ಅರಳಿಹಟ್ಟಿ ಗ್ರಾಮದಲ್ಲಿ ಹಾಲು ಸಂಗ್ರಹ ಕೇಂದ್ರ ಉದ್ಘಾಟನೆ
Milk collection center inaugurated in Aralihatti village
ಸಂಬರಗಿ 30: ಗಡಿ ಭಾಗದ ವಿವಿಧ ಗ್ರಾಮಗಳಲ್ಲಿ ಹಾಲು ಸಂಗ್ರಹ ಮಾಡುವ ಕೇಂದ್ರಗಳು ಸ್ಥಾಪನೆಯಾಗಿ ಒಳ್ಳೆಯ ಗುಣಮಟ್ಟದ ಹಾಲನ್ನು ದಿನನಿತ್ಯ 50 ಸಾವಿರ ಲೀಟರ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಾರಾಷ್ಟ್ರದ ಭಾರಾಮತಿಯ ಸಾಯ್ಬರ್ ಡೈನಾಮಿಕ್ಸ ಹಾಲಿನ ಕೇಂದ್ರಕ್ಕೆ ಹೋಗುತ್ತಿದ್ದು, ಆ ಕೇಂದ್ರದಿಂದ ಗ್ರಾಹಕರಿಗೆ ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಅರಳಿಹಟ್ಟಿ ಗ್ರಾಮದಲ್ಲಿ ಜೀವನ ಧಾರಾ ಹಾಲು ಸಂಗ್ರಹ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಅವರು ಈ ಸ್ಥಳೀಯ ಹಾಲಿನ ಕೇಂದ್ರವಾದ ನಂತರ ರೈತರಿಗೆ ತಮ್ಮ ಹಾಲನ್ನು ಸ್ಥಳೀಯ ಕೇಂದ್ರಕ್ಕೆ ಹಾಕಲು ಅನುಕೂಲವಾಗಿದೆ. ಬಡ ಕುಟುಂಬದ ರೈತರಿಗೆ ಎಮ್ಮೆ, ಆಕಳುಗಳ ಹಾಲನ್ನು ಹಾಕಲು ಅನುಕೂಲವಾಗಿದೆ. ಇದರಲ್ಲಿ ಬಂದಿರುವ ಲಾಭವನ್ನು ರೈತರು, ತಮ್ಮ ಕುಟುಂಬ, ತಮ್ಮ ಮಕ್ಕಳಿಗೆ ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಹೋಗಲು ಅನುಕೂಲವಾಗಿದೆ. ಒಳ್ಳೆಯ ದರ ಸಿಕ್ಕಿದ ಕಾರಣ ಪ್ರತಿಯೊಬ್ಬ ರೈತರ ಮನೆಯ ಎದುರಿಗೆ ಒಳ್ಳೆಯ ತಳಿಯ ಆಕಳು, ಎಮ್ಮೆಗಳು ಕಾಣುತ್ತಿವೆ. ಭವಿಷ್ಯದಲ್ಲಿ ಈ ಭಾಗದ ರೈತರು ಹಾಗೂ ಬಡಕುಟುಂಬಸ್ಥರು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತದೆ.
ಈ ವೇಳೆ ಅಥಣಿ ಶುಗರ್ಸ್ ನಿರ್ದೇಶಕರಾದ ಎನ್.ವಾಯ್.ಜಾಧವ ಇವರ ಅಮೃತ ಹಸ್ತದಿಂದ ಮಾಜಿ ಸಚಿವ ಶ್ರೀಮಂತ ಪಾಟೀಲ ರನ್ನು ಸತ್ಕರಿಸಲಾಯಿತು. ಹಾಲು ಸಂಗ್ರಹ ಕೇಂದ್ರದ ಪ್ರಮುಖರಾದ ಬಾಳು ಜಾಧವ, ಮಧಭಾವಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಕೋರೆ, ಅರಳಿಹಟ್ಟಿ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸಗೌಡ ಪಾಟೀಲ, ದಾದಾ ಶಿಂಧೆ, ಬಾಳು ಹಜಾರೆ, ತಾನಾಜಿ ಶಿಂಧೆ, ದೊಂಡಿರಾಮ ಅವಳೆಕರ, ರಮೇಶ ಅವಳೆಕರ, ಸದಾಶಿವ ಮೋರೆ, ಪ್ರತಾಪ ಇನಾಮದಾರ ಸೇರಿದಂತಹ ಗಣ್ಯರು, ಕಾರ್ಯಕರ್ತರು, ರೈತರು, ಗ್ರಾಮಸ್ಥರು ಉಪಸ್ಥಿತ ಇದ್ದರು. ಸುದೀರ ಜಾಧವ ಸ್ವಾಗತಿಸಿ ವಂದಿಸಿದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 