ಮೈಸೂರು, ಅ 13: ಚಾಮುಂಡಿ ಬೆಟ್ಟದ ಮೇಲೆ ಭಾನುವಾರ ನಡೆದ ವಿಜೃಂಭಣೆಯ ಚಾಮುಂಡೇಶ್ವರಿ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಇತ್ತೀಚೆಗಷ್ಟೇ ಅಂತ್ಯಗೊಂಡ ದಸರಾ ಉತ್ಸವವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ರಥೋತ್ಸವದಲ್ಲಿ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಪಾಲ್ಗೊಂಡರು.
ಮುಂಜಾನೆ ರಥೋತ್ಸವದ ವಿಧಿ ವಿಧಾನಗಳು ಆರಂಭಗೊಂಡವು. ದೇಗುಲದ ಅರ್ಚಕರು ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ, ದೇವಿಯನ್ನು ಹೊತ್ತ ರಥವನ್ನು ಭಕ್ತರು ಎಳೆದರು.
ಮೈಸೂರು ರಾಜವಂಶದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ರಥೋತ್ಸವದಲ್ಲಿ ಪಾಲ್ಗೊಂಡು ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿಯ ಉತ್ಸವವ ಮೂರ್ತಿಯನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.