ವಾಷಿಂಗ್ಟನ್, ಜ 24 : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಶಾಂತಿ ಸ್ಥಾಪನೆಗೆ ಅಗತ್ಯವಾದ ಯೋಜನೆಗಳಲನ್ನು ಶ್ವೇತಭವನ ಮುಂದಿನ ವಾರ ಬಿಡುಗಡೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿನ ವಾರ ವಾಷಿಂಗ್ಟನ್ ಗೆ ಭೇಟಿ ನೀಡುವ ಮೊದಲು ಮಧ್ಯಪ್ರಾಚ್ಯ ಶಾಂತಿ ಯೋಜನೆಯನ್ನು ಶ್ವೇತಭವನವು ಬಿಡುಗಡೆ ಮಾಡಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ರಾಜಕೀಯ ಕಾರ್ಯಕ್ರಮಕ್ಕಾಗಿ ಮಿಯಾಮಿಗೆ ಹೋಗುವ ಮಾರ್ಗದಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ಯಾಲೆಸ್ಟೀನಿಯಾದವರು ಮೊದಲಿಗೆ ತಮ್ಮ ಯೋಜನೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದು, ಆದರೆ ಅದು ಅವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.
ಮಂಗಳವಾರ ಶ್ವೇತಭವನದಲ್ಲಿ ನೆತನ್ಯಾಹು ಅವರನ್ನು ಭೇಟಿಯಾಗಲಿರುವ ಟ್ರಂಪ್, ಇದು ಒಂದು ದೊಡ್ಡ ಯೋಜನೆಯಾಗಿದ್ದು, ನಿಜವಾಗಿಯೂ ಫಲಪ್ರದವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.