ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ:18 ಉಗ್ರರ ಹತ್ಯೆ

ಕಾಬೂಲ್, ಫೆ 8, ಕಳೆದ ಎರಡು ವಾರದಲ್ಲಿ ದೇಶದ  ಪೂರ್ವ ಲಘ್ಮನ್ ಪ್ರಾಂತ್ಯದಲ್ಲಿ ನಡೆಸಲಾದ ಸೇನಾ ಕಾರ್ಯಾಚರಣೆಯಲ್ಲಿ ತಾಲಿಬಾನ್ ಕಮಾಂಡರ್ ಸೇರಿದಂತೆ 18 ಉಗ್ರರು ಮೃತಪಟ್ಟಿದ್ದಾರೆ  ಎಂದೂ ಸೇನೆ  ತಿಳಿಸಿದೆ.ಪ್ರಾಂತ್ಯದ ಅಲಿಶಿಂಗ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರಲ್ಲಿ ತಾಲಿಬಾನ್ ಗುಂಪಿನ  ಕಮಾಂಡರ್ ಮುಲ್ಲಾ ಬ್ರಾಡರ್ ಕೂಡ ಸೇರಿದ್ದಾರೆ  ಎಂದೂ  ಹೇಳಿಕೆಯಲ್ಲಿ ತಿಳಿಸಲಾಗಿದೆ.ಅಲಿಶಿಂಗ್ ಜಿಲ್ಲೆಯ  ಗವರ್ನರ್ ಖಾರಿ ಮೆರಾಜುಡಿನ್ ಸೇರಿದಂತೆ 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಸೇನಾ  ಕಾರ್ಯಾಚರಣೆಗೆ ವೈಮಾನಿಕ ಪಡೆಗಳು ಸಾಥ್  ಕೊಟ್ಟಿವೆ ಪರಿಣಾಮ ಹಲವು  ಹಳ್ಳಿಗಳನ್ನು ಉಗ್ರರ ಹಾವಳಿಯಿಂದ  ಮುಕ್ತಗೊಳಿಸಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ನಾಲ್ವರು ಯೋಧರು ಸಹ  ಗಾಯಗೊಂಡಿದ್ದಾರೆ ಎಂದೂ  ತಿಳಿಸಲಾಗಿದೆ. ಕಾಬೂಲ್‌ನಿಂದ ಪೂರ್ವಕ್ಕೆ 90 ಕಿ.ಮೀ ದೂರದಲ್ಲಿರುವ ಮೆಹ್ತಾರ್ಲಾಮ್‌ನೊಂದಿಗೆ ಲಾಗ್ಮಾನ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಸಕ್ರಿಯವಾಗಿರುವ ತಾಲಿಬಾನ್ ಈ ಘಟನೆಯ ಬಗ್ಗೆ ಇದುವರೆಗೆ ಯಾವ  ಪ್ರತಿಕ್ರಿಯೆ  ನೀಡಿಲ್ಲ.