜನ್ಮ ದಿನಾಚರಣೆ: ಉಚಿತ ಆರೋಗ್ಯ ತಪಾಸಣೆ ಶಿಬಿರ 

ವಿಜಯಪುರ 07: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಇಂದು ಮಂಗಳವಾರ ಜಿಲ್ಲೆಯ ಉಕ್ಕಲಿ, ದೇವರಗೆಣ್ಣೂರ, ಬಬಲೇಶ್ವರ ಹಾಗೂ ತಿಕೋಟಾಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜಿಸಲಾಗಿತ್ತು.  ಈ ಶಿಬಿರಗಳಲ್ಲಿ 2000ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಇರುವ ರೋಗಿಗಳಿಗೆ ವಿಜಯಪುರ ನಗರದ ಬಿ.ಎಲ್‌.ಡಿ.ಈ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.     

ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಈ ಚಿಕಿತ್ಸೆ ಶಿಬಿರದಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಕಿವಿ, ಮೂಗು ಹಾಗೂ ಗಂಟಲು, ಹೆರಿಗೆ ಮತ್ತು ಪ್ರಸೂತಿ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ನೇತ್ರ ಚಿಕಿತ್ಸೆ, ಹೃದ್ರೋಗ ಚಿಕಿತ್ಸೆ ಹಾಗೂ ನರ ರೋಗ ಚಿಕಿತ್ಸೆ ವಿಭಾಗಗಳ ವೈದ್ಯರು ತಪಾಸಣೆ ನಡೆಸಲಾಯಿತು.     

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಪಿ.ಕೆ.ಪಿ.ಎಸ್ ಅಧ್ಯಕ್ಷ ಎ. ಎಂ. ಪಾಟೀಲ ಅವರು ಕೆಕ್ ಕಟ್ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.  ಈ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.  ಈ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ವೈದ್ಯರಾದ ಡಾ. ಅರುಣ ಎಂ. ಬಿರಾದಾರ, ಡಾ. ಎಸ್‌. ಎಂ. ಬಿರಾದಾರ, ಡಾ. ರಮಾಕಾಂತ ಬಳೂರಕರ, ಡಾ. ಅನೀಲ ಬುಳಗೊಂಡ, ಡಾ. ಪ್ರವೀಣ ಗಂಗನಹಳ್ಳಿ, ಡಾ. ಶೃತಿ ಕುಲಕರ್ಣಿ, ಡಾ. ಪೂಜಾ ತೊದಲಬಾಗಿ, ಗ್ರಾ. ಪಂ. ಅಧ್ಯಕ್ಷ ನಿಠೊಂಡ ಸಿಂದಗಿ, ಚನ್ನಪ್ಪಗೌಡ ಬಿರಾದಾರ, ಮುಖಂಡರಾದ ಸುಭಾಷ ಕಲ್ಯಾಣ, ಬಾಳಪ್ಪ ಮಸಳಿ, ಕಲ್ಲನಗೌಡ ಪಾಟೀಲ, ಅಡಿವೆಪ್ಪ ಮಂಗಾನವರ, ದ್ಯಾವನಗೌಡ ಪಾಟೀಲ, ಬಿ. ಬಿ. ಬಿರಾದಾರ, ಕಾಶಿರಾಯ ಸೊನ್ನದ, ಮಲ್ಲಿಕಾರ್ಜುನ ಪಡಗಾನೂರ ಮುಂತಾದವರು ಉಪಸ್ಥಿತರಿದ್ದರು.   ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ವಿ. ಜಿ. ಅರಕೇರಿ ಶಿಬಿರವನ್ನು ಉದ್ಘಾಟಿಸಿದರು.  ಈ ವೇಳೆ 629 ಜನರು ಚಿಕಿತ್ಸೆ ಪಡೆದುಕೊಂಡರು.  ಉದ್ಘಾಟನೆ ಕಾರ್ಯಕ್ರಮದಲ್ಲಿ ಗಂಗಯ್ಯಸ್ವಾಮಿ ಹಿರೇಮಠ ಸಾನಿಧ್ಯ ವಹಿಸಿದ್ದರು.   

ಈ ಸಂದರ್ಭದಲ್ಲಿ ಮುಖಂಡರಾದ ಶಟ್ಟಪ್ಪಗೌಡ ಬಿರಾದಾರ, ತಿಮ್ಮಣ್ಣ ಬಿರಾದಾರ, ರಾಜು ಮ್ಯಾಗೇರಿ, ಅಶೋಕ ಗುರಡ್ಡಿ, ರಾಮನಗೌಡ ಪಾಟೀಲ, ಗೋವಿಂದಗೌಡ ಪಾಟೀಲ, ರಾಚಪ್ಪ ವಿ. ಗಡದಾನಿ, ಗೌಡಪ್ಪ ಯಡಹಳ್ಳಿ, ಗೂಳಪ್ಪ ಯಡಹಳ್ಳಿ, ರಾಜುಗೌಡ ಪಾಟೀಲ, ಶಿವಾನಂದ ಆರ್‌. ಬಿರಾದಾರ, ಭಗವಂತ ಚಲವಾದಿ, ಬಾಬು ಚಲವಾದಿ, ಸೋಮಲಿಂಗ ಜಮಖಂಡಿ, ಶಿವಪ್ಪ ಎಮ್ಮೆಣ್ಣವರ, ಶಿವನಗೌಡ ಪಾಟೀಲ, ರವಿ ಬಿರಾದಾರ, ಭರತ ಗಸ್ತಿ, ಹಣಮಂತ ಸಿದರಡ್ಡಿ, ಶಂಕ್ರೆಪ್ಪ ಜನವಾಡ, ಕಲ್ಲಪ್ಪ ಗಡದಾನಿ, ಬಂದಗಿಸಾಬ ಮುಲ್ಲಾ, ವೈದ್ಯರಾದ ಡಾ. ಶರಣು ಬಡಿಗೇರ, ಡಾ. ಎಚ್‌. ಆರ್‌. ಬಿರಾದಾರ, ಡಾ. ನೀಲಮ್ಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.