ಲೋಕದರ್ಶನ ವರದಿ
ಹಾವೇರಿ 12: ಕೇಂದ್ರದ ಹಿರಿಯ ಸಚಿವರು ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ಅನಂತ್ ಕುಮಾರ್ ಅವರ ನಿಧನಕ್ಕೆ ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ ತೀವ್ರ ಕಂಬನಿ ಮಿಡಿದಿದ್ದಾರೆ.
ಕನರ್ಾಟಕದ ಅಭಿವೃದ್ಧಿ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರದಿಂದ ಬಹುದೊಡ್ಡ ಕೊಡುಗೆಗಳು ದೊರೆಯುವಲ್ಲಿ ಅನಂತ್ಕುಮಾರ್ ಅವರ ಶ್ರಮ ಅಪಾರ.
ಅನಂತ್ಕುಮಾರ್ ಅವರು ತಮ್ಮ ವಿಶಿಷ್ಟ ಆಲೋಚನೆಗಳ ಮೂಲಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಬಹಳಷ್ಟು ಮಹತ್ತರ ಪಾತ್ರ ವಹಿಸಿದ್ದರು. ರೈತ ಸಮುದಾಯಕ್ಕೆ ಸಮರ್ಪಕವಾಗಿ ರಸಗೊಬ್ಬರಗಳು ದೊರಕುವಲ್ಲಿ ಮತ್ತು ಬಡ ಜನತೆಗೆ ಕಡಿಮೆ ದರದಲ್ಲಿ ಔಷಧಿ, ಇನ್ನಿತರೆ ಚಿಕಿತ್ಸೆಗಳನ್ನು ಪೂರೈಸುವಲ್ಲಿ ಅನಂತ್ಕುಮಾರ ಅವರು ಕೈಗೊಂಡ ಯೋಜನೆಗಳು ನಿಜಕ್ಕೂ ಪ್ರಶಂಸನೀಯ.
ರಾಷ್ಟ್ರೀಯ ಮಟ್ಟದಲ್ಲಿ ಕನರ್ಾಟಕದ ದ್ವನಿಯಾಗಿ ಅನಂತ್ಕುಮಾರ್ ಅವರು ಮಾಡಿದ ಕಾರ್ಯಗಳು ನಿಜಕ್ಕೂ ಶ್ಲಾಘನೀಯ.
ದೇಶಾದ್ಯಂತ ಪಕ್ಷದ ಜವಾಬ್ದಾರಿಗಳನ್ನು ನಿಭಾಯಿಸಿ ಪಕ್ಷದ ಸಂಘಟನೆಗೆ ಅತಿ ಹೆಚ್ಚು ಒತ್ತು ನೀಡಿದ ಅನಂತ್ಕುಮಾರ್ ಅವರ ಅಗಲಿಕೆ ಅತೀವ ದುಃಖ ತರಿಸಿದೆ ಎಂದು ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ತಮ್ಮ ಕಂಬನಿ ಮಿಡಿದಿದ್ದಾರೆ.