ಸ್ವಚ್ಛತೆ, ಅಗ್ನಿಶಾಮಕ ಸುರಕ್ಷಾ ಕ್ರಮಕ್ಕೆ ಸಚಿವರ ಸೂಚನೆ

ಗದಗ 09:  ಬೆಂಕಿ ಅನಾಹುತದಿಂದ ಹಾನಿಗೊಳಗಾದ ಗದಗ ಗ್ರೇನ ಮಾರ್ಕೆಟ ಪ್ರದೇಶದಲ್ಲಿ ಬೆಂಕಿಗೆ ಆಹಾರವಾಗುವ ಕಸ ಹಾಗೂ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಅಗ್ನಿಶಾಮಕ ವ್ಯವಸ್ಥೆ ಕಾರ್ಯ ನಿರ್ವಹಿಸುವಂತೆ ಕ್ರಮ ವಹಿಸುವುದಕ್ಕೆ ಆದ್ಯತೆ ನೀಡಲು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗಳ  ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಸೂಚನೆ ನೀಡಿದರು.

ಇಂದು ಗದಗ ಗ್ರೇನ್ ಮಾರ್ಕೆಟ್ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಅನಾಹುತ ಕುರಿತು ಪರಿಶೀಲಿಸಿ ಅವರು ವ್ಯಾಪಾರಸ್ಥರ ಅಹವಾಲು ಆಲಿಸಿದರು. ಜಿಲ್ಲಾಡಳಿತ, ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸಂತ್ರಸ್ತ ವ್ಯಾಪಾರಸ್ಥರಿಗೆ  ಗರಿಷ್ಟ ಪರಿಹಾರ ಒದಗಿಸುವ ಭರವಸೆ ನೀಡಿದರು. 

ಸುಮಾರು 64 ಅಂಗಡಿಗಳು ಬೆಂಕಿ ಅನಾಹುತಕ್ಕೆ ಒಳಗಾಗಿದ್ದು ಒಟ್ಟಾರೆ 1.20 ಕೋಟಿ ನಷ್ಟದ ಅಂದಾಜಿದೆ.                       ವಿಧಾನಪರಿಷತ ಸದಸ್ಯರಾದ ಎಸ್.ವಿ.ಸಂಕನೂರ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ. ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ,  ಗದಗ ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ಡಿ ವೈ. ಎಸ್ಪಿ,  ಎಸ್. ಕೆ. ಪ್ರಲ್ಹಾದ, ಗದಗ ತಹಶಿಲ್ದಾರ ಶ್ರೀನಿವಾಸಮೂತರ್ಿ ಕುಲಕಣರ್ಿ, ನಗರಸಭೆ ಅಭಿಯಂತರುಗಳಾದ  ಪತ್ತಾರ, ಬಂಡಿವಡ್ಡರ, ಅಲ್ಲದೇ ಅನೀಲ ಮೆಣಸಿನಕಾಯಿ, ರಾಜು ಕುರಡಗಿ, ಎಂ.ಎಂ.ಹಿರೇಮಠ, ಪ್ರಶಾಂತ ನಾಯ್ಕರ,ಗಣ್ಯರು, ಗ್ರೇನ ಮಾಕರ್ೆಟ ವ್ಯಾಪಾರಸ್ಥರು ಇದ್ದರು.