ಪಾಕ್ ಕ್ರಿಕೆಟ್ ತಂಡದ ತರಬೇತುದಾರ ಮಿಕ್ಕಿ ಆರ್ಥರ್ ಹೊರಕ್ಕೆ

  ಇಸ್ಲಾಮಾಬಾದ್, ಆಗಸ್ಟ್ 7  ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2019 ನಲ್ಲಿ ಪಾಕ್ ತಂಡ ಐದನೇ ಸ್ಥಾನಗಳಿಸಿ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತಂಡದ ಮುಖ್ಯ ತರಬೇತುದಾರ ಮಿಕ್ಕಿ ಆರ್ಥರ್ ಮತ್ತು ಅವರ ಸಹಾಯಕ ಸಿಬ್ಬಂದಿಯ ಗುತ್ತಿಗೆ ಅವಧಿಯನ್ನು ನವೀಕರಣಗೊಳಿಸದಿರಲು ನಿರ್ಧರಿಸಿದೆ.  

  ಮುಖ್ಯ ತರಬೇತುದಾರ ಮಿಕ್ಕಿ ಆರ್ಥರ್, ಬೌಲಿಂಗ್ ತರಬೇತುದಾರ ಅಜರ್ ಮಹಮದ್ ಹಾಗೂ ಬ್ಯಾಟಿಂಗ್ ತರಬೇತುದಾರ ಗ್ರಾಂಟ್ ಫ್ಲವರ್ ಅವರೊಂದಿಗೆ ಸಂಬಂಧ ಕೊನೆಗೊಂಡಿದೆ ಎಂದು ಮಂಗಳವಾರ ಮಂಡಳಿ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.  

 ಸೆಮಿಫೈನಲ್ ತಲುಪಲು ಪಾಕಿಸ್ತಾನ ವಿಫಲವಾದ ಹಿನ್ನೆಲೆಯಲ್ಲಿ ನಡೆಸಲಾದ ಪರಮಾರ್ಶೆ ಪ್ರಕ್ರಿಯೆಗಳ ನಂತರ ಈ ನಿರ್ದಾರ ತೆಗೆದುಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ವರದಿ ತಿಳಿಸಿದೆ. 

 ಶುಕ್ರವಾರ ಸಭೆ ಸೇರಿದ್ದ  ಪಿಸಿಬಿ ಕ್ರಿಕೆಟ್ ಸಮಿತಿ ತರಬೇತುದಾರರನ್ನು ಬದಲಾಯಿಸುವ ತೀರ್ಮಾನವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ. ಸಭೆಯ ಶಿಫಾರಸುಗಳನ್ನು ಪಿಸಿಬಿ ಅಧ್ಯಕ್ಷ ಇಷಾನ್ ಮನಿ ಅವರಿಗೆ ಕಳುಹಿಸಿ, ಅವರೊಂದಿಗೆ ಚಚರ್ಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.